July 25, 2021

ಮಾಧ್ಯಮದಲ್ಲಿ ಸರಿಗನ್ನಡ ಬಳಕೆ: ಅಭಿಯಾನಕ್ಕೆ ಹಾವೇರಿಯಲ್ಲಿ ಚಾಲನೆ..!

ಹಾವೇರಿ: ವಾರ್ತಾ ಇಲಾಖೆ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಾವೇರಿ ಸಹಯೋಗ ದೊಂದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಕಾಯಕ ವರ್ಷಾಚರಣೆಯ ಅಂಗವಾಗಿ ‘ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ’ ಕುರಿತು ನಡೆಸುತ್ತಿರುವ ಅಭಿಯಾನಕ್ಕೆ ಇಂದು ಹಾವೇರಿಯ ವಾರ್ತಾ ಇಲಾಖೆಯಲ್ಲಿ ಚಾಲನೆ ನೀಡಲಾಯಿತು.

ಜಿಲ್ಲಾ ವಾರ್ತಾಧಿಕಾರಿ ಡಾ. ರಂಗನಾಥ ಕುಳಗಟ್ಟೆ, ಕನ್ನಡ ಜಾಗೃತ ಸಮಿತಿ ಸದಸ್ಯರಾದ ಅಶೋಕ ಹಳ್ಳಿಯವರ, ಚಂದ್ರಪ್ಪ ಬಾರಂಗಿ, ಪ್ರಭು ನಿಂಬಕ್ಕನವರ, ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಕುರುವತ್ತೇರ, ರಾಜ್ಯ ಸಮಿತಿ ಸದಸ್ಯರಾದ ನಿಂಗಪ್ಪ ಚಾವಡಿ, ಪತ್ರಕರ್ತರಾದ ಸಿದ್ದು ಆರ್.ಜಿ. ಹಳ್ಳಿ, ವಿರೇಶ ಮಡ್ಲೂರ, ತೇಜಶ್ವಿನಿ ಕಾಶೆಟ್ಟಿ, ಬಾಬು ನಂದಿಹಳ್ಳಿ, ಬಾಬುರಾವ್ ಹುದ್ದಾರ ಇತರರಿದ್ದರು.

Share this News
error: Content is protected !!