ಸರ್ಕಾರಿ ಯೋಜನೆ

ಮನೆ ಇಲ್ಲದವರಿಗೆ ಮನೆ ಪಡೆಯಲು ಅರ್ಜಿ ಆಹ್ವಾನ

ಮನೆ ಇಲ್ಲದವರಿಗೆ ನನ್ನ ಮನೆ ವಸತಿ ಯೋಜನೆಯನ್ನು ಮಾಡಿದ್ದಾರೆ. ಹಾಗಾದರೆ ಮನೆ ಇಲ್ಲದವರು ಈ ಯೋಜನೆಯ ಮೂಲಕ ಪ್ರತಿಯೊಬ್ಬರು ಕೂಡ ಮನೆಯನ್ನು ಪಡೆಯುವುದು ಹೇಗೆ? ಹಾಗೂ ಅರ್ಜಿಯನ್ನು ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸುವಾಗ ಬೇಕಾಗುವಂತಹ ದಾಖಲೆಗಳು ಯಾವುದು. ಅದೇ ರೀತಿ ನನ್ನ ಮನೆ ವಸತಿ ಯೋಜನೆಗೆ ಅರ್ಹತೆಗಳು ಏನಿರಬೇಕು. ನಿಯಮಗಳು ಏನೇನು ಎಂಬ ಕಂಪ್ಲೀಟ್‌ ಮಾಹಿತಿ ಏನೆಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ಪಡೆಯಬಹುದು. ಕೊನೆಯವರೆಗೂ ಓದಿ.

ಸರ್ಕಾರದ ಕಡೆಯಿಂದ ಮನೆ ಇಲ್ಲದವರಿಗೆ ಮನೆ ಕೊಡುವಂತಹ ಅದ್ಬುತವಾದ ಯೋಜನೆಯನ್ನು ಸರ್ಕಾರವು ತಂದಿದೆ. ಇದರಿಂದ ಮನೆ ಇಲ್ಲದಂತಹ ಬಡವರಿಗೆ, ರೈತರಿಗೆ, ಕೂಲಿ ಕಾರ್ಮಿಕರಿಗೆ ಬಹಳಷ್ಟು ಅನುಕೂಲವಾಗಿದೆ. ಮನೆ ಇಲ್ಲದಂತಹ ನಿರ್ಗತಿಕರಿಗೆ ಈ ಯೋಜನೆ ತುಂಬ ಪ್ರಯೋಜನಕಾರಿಯಾಗಿದೆ. ಸರ್ಕಾರದ ಈ ಯೋಜನೆಯು ಹಲವಾರು ಮಹಿಳಾ ಕಾರ್ಮಿಕರಿಗೂ ಕೂಡ ಅನುಕೂಲವಾಗಲಿದೆ.

ರಾಜೀವ್‌ ಗಾಂಧಿ ವಸತಿ ನಿಗಮ ಕಡೆಯಿಂದ ಮನೆ ಇಲ್ಲದವರಿಗೆ ಆನ್ಲೈನ್‌ ಮೂಲಕ ನನ್ನ ಮನೆ ವಸತಿ ಯೋಜನೆ ಮೂಲಕ ಮನೆಯನ್ನು ಪಡೆದುಕೊಳ್ಳಲು ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ. ಇಲ್ಲಿ ನನ್ನ ಮನೆ ವಸತಿ ಯೋಜನೆ ಹೊಸ ಮನೆ ಇಲ್ಲದವರಿಗೆ ಹೊಸ ಯೋಜನೆ ಮಾಡಿದ್ದು ಇದರ ಬಗ್ಗೆ ಕಂಪ್ಲೀಟ್‌ ಮಾಹಿತಿಯನ್ನು ತಿಳಿಯಲು ಅಫಿಶಿಯಲ್‌ ವೆಬ್ಸೈಟ್‌ ಮೂಲಕ ತಿಳಿಯಬಹುದು.

ಅರ್ಹತೆಗಳು :

  • ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು.
  • ಅದೇ ರೀತಿ ಬೆಂಗಳೂರು ನಗರ ಗ್ರಾಮಾಂತರವಾಗಿರಬಹುದು ಅಥವಾ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕನಿಷ್ಟ 5 ವರ್ಷ ವಾಸವಾಗಿರಬೇಕಾಗಿರುತ್ತದೆ. ಬೇರೆ ಜಿಲ್ಲೆಯವರು ಇದ್ದರೂ ಕೂಡ ನೀವು ಈ ಒಂದು ಮೂರು ನಗರ ಅಥವಾ ಜಿಲ್ಲೆಗಳಲ್ಲಿ ಕನಿಷ್ಟ ನೀವು 5 ವರ್ಷ ವಾಸವಾಗಿರಬೇಕು.
  • ಕಂದಾಯ ದೃಢೀಕರಣ ಪತ್ರವನ್ನು ಹೊಂದಿರಬೇಕಾಗುತ್ತದೆ.
  • ಆಧಾರ್‌ ಕಾರ್ಡ್‌ ಹಾಗೂ ಪಡಿತರ ಚೀಟಿಯನ್ನು ಹೊಂದಿರಬೇಕಾಗುತ್ತದೆ.
  • ಚುನಾವಣಾ ಗುರುತಿನ ಚೀಟಿಯನ್ನು ಹೊಂದಿರಬೇಕಾಗುತ್ತದೆ.
  • ಅರ್ಜಿ ಸಲ್ಲಿಸುವವರು ರೈತರಾಗಿರಬೇಕಾಗುತ್ತದೆ. ತನ್ನ ಅಥವಾ ಕುಟುಂಬದ ಹೆಸರಿನಲ್ಲಿ ಯಾವ ಮನೆ ಹಾಗೂ ನಿವೇಶನವನ್ನು ಹೊಂದಿರಬಾರದು.
  • ಅದೇ ರೀತಿಯಾಗಿ ಬೆಂಗಳೂರು ನಗರ ಜಿಲ್ಲೆಯ ನಿವಾಸಿಗಳಿಗೆ ವಾರ್ಷಿಕ ಆದಾಯವಿರುತ್ತದೆ. ಆ
  • ಆದಾಯವು 3 ಲಕ್ಷಕ್ಕಿಂತ ಮೀರಿರಬಾರದು ಮತ್ತು ಇತರೆ ಜಿಲ್ಲೆಯವರಾಗಿದ್ರೆ ನೀವು 2 ಲಕ್ಷಕ್ಕಿಂತ ಒಳಗಿರಬೇಕಾಗಿರುತ್ತದೆ. ಮತ್ತು
  • ನಿಮ್ಮ ಒಂದು ಜಾತಿ ಆದಾಯ ಪ್ರಮಾಣ ಪತ್ರವನ್ನು ಸಲ್ಲಸಬೇಕಾಗುತ್ತದೆ. ಅದೇ ರೀತಿ ಪ್ರತಿ ಕುಟುಂಬದಲ್ಲಿ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ.
  • ನೀವು ಅಂಗವಿಕಲರಾಗಿದ್ರೆ ಕೊಡಬೇಕಾಗುತ್ತದೆ.
  • ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಿತ ಈ ವೆಬ್ಸೈಟ್‌ ನ ತೆರದುಕೊಂಡ ನಂತರ ಅಲ್ಲಿ ನಿಮಗೆ NWE ಎಂಬ ಟ್ಯಾಬ್‌ ಕಾಣಸಿಗುತ್ತದೆ. ಆನ್ಲೈನ್‌ ಅರ್ಜಿ ನನ್ನ ಮನೆ ವಸತಿ ಯೋಜನೆ ಎಂಬ ಲಿಂಕ್‌ ಮೇಲೆ ಕ್ಲಿಕ್‌ ಮಾಡಬೇಕು. ಆಗ ನಿಮಗೆ ಇಲ್ಲಿ ಸಂಪೂರ್ಣವಾಗಿ ಅರ್ಜಿ ಹೇಗೆ ಸಲ್ಲಿಸಬೇಕು. ಎಲ್ಲಿ ಎಲ್ಲಿ ಪ್ಲಾಟ್‌ ಗಳಿರುತ್ತದೆ. ಅದನ್ನು ಹೆಗೆ ಬುಕ್‌ ಮಾಡಬೇಕು. ಎಂಬ ಪೂರ್ಣವಾದ ವಿವರಗಳು ಅಲ್ಲಿ ಇರುತ್ತದೆ. ಅದರ ಜೊತೆಗೆ ನನ್ನ ಮನೆ ವಸತಿ ಯೋಜನೆಯ ಮೂಲಕ ನೀವು ಮೆನೆಯನ್ನು ಪಡೆದುಕೊಳ್ಳಬಹುದು. ಈ ಯೋಜನೆಯ ಮೂಲಕ ಅರ್ಜಿಯನ್ನು ಸಲ್ಲಿಸಲು ದಿನಾಂಕ 25 ಮಾರ್ಚ್‌ ನಿಂದ ಆನ್ಲೈನ್‌ ಅರ್ಜಿಗಳನ್ನು ಸಲ್ಲಿಸಲು ಪ್ರಾರಂಭವಾಗಿದೆ. ನಿಮಗೆ ಹೆಚ್ಚಿನ ಮಾಹಿತಿ ತಿಳಿಯಲು ಅಲ್ಲಿ ಟ್ರೋಲ್‌ ಫ್ರೀ ನಂಬರ್ ಗಳನ್ನು ಸಹ ಕೊಟ್ಟಿರುತ್ತಾರೆ.

