Scholarship ವಿದ್ಯಾನಿಧಿ ವಿದ್ಯಾರ್ಥಿವೇತನ

ವಿದ್ಯಾನಿಧಿ ವಿದ್ಯಾರ್ಥಿ ವೇತನ

2022-23ನೇ ಸಾಲಿನ ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಶೈಕ್ಷಣಿಕ ವರ್ಷಕ್ಕಾಗಿ 2500 ರುಪಾಯಿಯಿಂದ 11 ಸಾವಿರ ರೂಪಾಯಿಯವರೆಗೆ ವಿದ್ಯಾರ್ಥಿ ವೇತನ ಪಡೆಯಲು ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಮೊದಲು ಸರ್ಕಾರದ https://ssp.postmatric.karnataka.gov.in ವೆಬ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವುದಕ್ಕಿಂತ ಮುಂಚಿತವಾಗಿ ಈ ಕೆಳಗಿನ ಅರ್ಹತೆಯನ್ನು ಹೊಂದಿರಬೇಕು.

ಬೇಕಾಗುವ ದಾಖಲೆಗಳು:

  • ವಿದ್ಯಾರ್ಥಿಗಳ ಎಸ್ಎಟಿಎಸ್ ಗುರುತಿನ ಸಂಖ್ಯೆ/ ಕಾಲೇಜು ನೋಂದಣಿ ಸಂಖ್ಯೆ ಹೊಂದಿರಬೇಕು.
  • ವಿದ್ಯಾರ್ಥಿ ಮತ್ತು ಪಾಲಕರ ಆಧಾರ್ ಸಂಖ್ಯೆಯಿರಬೇಕು. ವಿದ್ಯಾರ್ಥಿಯ ಮೊಬೈಲ್ ಸಂಖ್ಯೆ ಹೊಂದಿರಬೇಕು.
  • ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ ನ ದಾಖಲಾತಿ ಸಂಖ್ಯೆ (ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯ).
  • ವಿದ್ಯಾರ್ಥಿಯ ಈ ಮೇಲ್ ಐಡಿ ಇರಬೇಕು.
  • ವಿದ್ಯಾರ್ಥಿಯ ತಂದೆ ಅಥವಾ ತಾಯಿಯು ರೈತರ ಗುರುತಿನ ಸಂಖ್ಯೆ (ಎಫ್ಐಡಿ) ಹೊಂದಿರಬೇಕು.
ತರಗತಿ ಸಿಗುವ ವಿದ್ಯಾರ್ಥಿ ವೇತನ ಹಣ(ಗಂಡು ಮಕ್ಕಳಿಗೆ) ಸಿಗುವ ವಿದ್ಯಾರ್ಥಿ ವೇತನ ಹಣ(ಹೆಣ್ಣು ಮಕ್ಕಳಿಗೆ)
ಪಿಯುಸಿ/ಐಐಟಿ/ ಡಿಪ್ಲೋಮಾ ವಿದ್ಯಾರ್ಥಿ 2500 ರೂ. 3000 ರೂ.
ಬಿ.ಎ, ಬಿಎಸ್.ಸಿ, ಬಿಕಾಂ ಇನ್ನಿತರ ಪದವಿ ಕೋರ್ಸ್ 5000 ರೂ. 5500 ರೂ.
ಎಲ್ಎಲ್ಬಿ/ಪ್ಯಾರಾಮೆಡಿಕಲ್/ಬಿಫಾರ್ಮಾ/ನರ್ಸಿಂಗ್ ಇನ್ನಿತರ ವೃತ್ತಿಪರ ಕೋರ್ಸ್‌ 7500 ರೂ. 8000 ರೂ.
ಎಂಬಿಬಿಎಸ್/ಬಿಇ/ಬಿಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ 10000 ರೂ. 11000ರೂ.

ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಈ ಲಿಂಕ್ https://ssp.postmatric.karnataka.gov.in  ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ಕಾರದ ಶಿಷ್ಯವೇತನದ ಪೇಜ್ ಓಪನ್ ಆಗುತ್ತದೆ. ಅಲ್ಲಿ ಹೊಸ ಖಾತೆಯನ್ನು ಸೃಜಿಸಲು ಇಲ್ಲಿ ಕ್ಲಿಕ್ ಮಾಡಿ ಬಾಕ್ಸ್ ಮೇಲೆ ಕ್ಲಿಕ್ ಮಾಡಬೇಕು.  ಆಗ ನಿಮಗೆ ಆಧಾರ್ ಇದೆಯೇ ಎಂದು ಕೇಳಲಾಗುತ್ತದೆ ಅಲ್ಲಿ ಹೌದು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಆಧಾರ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರು ನಮೂದಿಸಬೇಕು.  ನಂತರ ಕೆಳಗಡೆ ಅಂಕೆಸಂಖ್ಯೆಯ ಕೂಡಿಸು, ಕಳೆಯಿರಿ. ಗುಣಕಾರಾ ಅಥವಾ ಭಾಗಕಾರದ ಸಂಖ್ಯೆ ಕೇಳಲಾಗುತ್ತದೆ. ಅಲ್ಲಿ ನಂಬರ್ ನಮೂದಿಸಿದ ಮುಂದುವರೆಸುವ ಮೇಲೆ ಕ್ಲಿಕ್ ಮಾಡಿ ಮುಂದೆ ಕೇಳಲಾದ ಎಲ್ಲಾ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.

LEAVE A RESPONSE

Your email address will not be published. Required fields are marked *