Government Scheme govt. scheme.

ಉಚಿತ ಬೋರ್ ವೆಲ್ ಗಾಗಿ ಅರ್ಜಿ ಸಲ್ಲಿಸಿ

ಉಚಿತ ಬೋರ್ ವೆಲ್ ಗಾಗಿ ಅರ್ಜಿ ಸಲ್ಲಿಸಿ

ಆತ್ಮೀಯ ಸಹೋದರರೆ ನೀರಿನ ಮಹತ್ವ ಕೃಷಿಯಲ್ಲಿ ಬಹಳ ಇದೆ ಹಾಗಾಗಿ ವ್ಯವಸಾಯಕ್ಕೆ ಬೇಕಾದ ನೀರನ್ನು ಕೃಷಿ ಭೂಮಿಗೆ ಒದಗಿಸಲು ರೈತ ಹಲವು ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಕೃಷಿ ಭೂಮಿಯ ಹತ್ತಿರದಲ್ಲಿ ಯಾವುದೇ ನೀರಿನ ಕಾಲುವೆಗಳಿದ್ದರೆ ಕಾಲುವೆಗಳ ಮೂಲಕ ಕೃಷಿ ಭೂಮಿಗೆ ನೀರಿನ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು. ಅಥವಾ ಜಮೀನಿನ ಪಕ್ಕದಲ್ಲಿ ಕಟ್ಟೆಗಳು ಕೆರೆಗಳು ಇದ್ದರೆ ಅವುಗಳಿಂದ ನೀರಿನ ವ್ಯವಸ್ಥೆ ಮಾಡಿಕೊಳ್ಳಬಹುದು.

ಕಾಲುವೆಗಳು ಅಥವಾ ನದಿಗಳು ಹಾಗೂ ಕೆರೆಕಟ್ಟೆಗಳು ಇಲ್ಲದ ಸ್ಥಳಗಳಲ್ಲಿ ಕೃಷಿ ಭೂಮಿಗೆ ನೀರಿನ ವ್ಯವಸ್ಥೆ ಮಾಡಲು ಕೊಳವೆ ಬಾವಿಯನ್ನು ಅಂದರೆ ಬೋರ್ವೆಲ್ ಅನ್ನು ಕೊರೆಯುವ ಮೂಲಕ ಕೃಷಿ ಭೂಮಿಗೆ ನೀರನ್ನು ಒದಗಿಸಲು ರೈತ ಮುಂದಾಗುತ್ತಾನೆ. ಬೋರ್ ವೆಲ್ ಕೊರಸಲು ರೈತನಿಗೆ ಬಹಳ ಹಣ ಖರ್ಚಾಗುತ್ತದೆ. ಕೆಲವೊಮ್ಮೆ ಕೆಲವೊಂದು ಬೋರ್ವೆಲ್ ಗಳಲ್ಲಿ ನೀರು ಬರುವುದಿಲ್ಲ. ಬೋರ್ ವೆಲ್ ಕೊರಸುವುದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಒಂದು ಕಷ್ಟವಾದ ವಿಷಯವಾಗಿದೆ.

ಇದನ್ನರಿತ ಸರ್ಕಾರವು ಹಲವು ಅಭಿವೃದ್ಧಿ ನಿಗಮಗಳಿಗೆ ಬೋರ್ವೆಲ್ ಕೊರೆಸಲು ಸಹಾಯಧನವನ್ನು ನೀಡುವಂತೆ ಅಭಿವೃದ್ಧಿ ನಿಗಮಗಳಿಗೆ ತಿಳಿಸಿದೆ.

ಪ್ರಸ್ತುತ ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್ವೆಲ್ ಕೊರೆಸಲು ಸಹಾಯಧನವನ್ನು ನೀಡಲು ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಡೆಯಿಂದ ಅರ್ಜ್ಜಿಯನ್ನು ಆಹ್ವಾನ ಮಾಡಲಾಗಿದೆ.

