government Government Scheme scheme.

ಇ-ಸ್ವತ್ತಿನ ದಾಖಲೆಗಳನ್ನು ನಿಮ್ಮ ಮೊಬೈಲ್ ನಲ್ಲೇ ಪರಿಶೀಲಿಸಬಹುದು.

ಇ-ಸ್ವತ್ತಿನ ದಾಖಲೆಗಳನ್ನು ನಿಮ್ಮ ಮೊಬೈಲ್ ನಲ್ಲೇ ಪರಿಶೀಲಿಸಬಹುದು.

ಗ್ರಾಮ ಪಂಚಾಯತಿಯಲ್ಲಿ ಆಸ್ತಿ ನೋಂದಣಿ ಹೇಗೆ ಮಾಡುವುದು? ಇ-ಸ್ವತ್ತು ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

ಗ್ರಾಮ ಪಂಚಾಯತಿಯಡಿಯಲ್ಲಿ ಬರುವ ಆಸ್ತಿಗಳನ್ನು ನೋಂದಣಿ ಮಾಡುವ ಪದ್ದತಿ ಹೇಗೆ? ಗ್ರಾಮ ಪಂಚಾಯತಿಯಲ್ಲಿರುವ ಆಸ್ತಿಗಳನ್ನು ಯಾವ ರೀತಿ ಫಾರ್ಮ್-9 ಮತ್ತು ಫಾರ್ಮ -11 ಇ-ಸ್ವತ್ತು ಅಡಿಯಲ್ಲಿ ಮಾಡಿಕೊಳ್ಳಬಹುದು? ಇ-ಸ್ವತ್ತು ಎಂದರೆ ಏನು? ನಿಮ್ಮ ಆಸ್ತಿಗೆ ಇ-ಸ್ವತ್ತು ಮಾಡುವ ಪ್ರಕ್ರಿಯೆ ಹೇಗಿರುತ್ತದೆ? ಇ-ಸ್ವತ್ತಿಗೆ ಅರ್ಜಿ ಸಲ್ಲಿಸಲು ದಾಖಲೆಗಳು ಏನೇನು ಬೇಕು? ಈ ಕುರಿತು ಈ ಕೆಳಗೆ ವಿವರಿಸಲಾಗಿದೆ.

 

ಇ-ಸ್ವತ್ತು ಎಂದರೇನು?

 

ನಾಗರಿಕರು/ಸಾರ್ವಜನಿಕರು ಗ್ರಾಮ ಪಂಚಾಯತ ಅಡಿಯಲ್ಲಿ ಆಸ್ತಿ ಖರೀದಿ ಮಾಡಿದ್ರೆ ಸೈಟ್ ಅಥವಾ ಮನೆ ಖರೀದಿ ಮಾಡಿದ್ರೆ ಅಥವಾ ಈಗಿರುವ ಆಸ್ತಿಗಳನ್ನು ಸರ್ಕಾರ ಸಿದ್ದಪಡಿಸಿರುವ ಇ-ಸ್ವತ್ತು ಎನ್ನುವ ತಂತ್ರಾಂಶದಿಂದ ಆಸ್ತಿಗೆ ಗ್ರಾಮ ಪಂಚಾಯತದಲ್ಲಿ ಅರ್ಜಿ ಸಲ್ಲಿಸಿ ವಿಶಿಷ್ಠ ಸಂಖ್ಯೆಯನ್ನು ಪಡೆದುಕೊಂಡು ಆಸ್ತಿಯನ್ನು ನಿಮ್ಮದಾಗಿಸುವುದಕ್ಕೆ ಇ-ಸ್ವತ್ತು ಎಂದು ಕರೆಯುತ್ತಾರೆ.

 

ಇ-ಸ್ವತ್ತಿಗೆ ಬೇಕಾದ ದಾಖಲಾತಿಗಳು:

ಮಾಲೀಕನ ವಿಳಾಸದ ಗುರುತಿನ ಪತ್ರ: ಆಧಾರ ಕಾರ್ಡ್/ಡ್ರೈವಿಂಗ್ ಲೈಸೆನ್ಸ್/ವೋಟಿಂಗ್ ಕಾರ್ಡ

ಆಸ್ತಿಯ ಮಾಲೀಕತ್ವದ ದಾಖಲೆಗಳು

ಚೆಕ್ಕುಬಂದಿ ವಿವರ

ಅರ್ಜಿದಾರರ ಆಧಾರ ಕಾರ್ಡ್ ಝರೆಕ್ಸ್ ಪ್ರತಿ

ಅರ್ಜಿದಾರರ ಪೋಟೊ

ನಿವೇಶನದ ನಕ್ಷೆ

ಕ್ರಯಪತ್ರ

ಪಹಣಿ ಪತ್ರ

ಕಟ್ಟಡದ ತೆರಿಗೆ ರಶೀದಿ ಪತ್ರ ಅಥವಾ ವಿದ್ಯುತ್ ಬಿಲ್.

