July 25, 2021

ಇಬ್ಬರು ಮಕ್ಕಳನ್ನು ಬಲಿ ತೆಗೆದುಕೊಂಡ ಬಣ್ಣದ ಹಬ್ಬ: ಹೋಳಿ ಆಡಿ ಸ್ನಾನಕ್ಕೆಂದು ಹೋದಾಗ ನದಿಯಲ್ಲಿ ಮುಳುಗಿ ಸಾವು..!

ಹೋಳಿ ಹಬ್ಬದ ಬಣ್ಣದಾಟದ ನಂತರ ನದಿಗೆ ಸ್ನಾನಕ್ಕೆಂದು ತೆರಳಿದ್ದ ವೇಳೆ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಓರ್ವ ಬಾಲಕ ತೀವ್ರ ಅಸ್ವಸ್ಥಗೊಂಡ ಘಟನೆ ಹಾವೇರಿ ತಾಲೂಕಿನ ನಾಗನೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬಳಿ ಇರುವ ವರದಾ ನದಿಯಲ್ಲಿ ಈ ದುರ್ಘಟನೆ ನಡೆದಿದೆ. ಮೃತ ಬಾಲಕರನ್ನ ಮಹೇಶ ಮುರಡಣ್ಣನವರ 10 ವರ್ಷ ಮತ್ತು ವೀರೇಶ ಅಕ್ಕಿವಳ್ಳಿ 10 ವರ್ಷ ಎಂದು ಗುರುತಿಸಲಾಗಿದೆ. ಇನ್ನು ಯೋಗೇಶ ಎಂಬ 7 ವರ್ಷದ ಬಾಲಕ ತೀವ್ರ ಅಸ್ವಸ್ಥಗೊಂಡಿದ್ದಾನೆ.

ತೀವ್ರ ಅಸ್ವಸ್ಥಗೊಂಡಿರುವ ಯೋಗೇಶನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಇಬ್ಬರು ಬಾಲಕರ ಮೃತದೇಹಗಳನ್ನು ವರದಾ ನದಿಯಿಂದ ಸ್ಥಳೀಯರು ಹೊರತೆಗೆದಿದ್ದಾರೆ. ಹೋಳಿ ಹಬ್ಬ ಮುಗಿಸಿ ಸ್ನಾನ ಮಾಡಲು ಹೋಗಿದ್ದ ಸ್ನೇಹಿತರಿಬ್ಬರು ಮೃತಪಟ್ಟಿದ್ದಾರೆ‌. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share this News
error: Content is protected !!