General information

ನಿಮ್ಮ ಮೊಬೈಲ್ನಲ್ಲಿ ಬೆಳೆ ಪರಿಹಾರ ಹಣ ಯಾವ ರೈತರಿಗೆ ಎಷ್ಟು ಹಣ ಜಮೆ ಆಗಿದೆ ಎಂದು ಪರಿಶೀಲಿಸಿ

ನಿಮ್ಮ ಸ್ಮಾರ್ಟ್ ಫೋನ್ ಮೂಲಕ ಬೆಳೆ ಹಾನಿ ಪರಿಹಾರ ಹಣ (Crop damage compensation money) ಎಷ್ಟು ಹಣ ಯಾವ ಖಾತೆಗೆ ಜಮೆಯಾಗಿದೆ ಎಂಬುದನ್ನು ಪರಿಶೀಲಿಸಿ.

ಕೇವಲ ಆಧಾರ್ ಕಾರ್ಡ್ ಮೂಲಕ ರೈತರು ಪ್ರಸ್ತುತ ವರ್ಷ ಹಾಗೂ ಎರಡು ವರ್ಷಗಳ ಹಿಂದೆ (Two years Back) ಬೆಳೆ ಹಾನಿ ಪರಿಹಾರ ಹಣ ಯಾವ ಖಾತೆಗೆ ಜಮಾ ಆಗಿದೆ ಎಂದು ಪರೀಶಿಲಿಸಬಹುದು. ರೈತರು ಎಲ್ಲಿಯೂ ಅಲೆಯಬೇಕಾಗಿಲ್ಲ. ಸ್ಮಾರ್ಟ್ ಫೋನ್ ಮೂಲಕ ಪರಿಶೀಲಿಸಬಹುದು. ಅದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ವಿವರ.

ಬೆಳೆ ಹಾನಿ ಪರಿಹಾರ ಹಣ ಯಾವ ಬ್ಯಾಂಕ್ ಖಾತೆಗೆ ಯಾವ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂದು ನಿಮ್ಮ ಸ್ಮಾರ್ಟ್ ಫೋನ್ ಮೂಲಕ ಪರಿಶೀಲಿಸಿ

2022-23 ನೇ ಸಾಲಿನಲ್ಲಿ

ಯಾವ ಖಾತೆಗೆ ಬೆಳೆ ಹಾನಿ ಪರಿಹಾರ ಜಮೆಯಾಗಿದೆ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಲು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

ಆಗ Parihara Payment Report ತೆರೆದುಕೊಳ್ಳುತ್ತದೆ.

ಅಲ್ಲಿ ನೀವು ಆಧಾರ್ ಸಂಖ್ಯೆ ಬಾಕ್ಸ್ ಆಯ್ಕೆ ಮಾಡಿದ ತಕ್ಷಣ ನಿಮಗೆ ಎರಡು ಆಯ್ಕೆಗಳು ಕಾಣುತ್ತವೆ. 

Select Calamity Type ನಲ್ಲಿ Flood ಆಯ್ಕೆ ಮಾಡಿಕೊಳ್ಳಬೇಕು. 

Select Year Type ನಲ್ಲಿ  2022-23 ಆಯ್ಕೆ ಮಾಡಿಕೊಳ್ಳಬೇಕು.

ಒಂದು ವೇಳೆ ನೀವು ಕಳೆದ ವರ್ಷ ಅಂದರೆ 2021-22ನೇ ಸಾಲಿನಲ್ಲಿ ಯಾವ ಬ್ಯಾಂಕಿಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು 2021-22 ಆಯ್ಕೆ ಮಾಡಿಕೊಳ್ಳಬೇಕು.

ಇದೇ ರೀತಿ 2020-21 ನೇ ಸಾಲಿನ ಬೆಳೆ ಹಾನಿ ಪರಿಹಾರ ಜಮೆ ಕುರಿತು ಸಹ ಚೆಕ್ ಮಾಬಹುದು.

Enter Adhar ನಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಬೇಕು.

ನಂತರ Captcha Fetch details ಬಾಕ್ಸ್ ನಲ್ಲಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು.

ನಂತರ ವಿವರಗಳನ್ನು ಪಡೆಯಲು/Fetch details ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ ನಿಮ್ಮ ಜಿಲ್ಲೆ, ಯಾವ ಬ್ಯಾಂಕ್ ನಲ್ಲಿ ಜಮೆಯಾಗಿದೆ ಎಂಬ ಬ್ಯಾಂಕಿನ ಹೆಸರು ಇರುತ್ತದೆ.

ನಂತರ ನಿಮ್ಮ ಹೆಸರು, ತಂದೆಯ ಹೆಸರು ಬ್ಯಾಂಕಿನಲ್ಲಿರುವಂತೆ ನಂತರ ಬ್ಯಾಂಕ್ ಅಕೌಂಟಿನ ಕೊನೆಯ ನಾಲ್ಕು ಅಂಕಿಗಳು ಕಾಣಿಸುತ್ತದೆ.

ಪೇಮೆಂಟ್ ಸಕ್ಸೆಸ್ ಆಗಿದ್ದರೆ ಸಕ್ಸೆಸ್ ಎಂಬ ಮೆಸೆಜ್ ಇರುತ್ತದೆ.

ಇಲ್ಲದಿದ್ದರೆ ಯಾವ ಕಾರಣಕ್ಕಾಗಿ ನಿಮ್ಮ ಹಣ ತಡೆಹಿಡಿಯಲಾಗಿದೆ ಎಂಬುದನ್ನು ತೋರಿಸಲಾಗಿರುತ್ತದೆ.

ಯಾವ ಬೆಳೆಗೆ ಎಷ್ಟು ಬೆಳೆಹಾನಿ ಪರಿಹಾರ ಹಣ ಜಮೆಯಾಗುವುದು?

ಮಳೆಯಾಶ್ರಿತ ಬೆಳೆ (A rainfed crop) ಗಳಿಗೆ ಪ್ರತಿ ಹೆಕ್ಟೇರಿಗೆ 13600 ರೂಪಾಯಿ ನೀಡಲಾಗುವುದು. ಅದೇ ರೀತಿ ನೀರಾವರಿ ಬೆಳೆ(irrigated crop) ಗೆ 25000 ರೂಪಾಯಿ ಹಾಗೂ ಬಹುವಾರ್ಷಿಕ ತೋಟಗಾರಿಕೆ ಬೆಳೆ(A perennial horticultural crop)ಗಳಿಗೆ 28000 ರೂಪಾಯಿ ಬೆಳೆ ಹಾನಿಪರಿಹಾರ ಹಣ ನೀಡಲಾಗುವುದು ಎಂದು ಸರ್ಕಾರ(Government) ತಿಳಿಸಿದೆ. ಬೆಳೆ ಹಾನಿಯೂ ಯಾವ ಬೆಳೆ ಹಾಳಾಗಿದೆ ಎಂಬ ಆಧಾರದ ಮೇಲೆ ರೈತರ ಖಾತೆಗೆ ಜಮೆ ಮಾಡಲಾಗುವುದು.

LEAVE A RESPONSE

Your email address will not be published. Required fields are marked *