Government Scheme ಕೃಷಿಹೊಂಡ ತುಂತುರು ನೀರಾವರಿ ಹನಿ ನೀರಾವರಿ

ಕೃಷಿಹೊಂಡ, ಹನಿ ನೀರಾವರಿ, ತುಂತುರು ನೀರಾವರಿಗೆ 90% ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನ

ತೋಟಗಾರಿಕೆ ಇಲಾಖೆಯಲ್ಲಿ 2022-23ನೇ  ಸಾಲಿನಲ್ಲಿ ಪಿ.ಎಂ.ಕೆ.ಎಸ್.ವೈ(PMKSY) ಯೋಜನೆಯಡಿಯಲ್ಲಿ ಹನಿ ನೀರಾವರಿ(Drip irrigation) ತುಂತುರು ನೀರಾವರಿ(Sprinkler irrigation), ಕೃಷಿ ಹೊಂಡ (Agricultural pit) ಸೇರಿದಂತೆ ಇನ್ನಿತರ ಚಟುವಟಿಕೆಗೆ ಸಹಾಯಧನ (Subsidy) ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಪ್ರತಿ ವರ್ಷದಂತೆ ಈ ವರ್ಷವೂ ಸಹ ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಯಗಳಡಿಯಲ್ಲಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕು ಹಾಗೂ ಚಾಮರಾಜಗನರ ಜಿಲ್ಲೆಯ ತೋಟಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನಸಲಾಗಿದೆ. ಅರ್ಜಿ ಸಲ್ಲಿಸಲು  ಡಿಸೆಂಬರ್ 26 ಕೊನೆಯ ದಿನವಾಗಿದೆ. ಅರ್ಜಿಗಳನ್ನು ಡಿಸೆಂಬಸ 19 ರಿಂದ 26 ರವರೆಗೆ ಸ್ವೀಕರಿಸಲಾಗುವುದು.

2022-23ನೇ ಸಾಲಿನಲ್ಲಿ ಪಿಎಂಕೆಎಸ್ವೈ ಯೋಜನೆಯಡಿ  ಹನಿ ನೀರಾವರಿ, ತುಂತುರು ನೀರಾವರಿಗೆ ಸಹಾಯಧನ ನೀಡಲಾಗುವುದು. ತಾಳೆ ಬೆಳೆ ಅಭಿವೃದ್ಧಿಗೆ ಸಹಾಯಧನ ನೀಡಲಾಗುವುದು. ಇದರೊಂದಿಗೆ ಆರ್.ಕೆ.ವಿವೈ ಯೋಜನೆಯಡಿ ಸೋಲಾರ್ ಟನಾಲ್ ಡ್ರೈಯರ್ ಹಾಗೂ ಸಹಾಯಧನ ನೀಡಲಾಗುವುದು. ಜಿಲ್ಲಾವಲಯ ಯೋಜನೆಯಡಿ ಜೇನು ಪೆಟ್ಟಿಗೆಗೆ ಸಹಾಯದನ ನೀಡಲಾಗುವುದು.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಮುದಾಯ ಕೃಷಿ ಹೊಂಡ ಕಾರ್ಯಕ್ರಮ ಮತ್ತು ಕಾಳುಮೆಣಸು ಬೆಳೆಗೆ ಲಘು ಪೋಷಕಾಂಶ ಪರಿಕರ ವಿತರಣೆ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

LEAVE A RESPONSE

Your email address will not be published. Required fields are marked *