Government Scheme ಕೃಷಿ ಸಿಂಚಾಯಿ ಪ್ರಧಾನಮಂತ್ರಿ ಯೋಜನಾ

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ

ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ(Scheme)ಯಡಿಯಲ್ಲಿ ನೀರಾವರಿ ಘಟಕ ಅಳವಡಿಕೆಗೆ 90% ರಷ್ಟು ಸಹಾಯಧನ ನೀಡಲು ವಿವಿಧ ಜಿಲ್ಲೆಗಳ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯಸರ್ಕಾರ ಹಾಗೂ ಕೇಂದ್ರ ಸರ್ಕಾರದ ಅಡಿಯಲ್ಲಿ ತೋಟಗಾರಿಕೆ ಇಲಾಖೆಯ ಮುಖಾಂತರ ತೋಟಗಾರಿಕೆ ಬೆಳೆಗಳಾದ ಹಣ್ಣು(Fruit) ತರಕಾರಿ(Vegetable), ಹೂವು(Flower) ಪ್ಯಾಂಟೇಶನ್ ಬೆಳೆಗಳು, ಔಷಧ ಸುಗಧ ಸಸ್ಯಗಳು, ಹಾಗೂ ಸಾಂಬಾರು ಬೆಳೆಗಳಿಗೆ ರೈತರು ಹನಿ ನೀರಾವರಿ ಪದ್ಧತಿ(Drip irrigation system) ಅಳವಡಿಸಲು Online ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕು ಹಾಗೂ ಲಕ್ಷ್ಮೇಶ್ವರ ತಾಲೂಕಿನ ರೈತರು ತೋಟಗಾರಿಕೆ ಇಲಾಖೆಯ (Horticulture Department) ವತಿಯಿಂದ ಅನುಮೋದನೆಗೊಂಡ ಕಂಪನಿಯಿಂದ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬಹುದು. ಈ ಯೋಜನೆಯಡಿ ಸಾಮಾನ್ಯ ವರ್ಗ ದ ರೈತರಿಗೆ 2 ಹೆಕ್ಟೇರ್ ವರೆಗೆ ಶೇ. 75 ರಷ್ಟು ಹಾಗೂ 2 ರಿಂದ 5 ಹೆಕ್ಟೇರ್ ವರೆಗೆ ಶೇ. 45 ರಷ್ಟು ಸಹಾಯಧನ ನೀಡಲಾಗುವುದು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ 2 ಹೆಕ್ಟೇರ್ ವರೆಗೆ ಶೇ. 90 ರಷ್ಟು ಹಾಗೂ 2 ರಿಂದ 5 ಹೆಕ್ಟೇರ್ ವರೆಗೆ ಶೇ. 45 ರಷ್ಟು ಸಹಾಯಧನ ನೀಡಲಾಗುವುದು.

ಆಸಕ್ತಿಯುಳ್ಳ ರೈತರು ಕೊಳವೆಬಾವಿ ಹೊಂದಿರಬೇಕು. ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ರೈತರು ಇದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಶಿರಹಟ್ಟಿ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸುರೇಶ ಕುಂಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನರೇಗಾ ಯೋಜನೆಯಡಿಯಲ್ಲಿ ಸಹಾಯಧನ

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2022-23ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಗದಗ ಜಿಲ್ಲೆಯ  ಎಲ್ಲಾ ತಾಲೂಕುಗಳ ಗ್ರಾಮೀಣ ಭಾಗದಲ್ಲಿ ಮಾವು, ತೆಂಗು, ಪೇರಲ, ದ್ರಾಕ್ಷಿ, ದಾಳಿಂಬೆ, ಬಾಳೆ, ಪಪ್ಪಾಯ, ನಿಂಬೆ, ಸೀತಾಫಲ, ಅಂಜೂರ, ನೇರಳೆ, ಬಾರೆ, ಡ್ರ್ಯಾಗನ್ ಹಣ್ಣು, ಗೋಡಂಬಿ, ವೀಳ್ಯದೆಲೆ, ಹುಣಸೆ, ಕರಿಬೇವು  ಬೆಳೆಗಳ ಪ್ರದೇಶ ವಿಸ್ತರಣೆಗೆ ಹಾಗೂ ಮಣ್ಣು ಸಂರಕ್ಷಣಾ ಕಾಮಗಾರಿಗಳನ್ನು ತಮ್ಮ ತೋಟಗಳಲ್ಲಿ ಕೈಗೊಳ್ಳಲು ಜಿಲ್ಲೆಯ ರೈತ ಬಾಂಧವರಿಗೆ ಉತ್ತಮ ಅವಕಾಶವಿದೆ.

ಬೇಕಾಗುವ ದಾಖಲೆಗಳು

ಆಧಾರ್ ಕಾರ್ಡ್

ಜಮೀನಿನ ಪಹಣಿ

ಬ್ಯಾಂಕ್ ಪಾಸ್ ಬುಕ್

ಪಾಸ್ ಪೋರ್ಟ್ ಅಳತೆಯ ಫೋಟೋ

LEAVE A RESPONSE

Your email address will not be published. Required fields are marked *