April 22, 2021

ಮದುವೆಯಾದ ಮೊದಲ ರಾತ್ರಿಯೇ ಪೊಲೀಸ ಠಾಣೆಯ ಮೆಟ್ಟಿಲೇರಿದ ಬಿಗ್ ಬಾಸ್ ಹುಡುಗಿ..!

ಕೋಲಾರ- ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟೂರು ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಬೆಳಿಗ್ಗೆಯಷ್ಟೆ ಸರಳ‌ ಮದುವೆಯ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಚೈತ್ರಾ ಕೊಟೂರು ಬಾಳಿನಲ್ಲಿ‌ ಬಿರುಗಾಳಿ ಎದ್ದಿದೆ. ಮೊದಲ ರಾತ್ರಿಯೇ ಗಂಡ ಹೆಂಡತಿರಿಬ್ಬರೂ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ.

ಇಂದು ಬೆಳಿಗ್ಗೆ ಬೆಂಗಳೂರಿನ ಬ್ಯಾಟರಾಯನಪುರದ ಗಣಪತಿ ದೇವಸ್ಥಾನದಲ್ಲಿ ಚೈತ್ರಾ ಕೊಟೂರು ಸದ್ದು ಗದ್ದಲವಿಲ್ಲದೆ ನಾಗಾರ್ಜುನ ಎಂಬುವವರೊಂದಿಗೆ ಮದುವೆಯಾಗಿದ್ದರು. ವಿವಾಹದ ಸಂತೋಷದಲ್ಲಿ ಇರಬೇಕಾದವರು ವಿವಾದ ಮಾಡಿಕೊಂಡು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಚೈತ್ರಾ ನನಗೆ ಬೇಡ ಎಂದು ಗಂಡ ನಾಗಾರ್ಜುನ ಹೇಳಿದರೆ, ಚೈತ್ರಾ ಕೊಟೂರು ಮಾತ್ರ ನನಗೆ ನಾಗಾರ್ಜುನನೇ ಬೇಕು ಅಂತಾ ಹಠ ಹಿಡಿದಿದ್ದಾರೆ.

ನಾಗಾರ್ಜುನ ಎಂಬುವವರಿಗೆ ಚೈತ್ರಾ ಕೊಟೂರು ಇಷ್ಟವಿರಲಿಲ್ಲ. ಆದರೂ ಸಂಘಟನೆಗಳ ಒತ್ತಾಯಕ್ಕೆ ಮಣಿದು ಚೈತ್ರಾ ಕೊಟೂರು ಜೊತೆ ಮದುವೆ ಆಗಿದ್ದಾರಂತೆ. ಬಲವಂತದಿಂದ ದೇವಸ್ಥಾನದಲ್ಲಿ ತಾಳಿ ಕಟ್ಟಿಸಲಾಗಿದೆಯಂತೆ. ಹೀಗಂತಾ ನಾಗಾರ್ಜುನರ ಮನೆಯವರು ಚೈತ್ರಾ ಕೊಟೂರುರವರ ಮನೆಗೆ ಬಂದು ಜಗಳ ಮಾಡಿದ್ದಾರೆ.
ನಾಗಾರ್ಜುನ ಮನೆಯವರು ಕೋಲಾರದ ಮಹಿಳಾ ಠಾಣೆಯಲ್ಲಿ ಕೇಸು ದಾಖಲಿಸಿದ್ದು, ಸಂಜೆ ಪೊಲೀಸ್ ರು ಇಬ್ಬರನ್ನು ಠಾಣೆಗೆ ಕರೆಸಿದ್ದಾರೆ. ಚೈತ್ರಾ ಕೊಟೂರು ನನಗೆ ಇಷ್ಟವಿಲ್ಲವೆಂದು ನಾಗಾರ್ಜುನ ಈ ವೇಳೆ ಕ್ಯಾತೆ ತೆಗಿದಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೆ ಒಪ್ಪದ ಚೈತ್ರಾ ಕೊಟೂರು, ನನಗೆ ನಾಗಾರ್ಜುನ ಬೇಕೆ ಬೇಕು ನಾನು ಅವರ ಜೊತೆನೆ ಇರುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಕೋಲಾರ ಮೂಲದ ಚೈತ್ರಾ ಕೊಟೂರು ಬಿಗ್ಬಾಸ್ 7ರಲ್ಲಿ ಭಾಗವಹಿಸಿದ್ದರು. ಮಂಡ್ಯ ಮೂಲದ ನಾಗಾರ್ಜುನರ ಜೊತೆಗೆ ಪ್ರೀತಿ ಹೊಂದಿದ್ದರು. ಇವರಿಬ್ಬರೂ ಮದುವೆಯನ್ನು ಆಗಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!