ಇ-ಸ್ವತ್ತು ಪಡೆಯುವ ಪ್ರಕ್ರಿಯೆ:

 

ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ನಿಮ್ಮ ಗ್ರಾಮ ಪಂಚಾಯಿತಿಗಳಿಗೆ ಸಲ್ಲಿಸಿ ಸ್ವೀಕೃತಿಯನ್ನು ಪಡೆದುಕೊಳ್ಳಬೇಕು. ನಂತರ ಪಂಚಾಯತ ಅಭಿವೃದ್ಧಿ ಅಧಿಕಾರಿಯು ದಾಖಲೆಗಳನ್ನು ಮತ್ತು ಸ್ಥಳದ ಪರಿಶೀಲನೆಯನ್ನು ನಡೆಸುತ್ತಾರೆ. ಪಂಚಾಯತ ಅಭಿವೃದ್ಧಿ ಅಧಿಕಾರಿಯು ಇ-ಸ್ವತ್ತು ತಂತ್ರಾಂಶದ ಮೂಲಕ ನಿಮ್ಮ ಅರ್ಜಿಯನ್ನು ಅಪ್ಲೋಡ್ ಮಾಡಿ ಆಸ್ತಿ ನಕ್ಷೆ ಪಡೆಯಲು ಮೋಜಣಿಗೆ ವರ್ಗಾಯಿಸುತ್ತಾರೆ. ನಂತರ ನಾಡಕಚೇರಿಯಲ್ಲಿ ಮೋಜಣಿಗಾಗಿ ಶುಲ್ಕವನ್ನು ಪಾವತಿಸಿ, ಸ್ವೀಕೃತಿ ಪತ್ರ ಪಡೆದುಕೊಳ್ಳಬೇಕು.

 

ಇದಾದ ನಂತರ 21 ದಿನಗಳ ಒಳಗಾಗಿ ಪಂಚಾಯತ ಅಭಿವೃದ್ಧಿ ಅಧಿಕಾರಿ, ಅರ್ಜಿದಾರರು ಮತ್ತು ಬಾಜುದಾರರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಯುತ್ತದೆ. ನಿಮ್ಮ ಆಸ್ತಿಗೆ ನಕ್ಷೆ ಬಂದ ನಂತರ ದ್ವಿತೀಯ ದರ್ಜೆ ಸಹಾಯಕ ಮೂಲಕ ಅದನ್ನು ಅನುಮೋದಿಸಿ ಕಾರ್ಯದರ್ಶಿ ಅಥವಾ ಪಂಚಾಯತ ಅಭಿವೃದ್ಧಿ ಅಧಿಕಾರಿಗೆ ಕಳುಹಿಸಲ್ಪಡುತ್ತದೆ. ನಂತರ ಇ-ಸ್ವತ್ತಿನ ಮೇಲೆ ಪಂಚಾಯತ ಅಭಿವೃದ್ಧಿ ಅಧಿಕಾರಿಯವರು ಡಿಜಿಟಲ್ ಸಹಿ ಮಾಡುವ ಮೂಲಕ ಅನುಮೋದಿಸುತ್ತಾರೆ. ಇ-ಸ್ವತ್ತಿಗಾಗಿ ಅರ್ಜಿ ಸಲ್ಲಿಸಿದರೆ 45 ದಿನಗಳ ಒಳಗಾಗಿ ಇ-ಸ್ವತ್ತು ನೀಡಬೇಕೆಂಬ ನಿಯಮ ಇದೆ.

 

ಇ-ಸ್ವತ್ತಿನ ದಾಖಲೆಗಳನ್ನು ನಿಮ್ಮ ಮೊಬೈಲ್ ನಲ್ಲೇ ಪರಿಶೀಲಿಸಬಹುದು.

Click here 

 ಮೊದಲಿಗೆ ನಿಮ್ಮ ಮೊಬೈಲ್ನಲ್ಲಿ ಈ ವೆಬ್ಸೈಟ್ ಗೆ ಭೇಟಿ ಮಾಡಿ ನಂತರ ಆಸ್ತಿ ಶೋಧನೆ ಆಯ್ಕೆ ಮಾಡಿಕೊಂಡು Form-9 ಅಥವಾ Form-11 ಆಯ್ಕೆ ಮಾಡಿಕೊಳ್ಳಿ ನಂತರ ನಿಮ್ಮ ಜಿಲ್ಲೆ,ತಾಲ್ಲೂಕು,ಗ್ರಾಮ ಪಂಚಾಯತ,ಗ್ರಾಮ ಆಯ್ಕೆ ಮಾಡಿ “ALL” ಆಯ್ಕೆ ಒತ್ತಿ “Search” ಮಾಡಬೇಕು. ಇಲ್ಲಿ ನಿಮ್ಮ ಗ್ರಾಮದ ಎಲ್ಲಾ ಆಸ್ತಿಗಳ ವಿವರ ಗೋಚರಿಸುತ್ತದೆ. ನಿಮ್ಮ ಹೆಸರನ್ನು ಹುಡುಕಿ ಅದರ “PropertyId” ಯನ್ನು ಒಂದು ಕಡೆ ನಮೂದಿಸಿಕೊಳ್ಳಬೇಕು.

