government Government Scheme scheme.

ಗುಡಿಕೈಗಾರಿಕೆ ಸ್ವಉದ್ಯೋಗದಲ್ಲಿ ತೊಡಗಿರುವವರಿಗೆ ಸಾಲ, ಸಹಾಯಧನ

ಗುಡಿಕೈಗಾರಿಕೆ ಸ್ವಉದ್ಯೋಗದಲ್ಲಿ ತೊಡಗಿರುವವರಿಗೆ ಸಾಲ, ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಕುಶಲಕರ್ಮಿಗಳಿಗಾಗಿ ಸಾಲ ಮತ್ತು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು. ಈ ಯೋಜನೆಯಡಿ ವಾಣಿಜ್ಯ ಬ್ಯಾಂಕ್ ಹಾಗೂ ಸಹಕಾರ ಬ್ಯಾಂಕ್ ಮತ್ತು ಪ್ರಾದೇಶಿಕ ಬ್ಯಾಂಕ್‍ಗಳಿಂದ ಪ್ರತಿ ಕುಶಲಕರ್ಮಿಗಳಿಗೆ ರೂ.50 ಸಾವಿರದವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ.

 

ಯಾರೆಲ್ಲ ಅರ್ಜಿ ಸಲ್ಲಿಸಬವುದು?

ಚನ್ನಪಟ್ಟಣ ಮೆರಗು ಅಟಿಕೆಗಳು, ಬಿದ್ರಿವೇರ್,ಕಮ್ಮಾರಿಕೆ, ಬುಟ್ಟಿ ಹೆಣೆಯುವವರು, ಗೋಲ್ಡ್ ಸ್ಮಿತ್ (ಆಭರಣ ತಯಾರಿಕೆ), ಶ್ರೀಗಂಧದ ಕ್ರಾಫ್ಟ್, ಮೈಸೂರು ರೋಸ್‍ವುಡ್ ಕೆತ್ತನೆ, ಕಿನ್ಹಾಳ್ ಅಟಿಕೆಗಳು, ನವಲಗುಂದ ರತ್ನಗಂಬಳಿಗಳು, ಮುಂಡಗೋಡ್ ಫೈಲ್ ಕಾರ್ಪೆಟ್‍ಗಳು, ಕಲ್ಲಿನ ಕೆತ್ತನೆ, ಮರದ ಕೆತ್ತನೆಗಳು, ಮೈಸೂರು ಸಾಂಪ್ರದಾಯಿಕ ಚಿತ್ರಕಲೆ, ಲೋಹದ ಕರಕುಶಲ,ಗಂಜಿಫಾ ಕಲೆ, ಕುಂಬಾರಿಕೆ, ಟೆರಕೋಟ, ಮಣ್ಣಿನ ವಿಗ್ರಹ ತಯಾರಿಕೆ, ಬೆತ್ತ ಮತ್ತು ಬಿದಿರು, ಸಂಡೂರು ಲಂಬಾಣಿ ಕಸೂತಿ, ಕಸೂತಿ ಕಲೆ, ಕೋಕೋನಟ್ ಶೆಲ್ ಕ್ರಾಫ್ಟ್, ಕಂಬಳಿ ನೇಯುವ ಹಾಗೂ ಪಾದರಕ್ಷೆ ಹೆಣೆಯುವ ಕುಶಲಕರ್ಮಿಗಳು ಅರ್ಜಿ ಸಲ್ಲಿಸಬಹುದಾಗಿದೆ.

 

ಬೇಕಾದ ದಾಖಲೆಗಳು:

 

ಕನಿಷ್ಠ 18 ವರ್ಷ ಮೇಲ್ಪಟ್ಟವರಾಗಿರಬೇಕು, ಭಾವಚಿತ್ರ, ಆಧಾರ್ ಕಾರ್ಡ್, ಕುಶಲಕರ್ಮಿಕರ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ, ಯೋಜನಾ ವರದಿ ಮತ್ತು ಇತರೆ ದಾಖಲಾತಿಗಳು ಒದಗಿಸಬೇಕು.

 

ಅರ್ಜಿ ಎಲ್ಲಿ ಸಲ್ಲಿಸಬೇಕು?

 

ಅರ್ಜಿಯನ್ನು ಆಯಾ ತಾಲ್ಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿ, ಪಂಚಾಯಿತಿಯ ಅಭಿವೃದ್ದಿ ಅಧಿಕಾರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳಿಂದ ಪಡೆದು ಅಗತ್ಯ ದಾಖಲಾತಿ ಸಲ್ಲಿಸಿ ನಿಮ್ಮ ಜಿಲ್ಲೆಯ ಕೈಗಾರಿಕಾ ಕೇಂದ್ರದ ಕಚೇರಿಗೆ ಅರ್ಜಿ ಸಲ್ಲಿಸಬೇಕು.

LEAVE A RESPONSE

Your email address will not be published. Required fields are marked *