ಹಿಂದುಳಿದ ವರ್ಗದ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಯ ಉಪಯೋಗ ಪಡೆದುಕೊಳ್ಳಬೇಕಾದರೆ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಈ ಕೆಳಗಿನ ಲಿಂಕ್ ಮೂಲಕ ನೀವು ಅರ್ಜಿಯನ್ನು ಆನ್ಲೈನಲ್ಲಿ ಸಲ್ಲಿಸಬಹುದು.

Click here

ಅರ್ಜಿದಾರನಿಗೆ ಇರಬೇಕಾದ ಅರ್ಹತೆಗಳು

  • ಹಿಂದುಳಿದ ವರ್ಗದ ಸಣ್ಣ ಅಥವಾ ಅತಿ ಸಣ್ಣ ರೈತನಾಗಿ ಇರಬೇಕು

  • ಕರ್ನಾಟಕ ರಾಜ್ಯದವನಾಗಿರಬೇಕು

  • ಅರ್ಜಿದಾರರು 18 ರಿಂದ 60 ವರ್ಷದ ಒಳಗಿರಬೇಕು

  • ಅರ್ಜಿದಾರರನ್ನು ಒಂದೇ ಸ್ಥಳದಲ್ಲಿ ಎರಡು ಎಕರೆಯಷ್ಟು ಭೂಮಿಯನ್ನು ಹೊಂದಿರಬೇಕು

  • ಅರ್ಜಿದಾರರ ವಾರ್ಷಿಕ ಆದಾಯ ಹಳ್ಳಿಯವನಾಗಿದ್ದರೆ 98,000 ದೊಳಗಿರಬೇಕು ಪಟ್ಟಣದವರಾದರೆ 120000 ರೂಗಳ ಒಳಗೆ ಇರಬೇಕು.

  • ಅರ್ಜಿದಾರ ನಿಗಮದ ಅಡಿಯಲ್ಲಿ ಯಾವುದೇ ಸೌಲಭ್ಯವನ್ನು ಪಡೆದಿರಬಾರದು

  • ಅರ್ಜಿದಾರನ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಆಧಾರ್ ಕಾರ್ಡ್ ನೊಂದಿಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು ಆ ನಂಬರ್ ಬ್ಯಾಂಕ್ ಅಕೌಂಟ್ ನಂದಿಗೆ ಲಿಂಕ್ ಆಗಿರಬೇಕು.

ದಾಖಲಾತಿಗಳು

  • ಅರ್ಜಿದಾರನ ಆಧಾರ್ ಕಾರ್ಡ್

  • ಅರ್ಜಿದಾರನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ

  • ಅರ್ಜಿದಾರನ ಪಾಸ್ ಪೋರ್ಟ್ ಅಳತೆಯ ಫೋಟೋಗಳು

  • ಅರ್ಜಿದಾರನ ಭೂ ಹಿಡುವಳಿ

  • ಅರ್ಜಿದಾರನ ಕುಟುಂಬದ ಪಡಿತರ ಚೀಟಿ

  • ಅರ್ಜಿದಾರ ಜಮೀನಿನ ಪಹಣಿ

  • ಅರ್ಜಿದಾರನ ವಾಸಸ್ಥಳ ದೃಢೀಕರಣ ಪತ್ರ

ಈ ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ರೈತನ ಅರ್ಜಿ ಸಲ್ಲಿಸಲು ಇಚ್ಛೆ ಇದ್ದರೆ ತಮ್ಮ ಹತ್ತಿರದ ಗ ಸೇವಾ ಸಿಂಧು ಫೋರ್ಟಲ್ನಲ್ಲಿ ನಿಮ್ಮ ಹತ್ತಿರೆದ ಗ್ರಾಮ ಒನ್ ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಈ ಮೇಲಿನ ಎಲ್ಲ ದಾಖಲೆಗಳನ್ನು ಉಪಯೋಗಿಸಿಕೊಂಡು ಅರ್ಜಿ ಸಲ್ಲಿಸಿ.

ಈ ಯೋಜನೆ ಕುರಿತ ಎಚ್ಚರ ಮಾಹಿತಿಗಾಗಿ ಈ ಕೆಳಗೆ ನೀಡಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿದುಕೊಳ್ಳಬಹುದು.

08182-229634

LEAVE A RESPONSE

Your email address will not be published. Required fields are marked *