July 25, 2021

ಹಲಗೆ ಸೌಂಡ ಜೋರು ಇದ್ದಾಗಲೇ ಮನೆ ಮುರಿದ ಕಳ್ಳರು: ಕದ್ದಿದ್ದು ಬರೊಬ್ಬರಿ 400ಗ್ರಾಂ ಬಂಗಾರ ಮತ್ತು 8 ಕೆ.ಜಿ ಬೆಳ್ಳಿ..!

ಹಾವೇರಿ- ರಾತ್ರಿ ಹಲಗೆ ಸದ್ದು ಜೋರಾಗಿದ್ದಾಗಲೇ ಬೀಗ ಹಾಕಿದ್ದ ಮನೆಯಲ್ಲಿ ಖದೀಮರು ತಮ್ಮ ಕೈಚಳಕ ತೋರಿಸಿದ ಘಟನೆ ಹಾವೇರಿ ಯಾಲಕ್ಕಿ ಓಣಿಯಲ್ಲಿ ನಡೆದಿದೆ. ಯಾಲಕ್ಕಿ ಓಣಿಯ ಬಟ್ಟೆಯ ವ್ಯಾಪಾರಿ ರವಿ ಜೈನ ಎಂಬುವರ ಮನೆಯನ್ನು ಕಳ್ಳತನ ಮಾಡಲಾಗಿದೆ. ಮನೆಯ ಬೀಗ ಮುರಿದಿರುವ ಕಳ್ಳರು, ಟ್ರಜ್ಯೂರಿಯಲ್ಲಿದ್ದ 400 ಗ್ರಾಂಗೂ ಅಧಿಕ ಚಿನ್ನಾಭರಣ ಮತ್ತು 8 ಕೆ.ಜಿ ತೂಕದ ಬೆಳ್ಳಿಯ ಆಭರಣಗಳನ್ನ ಕದ್ದುಕೊಂಡು ಪರಾರಿ ಆಗಿದ್ದಾರೆ. ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ವಿವಿಧ ಹುದ್ದೆಗಳಿಗೆ ಸರಕಾರ ಹೊರಡಿಸಿರುವ ನೇಮಕಾತಿ ಆದೇಶ ನೋಡಲು ಇಲ್ಲಿ click ಮಾಡಿ

 

ಮೊನ್ನೆ ರಾತ್ರಿಯಿಡಿ ಅಲ್ಲಿನ ಜನರು ಹೋಳಿ ಹಬ್ಬದ ಪ್ರಯುಕ್ತ ಹಲಗೆ ಬಾರಿಸುತ್ತಾ, ಕಾಮದಹನ ಅದು ಇದು ಅಂತಾ ಹೋಳಿ ಹಬ್ಬದ ಸಂಭ್ರಮದಲ್ಲಿದ್ದರು. ಬಟ್ಟೆ ವ್ಯಾಪರಿ ರವಿ ತಮ್ಮ ಪತ್ನಿಯ ಅನಾರೋಗ್ಯದ ನಿಮಿತ್ಯ ಮೊನ್ನೆ ಮನೆಗೆ ಬೀಗ ಹಾಕಿ ದಾವಣಗೆರೆಗೆ ತೆರಳಿದ್ದರು. ಸಿಕ್ಕಿದ್ದೆ ಚಾನ್ಸು ಅಂತಾ ಅಂದ್ಕೊಂಡು ಓಣಿಯಲ್ಲಿ ಹಲಗೆ ಸದ್ದು ಜೋರಾಗಿದ್ದಾಗ್ಲೆ ಖದೀಮರು ಬೀಗ ಹಾಕಿದ್ದ ವ್ಯಾಪಾರಿ ರವಿ ಜೈನರ ಮನೆಯಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಇವತ್ತು ಸಂಜೆ ರವಿಯವರು ಮನೆಗೆ ಬಂದಾಗ ಮನೆ ಕಳ್ಳತನವಾಗಿದ್ದು ಗಮನಕ್ಕೆ ಬಂದಿದೆ.

ಬಟ್ಟೆ ವ್ಯಾಪಾರಿಯಾಗಿರುವ ರವಿ ಜೈನ್ ನಗರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಸ್ಥಳಕ್ಕೆ ದಾವಿಸಿದ ನಗರಠಾಣೆ ಪಿಎಸ್ಐ ಹೊಸಮನಿ ಹಾಗೂ ಪೊಲೀಸ್ ಸಿಬ್ಬಂದಿ, ಬೆರಳಚ್ಚು ತಜ್ಞರು, ಶ್ವಾನದಳದವರು ಪರಿಶೀಲನೆ‌ ನಡೆಸಿದ್ದಾರೆ.

 

_______

Share this News
error: Content is protected !!