Government Scheme ಪಿಎಂ ಕಿಸಾನ್ ಮೊಬೈಲ್ ಸ್ಟೇಟಸ

ನಿಮ್ಮ ಮೊಬೈಲ್ ನಲ್ಲಿ ಪಿಎಂ ಕಿಸಾನ್ ಸ್ಟೇಟಸ್ ಪರಿಶೀಲಿಸುವುದು ಹೇಗೆ?

ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿದ ಜನರು ತಮ್ಮ ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ನು ಮೊಬೈಲ್‌ ನಲ್ಲಿ ಪರಿಶೀಲಿಸಬಹುದು. ಪಿಎಂ ಕಿಸಾನ್ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ರೈತರು ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ನೋಡಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ ಸ್ಟೇಟಸ್(Status) ನೋಡಬಹುದು. ಇದರಿಂದ ಹಿಂದಿನ ಕಂತುಗಳು ಹಾಗೂ ಈಗಿನ ಕಂತಿನ ಸ್ಟೇಟಸ್ ಸಹ ಚೆಕ್ ಮಾಡಬಹುದು.

ಇಲ್ಲಿಯವರೆಗೆ ಎಷ್ಟು ಕಂತಿನ ಹಣ ಜಮೆಯಾಗಿದೆ ಎಂಬುದನ್ನು  ಮನೆಯಲ್ಲಿಯೇ ಕುಳಿತು ಕ್ಷಣಾರ್ಧದಲ್ಲಿ ಸ್ಟೇಟಸ್ ನೋಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಪಿಎಂ ಕಿಸಾನ್ ಸ್ಟೇಟಸ್ ಮಾಹಿತಿ.

ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿಕೊಂಡ ರೈತರು ಈ   https://pmkisan.gov.in/beneficiarystatus.aspx  ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

  • ಆಗ ಕೇಂದ್ರ ಸರ್ಕಾರದ  ಪಿಎಂ ಕಿಸಾನ್ ಯೋಜನೆಯ ವೆಬ್ ಪೇಜ್ ಓಪನ್ ಆಗುತ್ತದೆ.
  • ಅಲ್ಲಿ ರೈತರು ತಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನಮೂದಿಸಬೇಕಾಗುತ್ತದೆ. 
  • ಇದಕ್ಕಿಂತ ಮುಂಚಿತವಾಗಿ ಅಕೌಂಟ್ ನಂಬರ್ ಹಾಗೂ ಆಧಾಾರ್ ಕಾರ್ಡ್ ನಮೂದಿಸಿ ಸ್ಟೇಟಸ್ ಚೆಕ್ ಮಾಡುವ ಸೌಲಭ್ಯವಿತ್ತು.
  • ಈಗ ಕೇವಲ ಮೊಬೈಲ್ ನಂಬರ್ ನಮೂದಿಸಿ ಸ್ಟೇಟಸ್ ಚೆಕ್ ಮಾಡಬಹುದು.

ಪಿಎಂ ಕಿಸಾನ್ ಸ್ಟೇಟಸ್ ಪೇಜ್ ನಲ್ಲಿ ಏನೇನು ಮಾಹಿತಿ ಇರುತ್ತದೆ?

ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಪೇಜ್ ನಲ್ಲಿ ರೈತರಿಗೆ ತಮ್ಮ ಹೆಸರು, ತಂದೆಯ ಹೆಸರು, ಆಧಾರ್ ಕಾರ್ಡ್ ನಂಬರ್, ಯಾವ ಬ್ಯಾಂಕಿಗೆ ಪಿಎಂ ಕಿಸಾನ್ ಹಣ ಬರುತ್ತಿದೆ? ನಿಮ್ಮ ಖಾತೆ ಆ್ಯಕ್ಟಿವ್ ಇದೆಯೋ ಇಲ್ಲವೋ ಎಂಬ ಮಾಹಿತಿ ಗೊತ್ತಾಗುತ್ತದೆ. ಇದರೊಂದಿಗೆ ಇಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆಯೋ ಇಲ್ಲವೋ ಅಥವಾ ಇಕೆವೈಸಿ ರದ್ದಾಗಿದ್ದರೆ ಯಾವ ಕಾರಣಕ್ಕೆ ರದ್ದಾಗಿದ ಎಂಬ ಮಾಹಿತಿ ಸಿಗುತ್ತದೆ. ಒಂದು ವೇಳೆ ನಿಮಗೆ ಪಿಎಂ ಕಿಸಾನ್ ಯೋಜನೆ ತಡೆಹಿಡಿಯಲಾಗಿದ್ದರೆ ಯಾವ ಕಾರಣಕ್ಕಾಗಿ ತಡೆಹಿಡಯಲಾಗಿದೆ ಎಂಬ ಮಾಹಿತಿ ಸಿಗುತ್ತದೆ.

LEAVE A RESPONSE

Your email address will not be published. Required fields are marked *