government Government Scheme scheme.

ಯಶಸ್ವಿನಿ ಯೋಜನೆಯಡಿ ಉಚಿತ ಚಿಕಿತ್ಸೆಗೆ ಅವಧಿ ವಿಸ್ತರಣೆ

ಯಶಸ್ವಿನಿ ಯೋಜನೆಯಡಿ ಉಚಿತ ಚಿಕಿತ್ಸೆಗೆ ಅವಧಿ ವಿಸ್ತರಣೆ

ಯಶಸ್ವಿ ಯೋಜನೆ ಅಡಿಯಲ್ಲಿ ಉಚಿತ ಚಿಕಿತ್ಸೆ ಇದೆಯೇ?

 

ಹಾಗಾದರೆ ಬನ್ನಿ ಯಾರಿಗೆಲ್ಲ ಈ ಸೌಲಭ್ಯ  ದೊರೆಯಬಹುದು ತಿಳಿಯೋಣ 

 

ಪ್ರೀಯ ಸಾರ್ವಜನಿಕರೇ ರಾಜ್ಯದಲ್ಲಿ ಹಲವಾರು ಬದಲಾವಣೆಗಳನ್ನು ನಡೆಯುತ್ತಿವೆ ಅದೇ ರೀತಿ ಸರ್ಕಾರವು ಕೂಡ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು ಈಗ ಯಶಸ್ವಿನಿ ಯೋಜನೆ ಜಾರಿ ಮಾಡಿದ್ದು, ಜನವರಿಯಿಂದ ಚಿಕಿತ್ಸೆ ನೀಡಲು ಮುಂದಾಗಿದೆ. ಆದ್ದರಿಂದ ಇದರ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಹಕಾರಿ ಸಂಸ್ಥೆಗಳ ಸದಸ್ಯರು ಹಾಗೂ ಅವರ ಕುಟುಂಬಸ್ಥರಿಗೆ ಆರೋಗ್ಯ ವಿಮೆ ಒದಗಿಸುವ ಯಶಸ್ವಿನಿ ಯೋಜನೆಯನ್ನು ಜನವರಿ 2023 ರಂದು ಚಿಕಿತ್ಸೆ ನೀಡಲು ಮುಂದಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

 

ಏನಿದು ಯಶಸ್ವಿನಿ ಯೋಜನೆ?

 

ಇದು ಒಂದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಸಹಕಾರಿ ಕ್ಷೇತ್ರದ ಸದಸ್ಯರಿಗೆ ನಗದುರಹಿತ ಆರೋಗ್ಯ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ರಾಜ್ಯ ಸರ್ಕಾರದ ಮಹಾನು ‘ಯಶಸ್ವಿನಿ’ ಯೋಜನೆ ವ್ಯಾಪ್ತಿಗೆ ಈಗ ಖಾಸಗಿ ನೌಕರರನ್ನೂ ಸೇರ್ಪಡೆಗೊಳಿಸಲಾಗಿದೆ. ಈ ಮೊದಲಿನ ಮಾರ್ಗಸೂಚಿ ಅನ್ವಯ ಸರ್ಕಾರಿ ಹಾಗೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರು ಈ ಯೋಜನೆಯ ಸದುಪಯೋಗ ಪಡೆಯಲು ಅಧಿಕಾರವಿತ್ತು. ಆದರೆ ಈಗ ಮಾರ್ಗಸೂಚಿಯನ್ನು ಸ್ವಲ್ಪ ಬದಲಾವಣೆ ಮಾಡಿ ಮಾಸಿಕ 30 ಸಾವಿರ ರೂ. ಅಥವಾ ವಾರ್ಷಿಕ 30 ಲಕ್ಷ ರೂ. ವೇತನ ಪಡೆಯುವ ಖಾಸಗಿ ಕಂಪನಿಗಳ ನೌಕರರು ಸಹಕಾರಿ ಸದಸ್ಯರಾಗಿದ್ದರೆ ಯೋಜನೆಗೆ ಸೇರಬಹುದಾಗಿದೆ.

 

ನೊಂದಣಿ ಪ್ರಾರಂಭವಿದೆಯೇ?

 

ಹೌದು ಈ ಯೋಜನೆಗೆ ನೊಂದಣಿ ಈಗಾಗಲೇ ಪ್ರಾರಂಭವಾಗಿದೆ. ಇದಲ್ಲದೆ ರಾಜ್ಯದೆಲ್ಲೆಡೆಯಿರುವ ಹಾಲು ಉತ್ಪಾದಕ ಹಾಗೂ ವಿವಿಧ ಸಹಕಾರ ಸಂಘಗಳು ಕಡಿಮೆ ಸಂಬಳ ಗೌರವಧನ ಪಡೆಯುತ್ತಿರುವ ಸಿಬ್ಬಂದಿ ಕುಟುಂಬ ಸದಸ್ಯರ ಹೆಸರಿನಲ್ಲಿ ಯಶಸ್ಸಿಗೆ ಯೋಜನೆಯಡಿ ಚಿಕಿತ್ಸೆ ಪಡೆಯಲು ಅವಕಾಶ ಇದೆ. ಬೇಗನೆ ಇದರ ನೊಂದಣಿ ಮಾಡಿಸಿ ಫಲಾನುಭವಿಗಳು ಆಗಬೇಕು. ಸಾಮಾನ್ಯ ಸೇವಾ ಕೇಂದ್ರ ಭೇಟಿ ನೀಡಿ ಅಥವಾ ಪಂಚಾಯಿತಿ ಭೇಟಿ ನೀಡಿ ಮಾಹಿತಿ ಪಡೆಯಿರಿ.

 

ಯಶಸ್ವಿನಿ ನೋಂದಣಿ ಅವಧಿ ವಿಸ್ತರಣೆ ಮಾಡಿದ‌ ಸರ್ಕಾರ ಆರೋಗ್ಯ ವಿಮಾ ಯೋಜನೆಗೆ ನೋಂದಣಿ ಅವಧಿಯನ್ನು ಒಂದು ತಿಂಗಳು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಯಶಸ್ವಿನಿ ಸರ್ಕಾರ ಯೋಜನೆಗೆ 30 ಲಕ್ಷ ಸದಸ್ಯರನ್ನು ನೋಂದಣಿ ಮಾಡುವ ಗುರಿ ಡಿಸೆಂಬರ್ ಹಾಕಿಕೊಳ್ಳಲಾಗಿದೆ ಡಿಸೆಂಬರ್ 30ಕ್ಕೆ ನೋಂದಣಿ ಮುಗಿದಿತ್ತು. ಆದರೆ ಶಾಸಕರು ಅವಧಿ ಗಡುವು ವಿಸ್ತರಣೆ ಮಾಡುವಂತೆ ಒತ್ತಡ ತಂದ ಹಿನ್ನೆಲೆಯಲ್ಲಿ 2023 ರ ಜನವರಿ 31 ರ ತನಕ ಅವಧಿ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

LEAVE A RESPONSE

Your email address will not be published. Required fields are marked *