April 22, 2021

ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು..!

ಹಾವೇರಿ- ಇತ್ತಿಚಿಗೆ ಜಿಲ್ಲೆಯಲ್ಲಿ ಚಿರತೆಗಳ ಕಾಟ ಹೆಚ್ಚಾಗುತ್ತಿದೆ. ಚಿರತೆ ಅಲ್ಲಿ ಬಂತು, ಇಲ್ಲಿ‌‌ ಬಂತು ಅಂತಾ “ಚಿರತೆ ಬಂತು ಚಿರತೆ” ಸರಣಿ ಕಥೆಗಳ ಸುದ್ದಿ ಗ್ರಾಮೀಣ ಭಾಗದ ಪ್ರದೇಶದಲ್ಲಿ ಪ್ರತಿದಿನ ಕೇಳೆ ಕೇಳುತ್ತಿದ್ದೇವೆ.

ಅದೆ ರೀತಿ ಚಿರತೆ ಇದೆ ಅಂತಾ ಪಸರು ಹಬ್ಬಿದ್ದ ಭಾಗದಲ್ಲಿ ಇವತ್ತು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆಯೊಂದು ಬಿದ್ದಿದೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಅರಳೀಕಟ್ಟಿ ಗ್ರಾಮದ ಬಳಿ ಇರುವ ಗುಡ್ಡದಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ.

SSLC ಪಾಸಾದವರಿಗೆ ರೇಲ್ವೆ ಇಲಾಖೆಯಲ್ಲಿ ಉದ್ಯೋಗವಕಾಶ..! Notification ಮಾಹಿತಿ ನೋಡಲು click ಮಾಡಿ

ಕಳೆದ ಕೆಲವು ದಿನಗಳಿಂದ ಗ್ರಾಮದ ಸುತ್ತಮುತ್ತಲಿನ ರೈತರ ಜಮೀನಿನಲ್ಲಿ ಚಿರತೆ ಓಡಾಡಿಕೊಂಡಿತ್ತು. ಇದರಿಂದ ರೈತರು ಹಾಗೂ ಗ್ರಾಮದ ಜನರು ಕತ್ತಲಾಗುತ್ತಿದ್ದಂತೆ ಮನೆ ಸೇರಿಕೊಳ್ಳುತ್ತಿದ್ದರು.

ಅರಣ್ಯ ಇಲಾಖೆ ಎರಡು ವರ್ಷದ ಗಂಡು ಚಿರತೆಯನ್ನು ಬೋನಿಗೆ ಬಿಳಿಸುವಲ್ಲಿ‌ ಸಫಲವಾಗಿದೆ. ಸಹಜವಾಗಿ ಚಿರತೆ ಬೋನಿಗೆ ಬಿದ್ದಿದ್ದರಿಂದ ಅರಳೀಕಟ್ಟಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಅರಣ್ಯಕ್ಕೆ ಬಿಡಲು ವಶಕ್ಕೆ ತೆಗೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಈಗ ಗ್ರಾಮದ ಜನರು ನೆಮ‌್ಮದಿಯಿಂದ ಗ್ರಾಮದಲ್ಲಿ, ಜಮೀನುಗಳಿಗೆ ತಿರುಗಾಡುವಂತಾಗಿದೆ.

 

_____

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!