ಹಾವೇರಿ- ಜಿಲ್ಲೆಯ ಹಲವೆಡೆ ಇವತ್ತು ಧಾರಾಕಾರ ಮಳೆಯಾಗಿದೆ. ರಟ್ಟೀಹಳ್ಳಿ ತಾಲೂಕಿನ ಖಂಡೇಬಾಗೂರು ಗ್ರಾಮದಲ್ಲಿ ಬಿರುಗಾಳಿ ಸಮೇತ ಮಳೆಗೆ 30 ಕ್ಕೂ ಅಧಿಕ ಗುಡಿಸಲು ಹಾಗೂ ತಗಡಿನ ಶೆಡ್ಡಿನ ಮೇಲ್ಛಾವಣಿಗಳು ಹಾರಿ ಹೋಗಿವೆ.
ಇನ್ನು ಹಿರೇಕೆರೂರು ಪಟ್ಟಣ ಮತ್ತು ಭೋಗಾವಿ ಗ್ರಾಮದಲ್ಲೂ ಧಾರಾಕಾರ ಮಳೆಯಾಗಿದೆ. 30 ಕ್ಕೂ ಅಧಿಕ ಗುಡಿಸಲು ಹಾಗೂ ಶೆಡ್ಡಿನ ಮೇಲ್ಛಾವಣಿಗಳು ಹಾರಿ ಹೋಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಮೇಲ್ಛಾವಣಿ ಹಾರಿ ಹೋಗಿದ್ದರಿಂದ ದಿಕ್ಕು ತೋಚದಂತೆ ಕುಟುಂಬ ಸದಸ್ಯರು ಕುಳಿತಿದ್ದಾರೆ. ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ 30 ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ, ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
_______
More Stories
ಜನತಾ ಕರ್ಫ್ಯೂ ಪಾಲನೆ ಮಾಡಿ, ಕೋವಿಡ್ ಚಿಕಿತ್ಸೆಗೆ ನ್ಯೂನ್ಯತೆಯಾಗದಂತೆ ಮುನ್ನೆಚ್ಚರಿಕೆ: ಶಿಗ್ಗಾಂವ-ಸವಣೂರ ಆಸ್ಪತ್ರೆಗೆ ಡಿಸಿ ಭೇಟಿ ಪರಿಶೀಲನೆ..!
ಕೊರೋನಾ ಎರಡನೇಯ ಅಲೆಯ ಭಯ: ಮಾನವೀಯತೆ ಮರೆತ ಜನ, ಅನಾಥವಾಗಿ ಬಿದ್ದ ಬಿಕ್ಷುಕನ ಶವ..!
ಕೊರೋನಾ ನಿಯಮ ಬ್ರೇಕ್: 35 ಮಂದಿ ರೈತರ ಮೇಲೆ ಎಫ್.ಐ.ಆರ್.ದಾಖಲು..!