General information ಮುಟೇಶನ್ ಸ್ಮಾರ್ಟ್ ಫೋನ್ ಹೊಲ

ಸ್ಮಾರ್ಟ್ ಫೋನ್ ಮೂಲಕ ನಿಮ್ಮ ಹೊಲದ ಮುಟೇಶನ್ ಪರಿಶೀಲಿಸಿ

ರೈತರು ತಮ್ಮ ಸ್ಮಾರ್ಟ್ ಫೋನ್ ಮೂಲಕ ಜಮೀನಿನ ಮುಟೇಶನ್ ಇತಿಹಾಸ(History)ವನ್ನು ಪರಿಶೀಲಿಸಬಹುದು. ರೈತರು ತಮ್ಮ ಜಮೀನು(Land) ಯಾರ ಹೆಸರಿನಿಂದ ಯಾರ ಹೆಸರಿಗೆ ವರ್ಗಾವಣೆ(Transfer)ಯಾಗಿದೆ? ಹಾಗೂ ನಿಮ್ಮ ಜಮೀನು ಜಂಟಿಯಾಗಿದ್ದರೆ ಯಾರ ಯಾರ ಹೆಸರಿನೊಂದಿಗೆ ಜಂಟಿಯಾಗಿದೆ ಎಂಬುದನ್ನು ಸ್ಮಾರ್ಟ್ ಫೋನ್ ನಲ್ಲೇ ಚೆಕ್ ಮಾಡಬಹುದು. ಇದೇನಪಾ, ಜಮೀನಿನ ಮುಟೇಶನ್ ಸಹ ಮೊಬೈಲ್ ನಲ್ಲೇ ಚೆಕ್ ಮಾಡಬಹುದಾ? ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ರೈತರು ತಮ್ಮ ಜಮೀನಿನ ಮುಟೇಶನ್ ಚೆಕ್ ಮಾಡುವುದು ಹೇಗೆ?

ರೈತರು ದೇಶದ ಯಾವುದೇ ಮೂಲೆಯಲ್ಲಿ ಕುಳಿತು ತಮ್ಮ ಯಾವುದೇ ಜಮೀನಿನ ಮುಟೇಶನ್ ನ್ನು  ಮೊಬೈಲ್ ನಲ್ಲೇ ಚೆಕ್ ಮಾಡಲು ಈ

https://landrecords.karnataka.gov.in/service40/PendcySurveyNoWiseRpt

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

ಆಗ ಭೂಮಿ ರಿಪೋರ್ಟ್ ಪೇಜ್ ಓಪನ್ ಆಗುತ್ತದೆ. ಇಲ್ಲಿ ಭೂಮಿ ಆರ್.ಟಿ.ಸಿ ಮುಟೇಶನ್ ಹಿಸ್ಟರಿ ಕೆಳಗಡೆ ರೈತರು ಯಾವ ಜಿಲ್ಲೆಗೆ ಸೇರಿದ್ದಾರೋ ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದಮೇಲೆ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು.

ನಿಮ್ಮ ಊರು ಆಯ್ಕೆ ಮಾಡಿಕೊಂಡು ಯಾವ ಹೊಲದ ಮುಟೇಶನ್ ಇತಿಹಾಸ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ಹಾಕಬೇಕು.

ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ರೈತರು ಒಂದು ವೇಳೆ ಬ್ಯಾಂಕುಗಳಿಂದ ಸಾಲ ಪಡೆದಿದ್ದರೆಯಾವ ಬ್ಯಾಂಕಿನಿಂದ ಸಾಲ ಪಡೆದಿದ್ದಾರೆ  ಎಷ್ಟು ಸಾಲ ಪಡೆಯಲಾಗಿದೆ ಎಂಬ ಮಾಹಿತಿ ಇರುತ್ತದೆ. ನಿಮ್ಮ ಸರ್ವೆ ನಂಬರದೊಳಗೆ ಬರುವ ಹಿಸ್ಸಾ ನಂಬರ್ ನಲ್ಲಿ ಯಾರು ಯಾರು  ಬ್ಯಾಂಕಿನಿಂದ ಸಾಲ ಪಡೆಯಿದ್ದಾರೆ ಎಂಬ ಮಾಹಿತಿಯೂ ಇರುತ್ತದೆ.

ಯಾವ ಸರ್ವೆ ನಂಬರ್ ಹಿಸ್ಸಾ ನಂಬರ್ ನ್ಲಲಿ ಏನೇನು ಬದಲಾವಣೆ?

ನೀವು ನಮೂದಿಸಿದ ಸರ್ವೆ ನಂಬರ್ ದೊಳಗೆ ಬರುವ ಹಿಸ್ಸಾ ನಂಬರ್ ಪ್ರಕಾರ ಜಮೀನಿನ ಹಕ್ಕು ಬದಲಾವಣೆ ಮಾಡಿದವರು ಯಾರು? ಯಾರಿಗೆ ಜಮೀನು ಹಕ್ಕು ಬದಲಾವಣೆ ಮಾಡಲಾಗಿದೆ? ಜಮೀನು ಹೇಗೆ ಬದಲಾವಣೆ ಮಾಡಲಾಗಿದೆ? ಎಷ್ಟು ಎಕರೆ ಜಮೀನು ಬದಲಾವಣೆ ಮಾಡಲಾಗಿದೆ ಹಾಗೂ ಜಮೀನು ಜಂಟಿಯಾಗಿದೆಯೇ ಪ್ರತ್ಯೇಕವಾಗಿದೆಯೋ ಎಂಬ ಮಾಹಿತಿಯನ್ನು ಸಹ ನೀಡಲಾಗಿರುತ್ತದೆ.

ಮುಟೇಶನ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಜಮೀನಿನ ಮುಟೇಶನ್ ಸ್ಟೇಟಸ್ ಸಹ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.ಇದಕ್ಕಾಗಿ ರೈತರು ಈ

https://landrecords.karnataka.gov.in/Service12/MutationStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

ನಂತರ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಬೇಕು.

ನಂತರ ಸರ್ನೋಕ್ ಕಾಲಂನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು.  ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಂಡು ಫೆಟ್ಚ್ ಡಿಟೇಲ್ ಮೇಲೆ ಕ್ಲಿಕ್ ಮಾಡಬೇಕು.

ಆಗ ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದು.

ಮುಟೇಶನ್ ಆಗಿದೆಯೋ ಇಲ್ಲವೋ ಅಥವಾ ಮುಟೇಶನ್ ಯಾವ ಸ್ಟೇಟಸ್ ನಲ್ಲಿದೆ ಎಂಬ ಮಾಹಿತಿ ರೈತರಿಗೆ ಕ್ಷಣಮಾತ್ರದಲ್ಲಿ ಸಿಗಲಿದೆ.

LEAVE A RESPONSE

Your email address will not be published. Required fields are marked *