government Government Scheme scheme.

ನರೇಗಾ ಯೋಜನೆಯಡಿ ನರ್ಸರಿ ಮಾಡಿಕೊಳ್ಳಲು ಅವಕಾಶ.

  • ನರೇಗಾ ಯೋಜನೆಯಡಿ ನರ್ಸರಿ ಮಾಡಿಕೊಳ್ಳಲು ಅವಕಾಶ.

 

ಮಡಿಕೇರಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾಗಿದ್ದು, ಗ್ರಾಮೀಣ ಭಾಗದ ಜನರು ಮತ್ತು ಮಹಿಳೆಯರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದಾರೆ 

 

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬುಧವಾರ ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಸಾಮಥ್ರ್ಯ ಸೌಧದಲ್ಲಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರುಗಳಿಗೆ ನಡೆದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರಿಗೆ ನರೇಗಾ ಯೋಜನೆಯಲ್ಲಿ ಹಲವಾರು ಸೌಲಭ್ಯಗಳಿದ್ದು, ಅದರ ಸದುಪಯೋಗವನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಸ್ವಾವಲಂಬಿ ಬದುಕು ನಡೆಸಲು ನರೇಗಾ ಸಹಕಾರಿಯಾಗಲಿದೆ ಎಂದು ತಿಳಿಸಿದರು.

 

ಸಂಪನ್ಮೂಲ ವ್ಯಕ್ತಿಗಳಾದ ಸತೀಶ್ ಅವರು ಮಾತನಾಡಿ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಆಶಯದಂತೆ ಹಸಿವು ಮುಕ್ತ ಭಾರತವಾಗಬೇಕು. ಈ ನಿಟ್ಟಿನಲ್ಲಿ ನರೇಗಾ ಯೋಜನೆಯು ಗ್ರಾಮೀಣ ಭಾಗದ ಜನರಿಗೆ ಕನಿಷ್ಠ ಆರ್ಥಿಕ ವರ್ಷದಲ್ಲಿ 100 ದಿನಗಳ ಕೂಲಿ ನೀಡುತ್ತಿದ್ದು, ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ ಇದ್ದು, ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ವೈಯಕ್ತಿಕ ಸೌಲಭ್ಯಗಳಾದ ದನದ ಕೊಟ್ಟಿಗೆ, ಕುರಿಶೇಡ್, ಆಡು ಕೊಟ್ಟಿಗೆ, ಹಂದಿಗೂಡು ಹೀಗೆ ಆರ್ಥಿಕ ಸ್ವಾವಲಂಬಿ ಬದುಕಿಗೆ ನರೇಗಾ ವರದಾನವಾಗಿದೆ ಎಂದು ತಿಳಿಸಿದರು.

 

ಕೃಷಿ ಇಲಾಖೆಯ ಅಧಿಕಾರಿ ರೀನಾ ಅವರು ಮಾತನಾಡಿ ನರೇಗಾ ಯೋಜನೆಯಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕೃಷಿಹೊಂಡ, ಎರೆಹುಳು ಘಟಕ, ರೈತರ ಜಮೀನುಗಳಲ್ಲಿ ಮಳೆ ನೀರಿನ ಸಂಗ್ರಹಣೆಗಾಗಿ ಬದುಗಳ ನಿರ್ಮಾಣವಾಗಿದ್ದು ರೈತರಿಗೆ ನರೇಗಾ ಯೋಜನೆಯು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ನೆರವಾಗಿದೆ ಎಂದು ಮಾಹಿತಿ ನೀಡಿದರು.

 

ನರೇಗಾ ಯೋಜನೆಯಡಿ ನರ್ಸರಿ ಮಾಡಿಕೊಳ್ಳಲು ಅವಕಾಶ:

 

ತೋಟಗಾರಿಕೆ ಇಲಾಖೆಯ ಅಧಿಕಾರಿ ರಮೇಶ್ ಅವರು ಮಾತನಾಡಿ ನರೇಗಾ ಯೋಜನೆಯಡಿ ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರು ನರ್ಸರಿಗಳನ್ನು ನಿರ್ಮಾಣ ಮಾಡಿಕೊಂಡಿದ್ದು ಹಾಗೂ ರೈತರಿಗೆ ಅಡಿಕೆ, ಮೆಣಸು, ಕಿತ್ತಲೆ ಕೃಷಿ ಮಾಡಲು ನರೇಗಾ ಯೋಜನೆಯಲ್ಲಿ ಅವಕಾಶವಿದೆ ಎಂದು ಮಾಹಿತಿ ನೀಡಿದರು.

 

ಸ್ವಚ್ಛ ಭಾರತ್ ಮಿಷನ್ ಸಂಯೋಜಕರಾದ ಸೂರಜ್ ಅವರು ನರೇಗಾ ಯೋಜನೆಯಡಿ ಗ್ರಾಮೀಣ ಭಾಗದ ಮನೆ ಮನೆಗಳಿಗೂ ಸೋಕ್ ಫೀಟ್‍ಗಳು ನಿರ್ಮಾಣಗೊಂಡಿದ್ದು ಸಾಂಕ್ರಾಮಿಕ ರೋಗಗಳು ಬಾರದಂತೆ ತಡೆಯಲು ಸಹಕಾರಿಯಾಗಿದೆ ಎಂದು ತಿಳಿಸಿದರು.

 

ಆಸಕ್ತ ರೈತ ಭಾಂದವರು ನರೇಗ ಯೋಜನೆಯಡಿ ಕಾಮಕಾರಿಗಳನ್ನು ಕೈಗೊಳ್ಳಲು ನಿಮ್ಮ ಗ್ರಾಮ ಪಂಚಾಯತ ಅಥವಾ ನಿಮ್ಮ ಹೋಬಳಿ ರೈತ ಸಂಪರ್ಕ ಕೇಂದ್ರ ಮತ್ತು ಹತ್ತಿರದ ತೋಟಗಾರಿಕೆ ಇಲಾಖೆ ಭೇಟಿ ಮಾಡಿ.

 

ನರೇಗಾ ಯೋಜನೆ ವೆಬ್ಸೈಟ್ ಭೇಟಿ

👇👇👇👇👇

↪️➡️   Click here 

 

ನರೇಗಾ ಯೋಜನೆ ಸಹಾಯವಾಣಿ ಸಂಖ್ಯೆ: 1800 425 8666

LEAVE A RESPONSE

Your email address will not be published. Required fields are marked *