Government Scheme govt. scheme.

ಇ-ಶ್ರಮ್ ಕಾರ್ಡ ಯೋಜನೆ

ಇ-ಶ್ರಮ್ ಕಾರ್ಡ್ ಮಾಡಿಸಿಲ್ಲವೇ? ಏನಿದು? ಇಲ್ಲಿದೆ ಮಾಡುವ ವಿಧಾನ

ನೀವು ಅಸಂಘಟಿತ ಕಾರ್ಮಿಕರೇ? ಹಾಗಾದರೆ ಕೂಡಲೇ ಇ-ಶ್ರಮ್ ಕಾರ್ಡ್ ಮಾಡಿಸಿ, ಹಲವಾರು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಏನಿದು ಇ-ಶ್ರಮ್ ಕಾರ್ಡ್ ?

ಅಸಂಘಟಿತ ಕೂಲಿ ಕಾರ್ಮಿಕರಿಗೆ ಆರ್ಥಿಕ ಸಹಾಯ ಒದಗಿಸುವ ದೃಷ್ಟಿಯಲ್ಲಿ ಕೇಂದ್ರ ಸರ್ಕಾರವು 2021 ರಲ್ಲಿ ಇ-ಶ್ರಮ್ ಪೋರ್ಟಲ್ ಬಿಡುಗಡೆಗೊಳಿಸಿದ್ದು, ಇದರಲ್ಲಿ ವಲಸೆ, ಕಟ್ಟಡ ಕಾರ್ಮಿಕರು, ಮನೆಗೆಲಸದವರು, ರಸ್ತೆಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲಾ ಅಸಂಘಟಿತ ಕೂಲಿ ಕಾರ್ಮಿಕರು ಈ ಪೋರ್ಟಲ್ ನಲ್ಲಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ. ಕಾರ್ಮಿಕರು ತಮ್ಮ ವಿವರವನ್ನು ದಾಖಲಿಸುವುದರ ಜೊತೆಗೆ ತಮ್ಮ ಕೌಶಲ್ಯದ ವಿವರವನ್ನು ದಾಖಲಿಸಿದರೆ ಸೂಕ್ತ ಉದ್ಯೋಗ ಪಡೆಯಲು ಸಹಾಯಕವಾಗುತ್ತದೆ.

ಇ-ಶ್ರಮ್ ಕಾರ್ಡ್ ನ ಉಪಯೋಗ :

ಈ ಕಾರ್ಡ್ ಮಾಡಿಸಿದ ಕಾರ್ಮಿಕರಿಗೆ ಒಂದು ಗುರುತು ಸಂಖ್ಯೆಯ ಕಾರ್ಡ್ ನೀಡಲಾಗುತ್ತದೆ, ಇದರಿಂದ ಮುಂದೆ ಕೇಂದ್ರ ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ಸಹಾಯಕವಾಗುತ್ತದೆ.

ಈ ಕಾರ್ಡ್ ಮಾಡಿಸಿದ ಕಾರ್ಮಿಕರು ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿಯಲ್ಲಿ (PM-SBY) 2 ಲಕ್ಷದ ಅಪಘಾತ ವಿಮಾ ಸೌಲಭ್ಯ ಪಡೆಯುತ್ತಾರೆ. ಹಾಗೂ ಆಕಸ್ಮಿಕ ಮರಣ ಹೊಂದಿದರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರೆ 2 ಲಕ್ಷ ರೂ. ಸಿಗಲಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳ ಪ್ರಯೋಜನ ನೇರವಾಗಿ ಪಡೆಯಬಹುದಾಗಿದೆ.

ಭವಿಷ್ಯದಲ್ಲಿ ಕಾರ್ಮಿಕರಿಗೆ ಸಹಾಯ ಧನ, ಪಿಂಚಣಿ, ಒದಗಿಸಲು ಸಹಾಯಕವಾಗಿದೆ.

ಈ ಕಾರ್ಡ್ ನಿಂದ ಕಾರ್ಮಿಕರು ಪ್ರಧಾನ ಮಂತ್ರಿ ಶ್ರಮ್ ಯೋಗಿ, ರಾಷ್ಟ್ರೀಯ ಪಿಂಚಣಿ ಯೋಜನೆ, ಅಟಲ್ ಪಿಂಚಣಿ ಸೇರಿದಂತೆ ಎಲ್ಲ ಸೌಲಭ್ಯವನ್ನು ನೇರವಾಗಿ ಪಡೆದುಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸುವಾಗ ಇರಬೇಕಾದ ದಾಖಲೆಗಳು :