ದಾಖಲೆಗಳು:

  • ಆಧಾರ್‌ ಕಾರ್ಡ್‌
  • ಪಡಿತರ ಚೀಟಿ
  • ಚುನಾವಣಾ ಗುರುತಿನ ಚೀಟಿ
  • ಜಾತಿ ಆದಾಯ ಪ್ರಮಾಣ ಪತ್ರ
  • ಅಂಗವಿಕಲರಾಗಿದ್ದರೆ ಪ್ರಮಾಣ ಪತ್ರ(ಅನ್ವಯ)

ಅರ್ಜಿ ಸಲ್ಲಿಸುವ ವಿಧಾನ ಹೇಗೆ?

  • ಆನ್ಲೈನ್‌ ಮೂಲಕ ಅಫಿಶಿಯಲ್‌ ವೆಬ್ಸೈಟ್‌ ಗೆ ಬಂದು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಒಂದುವೇಳೆ ನಿಮಗೆ ಅರ್ಜಿ ಸಲ್ಲಿಸಲು ಕಷ್ಟವಾಗುತ್ತಿದ್ದರೆ ಅದಾದರೆ ನೀವು ಆನ್ಲೈನ್‌ ಸೆಂಟರ್‌ ಗಳಿಗೆ ಹೋಗಿ ಅಲ್ಲಿಹೋಗಿ ಅರ್ಜಿಯನ್ನು ಸಲ್ಲಿಸಬಹುದು.
  • ನೀವು ಅರ್ಜಿ ಸಲ್ಲಿಸಲು ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಿತ ವೆಬ್ಸೈಟ್‌ ಗೆ ಹೋಗಿ ನಿಮ್ಮ ಜಿಲ್ಲಯನ್ನು ಸೆಲೆಕ್ಟ್‌ ಮಾಡಿಕೊಳ್ಳಿ. ನಿಮ್ಮ ಊರನ್ನು ಸೆಲೆಕ್ಟ್‌ ಮಾಡಿಕೊಳ್ಳಿ. ಅದಾದ ಮೇಲೆ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಅದರಲ್ಲಿ ಭರ್ತಿ ಮಾಡಿ. ನಂತರ ಸಬ್ಮಿಟ್‌ ಮಾಡಬೇಕಾಗುತ್ತದೆ.
  • ನೀವು ಅರ್ಜಿ ಸಲ್ಲಿಸಲು ಸ್ವಲ್ಪ ಹಣವನ್ನು ಕಟ್ಟಬೇಕಾಗುತ್ತದೆ. ಬೆಂಗಳೂರು ನಗರದಂತಹ ಪ್ರದೇಶಗಳಲ್ಲಿ 2BHK ಮನೆಗಳು 765 ಇರುತ್ತದೆ, ಅರ್ಜಿ ಸಲ್ಲಿಸುವಾಗಲೇ ಸ್ವಲ್ಪ ಹಣವನ್ನು
  • ಮುಂಗಡ ಪಾವತಿಯನ್ನು ಮಾಡಲಾಗುತ್ತದೆ. ಮನೆ ವೆಚ್ಚ ಕೂಡ ಪಾವತಿ ಮಾಡಬೇಕಾಗುತ್ತದೆ.
  • ನೀವು ಈ ವೆಬ್ಸೈಟ್‌ ಗೆ ಬಂದು ಅರ್ಜಿ ಸಲ್ಲಿಸಿದ ಮೇಲೆ ಸ್ವೀಕೃತಿ ಸಿಗುತ್ತೆ. ನೀವೇನಾದರೂ ಅರ್ಹರಾಗಿದ್ದರೆ ನಿಮಗೆ SMS ಬರುತ್ತದೆ.
  • ಅರ್ಹವಾದ ನಂತರವೇ ನೀವು 3 ಲಕ್ಷ ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ. ಅದೇರೀತಿಯಾಗಿ ಮನೆಯನ್ನು ಕಟ್ಟಲು ಸರ್ಕಾರದ ಕಡೆಯಿಂದ ಅರ್ಜಿಯನ್ನು ಸಲ್ಲಿಸಲು ಆಹ್ವಾನಿಸಲಾಗಿದೆ.

LEAVE A RESPONSE

Your email address will not be published. Required fields are marked *