ಸರ್ಕಾರಿ ಯೋಜನೆ

ವಿದ್ಯಾನಿಧಿ ಯೋಜನೆಯಡಿ ಅರ್ಜಿ ಆಹ್ವಾನ

ಯಲ್ಲೋ ಬೋರ್ಡ್ ಹೊಂದಿರುವ ಟ್ಯಾಕ್ಸಿ ಚಾಲಕರ ಮತ್ತು ಆಟೋರಿಕ್ಷಾ ಚಾಲಕರ ಮಕ್ಕಳ ಮೆಟ್ರಿಕ್ ನಂತರದ ಉನ್ನತ ವಿಧ್ಯಾಬ್ಯಾಸವನ್ನು ಉತ್ತೇಜಿಸಲು ಸರ್ಕಾರವು ವಿಧ್ಯಾನಿಧಿ ಯೋಜನೆಯನ್ನು ಆರಂಭಿಸಿದೆ.

ವಿಧ್ಯಾನಿಧಿ ಯೋಜನೆಯಡಿಯಲ್ಲಿ ಕಲಬುರಗಿ ನಗರ ಹಾಗೂ ತಾಲೂಕುಗಳಲ್ಲಿನ ಯಲ್ಲೋ ಬೋರ್ಡ್ ಹೊಂದಿರುವ ಟ್ಯಾಕ್ಸಿ ಚಾಲಕರ ಮತ್ತು ಆಟೋರಿಕ್ಷಾ ಚಾಲಕರ ಮಕ್ಕಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಹ ಚಾಲಕರು ಮಕ್ಕಳು ಸೇವಾಸಿಂಧು ವೆಬ್ ಪೋರ್ಟಲ್ ಮೂಲಕ ಅಥವಾ ಗ್ರಾಮ ಒನ್, ಕರ್ನಾಟಕ ಒನ್, ಗುಲ್ಬರ್ಗ ಒನ್ ಕೇಂದ್ರಗಳಲ್ಲಿ, ಚಾಲಕರ ಚಾಲನಾ ಅನುಜ್ಞಾಪತ್ರ (ಡಿಎಲ್) ಆಧಾರ್ ಕಾರ್ಡ್ ಮತ್ತು ವಿದ್ಯಾರ್ಥಿಯ ಆಧಾರ್ ಕಾರ್ಡ್ ಮತ್ತು ರೇಶನ್ ಕಾರ್ಡ್ ದಾಖಲಾತಿಗಳೊಂದಿಗೆ

Click here

ಈ ವೆಬ್ ಸೈಟ್ ದಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವಾರ್ಶಿಕ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳ ಆಧಾರ್ ಜೋಡಿತ ಬ್ಯಾಂಕ್ ಖಾತೆಗಳಿಗೆ, ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗುತ್ತಿದ್ದು, ಕಲಬುರಗಿ ನಗರದಲ್ಲಿನ ಹಾಗೂ ತಾಲೂಕುಗಳಲ್ಲಿನ ಯಲ್ಲೋ ಬೋರ್ಡ್ ಹೊಂದಿರುವ ಟ್ಯಾಕ್ಸಿ ಚಾಲಕರು ಮತ್ತು ಆಟೋರಿಕ್ಷಾ ಚಾಲಕರು ಇದರ ಸದುಪಯೋಗ ಪಡೆಯಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A RESPONSE

Your email address will not be published. Required fields are marked *