General information ಮತದಾರ ಪಟ್ಟಿ ಮೊಬೈಲ್ ಹೆಸರು

ನಿಮ್ಮ ಮೊಬೈಲ್ ನಲ್ಲಿ ಮತದಾರರ ಪಟ್ಟಿಯಲ್ಲಿ ‌ನಿಮ್ಮ ಹೆಸರು ಸರಿಯಿದೆಯೇ ಎಂದು ಪರಿಶೀಲಿಸುವುದು ಹೇಗೆ?

ಚುನಾವಣಾ ಪಟ್ಟಿಯಲ್ಲಿ ನಿಮ್ಮ ಹೆಸರು ಸರಿಯಿದೆಯೇ? ತಂದೆಯ ಹೆಸರು(Father Name), ಹುಟ್ಟಿದ ದಿನಾಂಕ(Date of birth) ಸೇರಿದಂತೆ ಇನ್ನಿತರ ಮಾಹಿತಿ(Detail)ಯನ್ನು ಈಗ ಮೊಬೈಲ್(Mobile) ನಲ್ಲೇ ಪರಿಶೀಲನೆ ಮಾಡಬಹುದು.

ಹೌದು, ಮನೆಯಲ್ಲಿಯೇ ಕುಳಿತು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಹಾಗೂ ಏನಾದರೂ ತಪ್ಪಾಗಿದೆಯೋ ಎಂಬುದನ್ನು ಮನೆಯಲ್ಲಿಯೇ ಕುಳಿತು ನೋಡಬಹುದು. ನಿಮ್ಮ ಬಳಿ ಮೊಬೈಲ್ ಫೋನ್ ಇದ್ದರೆ ಸಾಕು, ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಚೇಕ್ ಮಾಡಬಹುದು.

ಇತ್ತೀಚಿನ ದಿನಗಳಲ್ಲಿ ಆನ್ಲೈನ್(Online) ಮೂಲಕವೂ ವೋಟರ್ ಐಡಿ(Voter I’d) ಪಡೆಯುವ ಹಾಗೂ ಮತದಾರರ ಪಟ್ಟಿ(Voter list)ಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಬಹುದು.

ಚುನಾವಣಾ ಪಟ್ಟಿಯಲ್ಲಿ ಹೆಸರು ಪರಿಶೀಲಿಸುವುದು ಹೇಗೆ?

ಚುನಾವಣಾ ಪಟ್ಟಿಯಲ್ಲಿ ನಮ್ಮ ಹೆಸರಿರುವುದನ್ನು ಸ್ಮಾರ್ಟ್ ಫೋನ್ನಲ್ಲೇ  ಪರಿಶೀಲನೆ ಮಾಡಲು ಈ

https://electoralsearch.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. 

ಆಗ ಚುನಾವಣಾ ಆಯೋಗದ ವೆಬ್ ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ ನಿಮ್ಮ ಹೆಸರು(Your Name), ತಂದೆಯ ಹೆಸರು(Father Name) ನಮೂದಿಸಬೇಕು. ವಯಸ್ಸು (Age) ಆಯ್ಕೆ ಮಾಡಿಕೊಳ್ಳಬೇಕು.

ಇಲ್ಲಿದಿದ್ದರೆ ನಿಮ್ಮ ಹುಟ್ಟಿದ ದಿನಾಂಕ (Date of Birth) ನಮೂದಿಸಬೇಕು.  

ಪುರುಷರಾಗಿದ್ದರೆ ಮೇಲ್ ಸ್ತ್ರಿಯಾಗಿದ್ದರೆ ಫಿಮೇಲ್ ಆಯ್ಕೆ ಮಾಡಿಕೊಳ್ಳಬೇಕು.

ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು.

ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಂಡನಂತರ ನಿಮ್ಮ ಮತದಾರರ ಕ್ಷೇತ್ರ ಅಂದರೆ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.

ಮುಂದೆ ಕಾಣು ಕ್ಯಾಪ್ಚ್ಯಾ ಕೋಡ್ (captcha code) ನಮೂದಿಸಿ ಸರ್ಚ್(search) ಮೇಲೆ ಕ್ಲಿಕ್ ಮಾಡಬೇಕು.

