Government Scheme ಬೆಳೆ ವಿಮೆ ಹಣ

ಬೆಳೆ ವಿಮೆಗೆ ಎಷ್ಟು ಹಣ ಜಮೆಯಾಗುತ್ತದೆ? ಎಷ್ಟು ಹಣ ಪಾವಿತಸಬೇಕು? ಮೊಬೈಲ್ ನಲ್ಲೇ ಚೆಕ್ ಮಾಡಿ

ಹಿಂಗಾರು ಬೆಳೆ ವಿಮೆ (Fall crop insurance) ಮಾಡಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಬೆಳೆ ವಿಮೆ ಮಾಡಿಸಲಿಚ್ಚಿಸುವ ರೈತರು ತಕ್ಷಣವೇ ವಿಮೆ ಮಾಡಿಸಿ ವಿಮಾ ಸೌಲಭ್ಯ ಪಡೆಯಬಹುದು.

ರೈತರಿಗೆ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ? ರೈತರೆಷ್ಟು ವಿಮೆ ಹಣ ಪಾವತಿಸಬೇಕುಷ್ಟು ಹಾಗೂ ವಿಮೆ ಮಾಡಿಸಲು ಇನ್ನೆಷ್ಟು ದಿನ ಉಳಿಯಿತು ಎಂಬುದರ ಬಗ್ಗೆ ಮಾಹಿತಿಯಿರುವುದಿಲ್ಲ. ಬೆಳೆ ವಿಮೆ ಮಾಡಿಸಲಿಚ್ಚಿರುವ ರೈತರು ಮೊಬೈಲ್ ನಲ್ಲೇ ಬೆಳೆ ವಿಮೆ ಕುರಿತಂತೆ ಚೆಕ್ ಮಾಡಬಹುದು.

ಬೆಳೆ ವಿಮೆ ಮಾಡಿಸಲು ಕೊನೆಯ ದಿನಾಂಕ ಯಾವುದು? ಮೊಬೈಲ್ ನಲ್ಲೇ ಚಕ್ ಮಾಡಿ

https://www.samrakshane.karnataka.gov.in/PublicView/FindCutOff.aspx

  • ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
  • ಆಗ ಬೆಳೆ ವಿಮೆ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು.
  • ಉದಾಹರಣೆಗೆ ನೀವು ಬಾಗಲಕೋಟೆ ಜಿಲ್ಲೆಯವರಾಗಿದ್ದರೆ ಕಡಲೆ ಬೆಳೆಗೆ ವಿಮೆ ಮಾಡಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ.
  • ಅದೇ ರೀತಿ ನೀವು ಬಳ್ಳಾರಿ ಜಿಲ್ಲೆಯವರಾಗಿದ್ದರೆ ಕಡಲೆ, ಜೋಳ ಬೆಳೆಗೆ ವಿಮೆ ಮಾಡಿಸಲು ಡಿ. 31 ಕೊನೆಯ ದಿನ.
  • ಬೀದರ್ ಜಿಲ್ಲೆಯವರಾಗಿದ್ದರೆ ಜೋಳ, ಕಡಲೆಯೊಂದಿಗೆ ಗೋಧಿಗೆ ಬೆಳೆ ವಿಮೆ ಮಾಡಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ.
  • ಇದೇ ರೀತಿ ನೀವು ಯಾವ ಜಿಲ್ಲೆಗೆ ಸಂಬಂಧಿಸಿದ್ದೀರೋ ಆ ಜಿಲ್ಲೆ ಆಯ್ಕೆ ಮಾಡಿ ಯಾವ ಯಾವ ಬೆಳೆಗಳಿಗೆ ಡಿಸೆಂಬರ್ 31ರೊಳಗೆ ವಿಮೆ ಮಾಡಿಸಬಹುದು ಎಂಬುದನ್ನು ಚೆಕ್ ಮಾಡಬಹುದು.

ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಹಣ ಜಮೆಯಾಗುತ್ತದೆ? ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ರೈತರು ಯಾವ ಬೆಳೆಗೆ ಎಷ್ಟು ವಿಮಾ ಹಣ ಜಮೆಯಾಗುತ್ತದೆ ಎಂಬುದನ್ನು ಚೆಕ್ ಮಾಡಲು ಈ

https://www.samrakshane.karnataka.gov.in/publichome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

ಆಗ ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ Premium Calculator ಮೇಲೆ ಕ್ಲಿಕ್ ಮಾಡಬೇಕು.

ನಂತರ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು.

ಗ್ರಾಮ ಆಯ್ಕೆ ಮಾಡಿಕೊಂಡ ನಂತರ ನೀವು ಯಾವ ಬೆಳೆಗೆ ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಆ ಬೆಳೆ ಆಯ್ಕೆ ಮಾಡಿಕೊಳ್ಳಬೇಕು.

ಎಷ್ಟು ಎಕರೆಗೆ ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಅಲ್ಲಿ ನಮೂದಿಸಬೇಕು.

ಉದಾಹರಣೆಗೆ ನೀವು ಕಡಲೆಗೆ ಬೆಳೆಗೆ  ಒಂದು ಎಕರೆಗೆ ವಿಮೆ ಮಾಡಿಸುತ್ತಿದ್ದೀರೆಂದುಕೊಳ್ಳೋಣ. ಕಡಲೆ ಬೆಳೆ, ಒಂದು ಎಕರೆನಮೂದಿಸಿ Show Premium ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಒಂದು ಎಕರೆಗೆ 11736 ರೂಪಾಯಿಯವರೆಗೆ ವಿಮೆ ಹಣ ಜಮೆಯಾಗುತ್ತದೆ. ನೀವು 176 ರೂಪಾಯಿ ವಿಮಾ ಹಣ ಪಾವತಿಸಬೇಕಾಗುತ್ತದೆ.  ಇದೇ ರೀತಿ ನೀವು ಇತರ ಬೆಳೆಗಳಿಗೆ ಎಷ್ಟು ಹಣ ಜಮೆಯಾಗುತ್ತದೆ ಮತ್ತು ನೀವೆಷ್ಟು ಹಣ ಪಾವತಿಸಬೇಕಾಗುತ್ತದೆ ಎಂಬುದನ್ನು ಚೆಕ್ ಮಾಡಬಹುದು. ಬೇರೆ ಬೇರೆ ಜಿಲ್ಲೆಗೆ ಬೆಳೆ ಬೆಳೆಗಳು ವಿಮೆ ಮಾಡಿಸಲು ಅವಕಾಶವಿರುತ್ತದೆ. ಒಮ್ಮೆ ನೀವು ಯಾವ ಬೆಳೆಗೆ ಹಾಗೂ ಡಿಸೆಂಬರ್ 31 ರೊಳಗೆ ವಿಮೆ ಮಾಡಿಸಬಹುದು ಚೆಕ್ ಮಾಡಿಕೊಳ್ಳಬೇಕಾಗುತ್ತದೆ.

LEAVE A RESPONSE

Your email address will not be published. Required fields are marked *