July 25, 2021

ಹಗೆ ಸ್ವಚ್ಛ ಮಾಡಲು ಇಳಿದಿದ್ದ ವ್ಯಕ್ತಿ ಸಾವು, ಇಬ್ಬರ ಸ್ಥಿತಿ ಗಂಬೀರ: ಘಟನಾ ಸ್ಥಳಕ್ಕೆ ಎಎಸ್ಪಿ ಬೇಟಿ..!

ಹಾವೇರಿ- ಧಾನ್ಯ ಸಂಗ್ರಹಗಾರ(ಹಗೆ) ಸ್ವಚ್ಛಗೊಳಿಸಲು ಇಳಿದಿದ್ದ ಮೂವರ ಪೈಕಿ ಓರ್ವ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ನಡೆದಿದೆ. ಹಾವೇರಿ ತಾಲೂಕಿನ ನೆಗಳೂರು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಹೊನ್ನಪ್ಪ ಜಾಲಣ್ಣನವರ(45) ಮೃತಪಟ್ಟಿರುವ ದುರ್ದೈವಿ. ಗ್ರಾಮದ ಬಸವರಾಜ ದಡ್ಡಿ ಎಂಬುವರಿಗೆ ಸೇರಿದ್ದ ಧಾನ್ಯ ಸಂಗ್ರಹಗಾರ(ಹಗೆ)ವನ್ನು ಸ್ವಚ್ಛಗೊಳಿಸಲು ಹಗೆಯ ಒಳಗೆ ಕೂಲಿ ಕಾರ್ಮಿಕ ಹೊನ್ನಪ್ಪ ಇಳಿದಿದ್ದ ಎನ್ನಲಾಗಿದೆ.

18 ಅಡಿ ಆಳದ ಸಂಗ್ರಹಗಾರದಲ್ಲಿ ಇಳಿದಿದ್ದ ಮೃತ ಹೊನ್ನಪ್ಪ, ಆಮ್ಲಜನಕದ ಕೊರತೆಯಿಂದ ಒಳಗೆ ಉಸಿರುಗಟ್ಟಿದಾಗ ತನ್ನನ್ನು ಮೇಲೆ ಎಳೆಯುವಂತೆ ಕೂಗಿಕೊಂಡಿದ್ದಾನೆ. ತಕ್ಷಣವೇ ಹೊನ್ನಪ್ಪನನ್ನು ಮೇಲೆಕೆತ್ತಲು ಬಸವರಾಜ್ ಮತ್ತು ವಾಸಪ್ಪ ಪೂಜಾರ ಪ್ರಯತ್ನಿಸಿದ್ದಾರೆ. ಹರಸಾಹಸ ಪಟ್ಟು ಹೊನ್ನಪ್ಪನನ್ನು ಮೇಲಕ್ಕೆ ಎತ್ತಿದ ಇವರಿಗೂ ಕೂಡ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

ತಕ್ಷಣ ಸ್ಥಳೀಯರು ಈ ಮೂವರನ್ನು ಚಿಕಿತ್ಸೆಗಾಗಿ ಗುತ್ತಲದ ಆಸ್ಪತ್ರೆಗೆ ಕರೆತಂದಿದ್ದಾರೆ ಆದರೆ ಚಿಕಿತ್ಸೆ ಫಲಿಸದೆ ಹೊನ್ನಪ್ಪ ಸಾವು‌ ಕಂಡಿದ್ದಾನೆ. ಚಿಂತಾಜನಕ ಸ್ಥಿತಿಯಲ್ಲಿರುವ ವಾಸಪ್ಪ ಪುಜಾರ ಮತ್ತು ಬಸವರಾಜ ದಡ್ಡಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೀಮ್ಸಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳದಲ್ಲಿ ಮೃತ ಹೊನ್ನಪ್ಪನ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ‌ ಮಲ್ಲಿಕಾರ್ಜುನ ಬಾಲದಂಡಿ‌ ರವರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ಗುತ್ತಲ ಪೋಲಿಸ್ ಠಾಣೆ ವ್ಯಾಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share this News
error: Content is protected !!