ಆಗ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು, ಚುನಾವಣಾ ಗುರುತಿನ ಚೀಟಿ ಸಂಖ್ಯೆ, ವಯಸ್ಸು, ತಂದೆಯ ಹೆಸರು, ರಾಜ್ಯ, ಜಿಲ್ಲೆ, ನಿಮ್ಮಚುನಾವಣಾ ಪೋಲಿಂಗ್ ಸ್ಥಳ, ತಾಲೂಕು ಹಾಗೂ ಜಿಲ್ಲೆ ಕಾಣುತ್ತದೆ.

ನಿಮ್ಮ ವೋಟರ್ ಐಡಿಯನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡುವುದು ಹೇಗೆ?

ಚುನಾವಣಾ ಗುರುತಿನ ಚೀಟಿಯನ್ನು ಈಗ ಆನ್ಲೈನ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬಹುದು. ಹೌದು, ಈ

https://voterportal.eci.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು, ಆಗ ಆಗ ಚುನಾವಣಾ ಆಯೋಗದ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಮೊಬಲ್ ನಂಬರ್ ಅಥವಾ ಈ ಮೇಲ್ ಐಡಿ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಒಂದು ವೇಳೆ ನೀವು ಲಾಗಿನ್ ಮಾಡಿಕೊಂಡಿರದಿದ್ದರೆ ಕ್ರಿಯೇಟ್ ಆ್ಯನ್ ಅಕೌಂಟ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಮೇಲ್ ಐಡಿ ಅಥವಾ ಮೊಬೈಲ್ ನಂಬರ್ ಎರಡರಲ್ಲಿ ಯಾವುದಾದರೊಂದನ್ನು ನಮೂದಿಸಬೇಕು. ನಂತರ ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು.  ನಂತರ ನಿಮ್ಮ ಮೊಬೈಲಿಗೆ ಒಂದು ಓಟಿಪಿ ಬರುತ್ತದೆ. ಅದನ್ನು ನಮೂದಿಸಿ ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದ ನಂತರ ಡೌನ್ಲೋಡ್- ಇಪಿಕ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು ನಂತರ ಡಿಜಿಟಲ್ ಮತದಾರರ ಐಡಿಯನ್ನು ಪಿಡಿಎಫ್ ರೂಪದಲ್ಲಿ ಡೌನ್ಲೋಡ್ ಆಗುತ್ತದೆ.

ಒಂದು ವೇಳೆ ನಿಮಗೆ ತಾಂತ್ರಿಕ ತೊಂದರೆಯಾದರೆ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಬಹುದು. 1950 ಸಹಾಯವಾಣಿ ನಂಬರಿಗೆ ಕರೆ ಮಾಡಬಹುದು.

18 ವಯೋಮಾನದವರು ಒಂದು ವೇಳೆ ತಮ್ಮ ಹೆಸರು ನೋಂದಣಿ ಮಾಡಿಸಿದ್ದರೆ ಅವರು ಆನ್ಲೈನ್ ನಲ್ಲೇ ತಮ್ಮ ಹೆಸರು ಚೆಕ್ ಮಾಡಬಹುದು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದ್ದರೆ ಆನ್ಲೈನ್ (Online) ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬಹುದು. ಚುನಾವಣಾ ಗುರುತಿನ ಚೀಟಿ ಕೇವಲ ಮತಹಾಕಲು ಕೆಲಸಕ್ಕೆಬರುವುದಿಲ್ಲ. ಸರ್ಕಾರಿ ಕೆಲಸಗಳಿಗೆ ಗುರುತಿನ ಚೀಟಿಯಾಗಿಯೂ ಇದು ಉಪಯೋಗವಾಗುತ್ತದೆ. ಹಾಗಾಗಿ ಪಿಡಿಎಫ್ ಫೈಲ್(PDF file) ನ್ನು ತಮ್ಮ ಮೊಬೈಲ್ ನಲ್ಲೇ ಸೇವ್ ಮಾಡಿಕೊಂಡು ತಮಗೆ ಬೇಕಾದಾಗ ಆನ್ಲೈನ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

LEAVE A RESPONSE

Your email address will not be published. Required fields are marked *