ಆಧಾರ್ ಕಾರ್ಡ್

ಪಡಿತರ ಚೀಟಿ

ಬ್ಯಾಂಕ್ ಪಾಸ್ ಪುಸ್ತಕ

ಇ-ಶ್ರಮ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

ಇ-ಶ್ರಮ್ ಕಾರ್ಡ್ ನಿಮ್ಮ ಹತ್ತಿರದ CSC ಸೆಂಟರ್, ಗ್ರಾಮ ಒನ್ ಕೇಂದ್ರ ಅಥವಾ ಗ್ರಾಮ ಪಂಚಾಯತಿ ಬಾಪೂಜಿ ಸೇವಾಕೇಂದ್ರಗಳಲ್ಲಿ ಯಾವುದೇ ಶುಲ್ಕವಿಲ್ಲದೆ ಪಡೆಯಬಹುದಾಗಿದೆ, ಅಥವಾ

ನಿಮ್ಮ ಮೊಬೈಲ್ ನಲ್ಲೆ ಈ ರೀತಿಯಾಗಿ ಅರ್ಜಿ ಸಲ್ಲಿಸಿ ಕಾರ್ಡ್ ಪಡೆದುಕೊಳ್ಳಬಹುದಾಗಿದೆ :

ಇದಕ್ಕಾಗಿ ಮೊದಲು ಇ-ಶ್ರಮ್ ಪೋರ್ಟಲ್ ಈ ಕೆಳಗಿನ ವೆಬ್ಸೈಟ್ ಗೆ ಬೇಟಿ ನೀಡಿ.

https://eshram.gov.in

eShram

ನಂತರ REGISTER on eShram ಆಯ್ಕೆ ಮೇಲೆ ಕ್ಲಿಕ್ ಮಾಡಿ.

eShram registration

Self Registration ಆಯ್ಕೆ ಇರುತ್ತದೆ, ಇಲ್ಲಿ ನಿಮ್ಮ ಆಧಾರ್ ಲಿಂಕ್ ಇರುವ ಮೊಬೈಲ್ ಸಂಖ್ಯೆ , captcha ದಾಖಲಿಸಿ, EPFO ಆಯ್ಕೆಗೆ NO ಮಾರ್ಕ್ ಮಾಡಿ Send OTP ಮೇಲೆ ಕ್ಲಿಕ್ ಮಾಡಿ.

ನಂತರ OTP ದಾಖಲಿಸಿ, ಅಲ್ಲಿ ಕೇಳಲಾಗುವ ಹೆಸರು, ವಿಳಾಸ, ಉದ್ಯೋಗ ಇತರ ಎಲ್ಲಾ ವಿವರ ದಾಖಲಿಸಿ, ಅಲ್ಲಿ ಕೇಳಲಾಗುವ ದಾಖಲೆಗಳನ್ನು ಅಪ್ಲೋಡ್ ಮಾಡಿ, submit ಮಾಡಿ.

ನಿಮ್ಮ ಎಲ್ಲಾ ನೋಂದಾವಣೆ ಪ್ರಕ್ರಿಯೆ ಪ್ರಕ್ರಿಯೆ ಮುಗಿದ ನಂತರ ನಿಮಗೆ 12 ಅಂಕಿಗಳ UAN ನಂಬರ್ ಜೊತೆಗೆ ಗುರುತಿನ ಚೀಟಿ ರೂಪದಲ್ಲಿ ನೀಡಲಾಗುತ್ತದೆ. ಇದನ್ನು ಡೌನ್ಲೋಡ್ ಮಾಡಿಕೊಳ್ಳಿ, ಇದು ಜೀವಿತಾವಧಿ ಕಾರ್ಡ್ ಆಗಿರಲಿದ್ದು, ಎಲ್ಲಾ ಯೋಜನೆಗಳ ಉಪಯೋಗ ಪಡೆಯಲು ಈ ಕಾರ್ಡ್ ಸಹಾಯಕಾರಿಯಾಗಲಿದೆ.

ಇ-ಶ್ರಮ್ ಸಹಾಯವಾಣಿ :

ಈ ಕಾರ್ಡ್ ನ ಬಗ್ಗೆ , ಅಥವಾ ನೋಂದಾವಣೆಯ ಸಮಯದಲ್ಲಿ ಯಾವುದೇ ಸಹಾಯ ಅಥವಾ ಸಮಸ್ಯೆಗಳಿಗೆ 14434 ಈ ಟೋಲ್ ಪ್ರೀ ಸಂಖ್ಯೆಗೆ ಕರೆಮಾಡಿ, ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬಹುದಾಗಿದೆ.

LEAVE A RESPONSE

Your email address will not be published. Required fields are marked *