Government Scheme ಪಿಎಂ ಕಿಸಾನ್ ಹಣ

ಇಂದೇ ಈ ಕೆಲಸ ಮಾಡಿ ಇಲ್ಲಾಂದ್ರೆ ಪಿಎಂ ಕಿಸಾನ್ ಹಣ ನಿಮಗೆ ಜಮೆ ಆಗುವುದಿಲ್ಲ

ಇದೇ ತಿಂಗಳ ಅಂತ್ಯದಲ್ಲಿ ಅಥವಾ ಜನೆವರಿ 1 ರಂದು ಪಿಎಂ ಕಿಸಾನ್ (PM Kisan) ಹಣ ಜಮಾ ಆಗಲಿದೆ. ಈ ಸಲ ಬಹಳಷ್ಟು ರೈತರಿಗೆ ಪಿಎಂ ಕಿಸಾನ್ (PM Kisan) ಹಣ ಜಮೆಯಾಗುವುದಿಲ್ಲ. ಏಕೆಂದರೆ‌ ಇನ್ನೂ ಬಹಳಷ್ಟು ರೈತರು ಇಕೆವೈಸಿ(E-kyc) ಮಾಡಿಸಿಲ್ಲ. ಹಾಗಾಗಿ‌ ರೈತರು ನಾಲ್ಕೈದು ದಿನಗಳಲ್ಲಿ‌ ಇಕೆವೈಸಿ‌ ಮಾಡಿಸಿಕೊಳ್ಳಬೇಕು. ಹಾಗಾದರೆ ನಿಮ್ಮ ಆಧಾರ್ ಕಾರ್ಡ್‌ ಇಕೆವೈಸಿ (E-kyc) ಆಗಿದೆಯೋ‌ ಇಲ್ಲವೋ ಮೊಬೈಲ್‌‌ನಲ್ಲಿ‌ ಚೆಕ್‌ ಮಾಡಬಹುದು.

ಮೊಬೈಲ್ ನಲ್ಲಿ‌ ಇಕೆವೈಸಿ‌ ಚೆಕ್‌ ಮಾಡುವುದು‌ ಹೇಗೆ?
ರೈತರು ಪಿಎಂ‌ ಕಿಸಾನ್‌‌ ಯೋಜನೆಯಡಿ ಇಕೆವೈಸಿ ಆಗಿರುವುದನ್ನು ಚೆಕ್ ಮಾಡಲು ಈ
https://exlink.pmkisan.gov.in/aadharekyc.aspx
ಲಿಂಕ್‌‌ ಮೇಲೆ ಕ್ಲಿಕ್‌ ಮಾಡಬೇಕು.

ಆಗ ಪಿಎಂ ಕಿಸಾನ್‌ ಇಕೆವೈಸಿ ಪೇಜ್‌ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್‌‌ ಹಾಕಬೇಕು.

ನಂತರ‌ ಸರ್ಚ್‌ ಮೇಲೆ ಕ್ಲಿಕ್ ಮಾಡಬೇಕು. ನೀವು ಇಕೆವೈಸಿ‌ ಮಾಡಿಸಿದ್ದರೆ ಇಕೆವೈಸಿ ಸಕ್ಸೆಸಫುಲಿ‌‌‌ ಡನ್‌ ಮೆಸೆಜ್‌ ಕಾಣುತ್ತದೆ.

ಒಂದು ವೇಳೆ ಇಕೆವೈಸಿ ಮಾಡಿಸದಿದ್ದರೆ ನಿಮ್ಮ ಹತ್ತಿರದ    ಸಿಎಸ್ಸಿ‌ ಕೇಂದ್ರಗಳಲ್ಲಿ ಇಕೆವೈಸಿ ಮಾಡಿಸಬೇಕು.

ರೈತರೇಕೆ‌ ಇಕೆವೈಸಿ (e-kyc)ಮಾಡಿಸಬೇಕು?
ಇಕೆವೈಸಿ ಮಾಡಿಸದಿದ್ದರೆ ರೈತರಿಗೆ ಪಿಎಂ ಕಿಸಾನ್‌ ಹಣ‌ ಜಮೆಯಾಗಲ್ಲ. ನಿಜವಾದ ಫಲಾನುಭವಿಗಳಿಗೆ‌ ಲಾಭ‌ ಸಿಗಲೆಂದು ಸರ್ಕಾರವು ಇಕೆವೈಸಿಯನ್ನು ಕಡ್ಡಾಯಗೊಳಿಸಿದೆ.
ಇಕೆವೈಸಿ ಮಾಡಿಸುವಂತೆ ಸಾಕಷ್ಟು ಪ್ರಚಾರ ಮಾಡಿದ್ದರೂ ರೈತರೂ ಇನ್ನೂ ಇಕೆವೈಸಿ ಮಾಡಿಸಿಲ್ಲ. ಇಕೆವೈಸಿ ಮಾಡಿಸಲು ಹಲವಾರು‌ ಸಲ‌ ಗಡವು ನೀಡಲಾಗಿತ್ತು. ಆದರೂ ರಾಜ್ಯದಲ್ಲಿ  16 ಲಕ್ಷಕ್ಕೂ ಹೆಚ್ಚಿನ ರೈತರು ಇಕೆವೈಸಿ ಮಾಡಿಸಿಲ್ಲ.

ಪಿಎಂ ಕಿಸಾನ್‌ ಹಣ 12 ಕಂತುಗಳು ಜಮೆ

ಪಿಎಂ ಕಿಸಾನ್‌ ಹಣ ಅಕ್ಟೋಬರ್ ತಿಂಗಳಲ್ಲಿ ಜಮೆಯಾಗಿತ್ತು. ಆಗ ಬಹಳಷ್ಟು ರೈತರಿಗೆ‌ ಹಣ‌ಜಮೆಯಾಗಿಲ್ಲ. ಏಕೆಂದರೆ  ಒಂದೇ ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಜನ ಪಿಎಂ ಕಿಸಾನ್ ಹಣ ಸೌಲಭ್ಯ ಪಡೆದಿದ್ದರು. ಸರ್ಕಾರಿ ನೌಕರರು, ತೆರಿಗೆ ಪಾವತಿಸುವವರು ಹಾಗೂ ಪತಿ, ಪತ್ನಿ ಮಕ್ಕಳು ಪಿಎಂ ಕಿಸಾನ್‌ ಹಣ ಸೌಲಭ್ಯ ಪಡೆಯುತ್ತಿದ್ದರು. ಹಾಗಾಗಿ ನಿಜವಾದ ಫಲಾನುಭವಿಗಳಿಗೆ ಸೌಲಭ್ಯ ನೀಡಲು ಇಕೆವೈಸಿ ಕಡ್ಡಾಯಗೊಳಿಸಲಾಗಿತ್ತು. ಇದಾದಮೇಲೆ ಬಹಳಷ್ಟು ರೈತರು ಇಕೆವೈಸಿ ಮಾಡಿಸಿದ್ದರು.  ಆದರೂ ಇನ್ನೂ ಹಲವಾರು ರೈತರು ಇಕೆವೈಸಿ ಮಾಡಿಸಿಲ್ಲ. ೧೩ನೇ ಕಂತಿನ ಹಣ ಜಮೆಯಾಗಲು ಇನ್ನೂ ಕಾಲಾವಕಾಶವಿದೆ. ಈ ತಿಂಗಳ ಕೊನೆಯವರಿಗೆ ಇಕೆವೈಸಿ ಮಾಡಿಸಿ.

LEAVE A RESPONSE

Your email address will not be published. Required fields are marked *