 

ನಂತರ ಪರಿಶೀಲಿಸಿ/Verify ಆಯ್ಕೆ ಮೇಲೆ ಒತ್ತಿ “ಈ ಆಸ್ತಿ ನೋಂದಣಿ ಮಾಡಬವುದೇ ಪರೀಶಿಲಿಸಿ” ಆಯ್ಕೆಯನ್ನು ಕ್ಲಿಕ್ ಮಾಡಿ “PropertyId” ಯನ್ನು ನಮೂದಿಸಿ ನಿಮ್ಮ ಆಸ್ತಿಯ ಸಂಪೂರ್ಣ ವಿವರವನ್ನು ನೋಡಬವುದಾಗಿದೆ.

 

ಇ-ಸ್ವತ್ತು ಮಾಡಿಸುವುದರ ಉಪಯೋಗ:

 

ಇ-ಸ್ವತ್ತು ತಂತ್ರಾಂಶ ಬಳಸಿ ಆನ್ಲೈನ್ ಮೂಲಕ ವಿತರಿಸಿದ ಫಾರಂ-9 ಮತ್ತು ಫಾರಂ-11 ಅನ್ನು ಆಸ್ತಿ ನೊಂದಣಿಗೆ ಬಳಸಬಹುದು.

ಪಂಚಾಯತ ಅಭಿವೃದ್ಧಿ ಅಧಿಕಾರಿಯು ಮಾತ್ರ ಡಿಜಿಟಲ್ ಸಹಿ ಹಾಕಲು ಅವಕಾಶವಿರುವುದರಿಂದ ಅಕ್ರಮಗಳನ್ನು ತಡೆಯಲು ಸಾಧ್ಯವಾಗುತ್ತದೆ.

ಸಾರ್ವಜನಿಕರು ಅವಶ್ಯಕತೆ ಇದ್ದಲ್ಲಿ ಇ-ಸ್ವತ್ತು ದಾಖಲೆ ಮಾಡಿಸಿಕೊಂಡು ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಆಸ್ತಿ ನೋಂದಾಯಿಸಿಕೊಳ್ಳಬಹುದು.

ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಆಸ್ತಿಯನ್ನು ಮಾರುವಾಗ/ಕೊಳ್ಳುವಾಗ ಇ-ಸ್ವತ್ತು ಕಡ್ಡಾಯವಾಗಿದೆ.

ಆಸ್ತಿಯನ್ನು ತಮ್ಮ ಹೆಸರಿಗೆ ಸರಳವಾಗಿ ವರ್ಗಾಯಿಸಿಕೊಳ್ಳಲು ಸಹಾಯವಾಗುತ್ತದೆ.

 

ನಮೂನೆ-9 (Form-9)ಎಂದರೇನು?

ಗ್ರಾಮ ಪಂಚಾಯತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳ ನಿಯಮ 2006 ಮತ್ತು ತಿದುಪಡಿ ನಿಯಮಗಳು 2013ರನ್ವಯ ನಿಯಮ 28ರನ್ವಯ ಗ್ರಾಮ ಪಂಚಾಯತಿಯು ತನ್ನ ವ್ಯಾಪ್ತಿಯಲ್ಲಿತುವ ಕೃಷಿಯೇತರ ಆಸ್ತಿಗಳಿಗೆ ದಾಖಲೆಗಳನ್ನು ಒದಗಿಸುವುದು ನಮೂನೆ-9 (Form-9)ಆಗಿರುತ್ತದೆ.

 

ನಮೂನೆ-11 (Form-11)ಎಂದರೇನು???

ಗ್ರಾಮ ಪಂಚಾಯತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳ ನಿಯಮ 2006 ಮತ್ತು ತಿದುಪಡಿ ನಿಯಮಗಳು 2013ರನ್ವಯ ನಿಯಮ 30ರನ್ವಯ ಗ್ರಾಮ ಪಂಚಾಯತಿಯು ತನ್ನ ವ್ಯಾಪ್ತಿಯಲ್ಲಿತುವ ಕೃಷಿಯೇತರ ಆಸ್ತಿಗಳಿಗೆ ವಿತರಿಸುವ ನಮೂನೆಯೇ ನಮೂನೆ-11(Form-11) ಇದನ್ನು ಭೂಮಿ ಮತ್ತು ಕಟ್ಟಡಗಳ ಬೇಡಿಕೆ,ವಸೂಲಿ ಮತ್ತು ಬಾಇಗಳ ವಹಿ ಎಂತಲು ಕರೆಯಲಾಗುತ್ತದೆ.

 

LEAVE A RESPONSE

Your email address will not be published. Required fields are marked *