government Government Scheme scheme.

ಭೂರಹಿತ ಕೃಷಿ ಕಾರ್ಮಿಕರ ಮಕ್ಕಳು ರೈತ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ

ಭೂರಹಿತ ಕೃಷಿ ಕಾರ್ಮಿಕರ ಮಕ್ಕಳು ರೈತ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ ಪಡೆಯುವುದು ಹೇಗೆ?

ಆತ್ಮೀಯ ರೈತ ಬಾಂಧವರೇ, ಈಗಾಗಲೇ ಹೋದ ವರ್ಷ 2022-23 ನೇ ಸಾಲಿನಲ್ಲಿ ರೈತರ ಮಕ್ಕಳ ಖಾತೆಗಳಿಗೆ ರೈತ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನವು ಈಗಾಗಲೇ ಜಮೆಯಾಗಿದ್ದು, ಆದರೆ ಈ ವರ್ಷ ಹೊಸದಾಗಿ ಭೂ ರಹಿತ ಕೃಷಿ ಕಾರ್ಮಿಕರು ಹಾಗೂ ಇನ್ನಿತರರು ಕೂಡ ಈ ಯೋಜನೆ ಅಡಿಯಲ್ಲಿ ವಿದ್ಯಾರ್ಥಿ ವೇತನವನ್ನು ಪಡೆಯಬಹುದು.

 

ಭೂಮಿಯನ್ನು ಹೊಂದಿರುವಂತಹ ಕೃಷಿಕರ ಮಕ್ಕಳು FID ಮೂಲಕ ವಿದ್ಯಾರ್ಥಿ ವೇತನವನ್ನು ಪಡೆಯಬಹುದು, ಆದರೆ ಭೂ ರಹಿತ ಕೃಷಿ ಕಾರ್ಮಿಕರು ಹಾಗೂ ಇತರರ ಮಕ್ಕಳು ಏನು ಮಾಡಬೇಕು ಎಂಬುದರ ಬಗ್ಗೆ ಇಂದು ತಿಳಿಯೋಣ ಬನ್ನಿ.

 

1.FID without land

 

ಆತ್ಮೀಯರೇ, ಭೂಮಿ ಹೊಂದಿರುವಂತಹ ರೈತರಿಗೆ fid ಸಂಖ್ಯೆಯನ್ನು ನೀಡಲಾಗುತ್ತದೆ, ಆ FID ಸಂಖ್ಯೆಗಳಿಗೆ ರೈತರ ಜಮೀನುಗಳ ಎಲ್ಲಾ ಲಿಂಕ್ ಆಗಿರುತ್ತವೆ, ಆದರೆ ಭೂಮಿ ಇಲ್ಲದಂತಹ ಕೃಷಿ ಕಾರ್ಮಿಕರು ಹಾಗೂ ಇತರರು FID without land ಎಂದು fid ನಂಬರನ್ನು ಮಾಡಿಸಿಕೊಂಡು ಬರಬೇಕುಲ್, ಈ ನಂಬರ್ ಮೂಲಕ ಭೂಮಿ ಇಲ್ಲದಂತಹ ಕೃಷಿ ಕಾರ್ಮಿಕರು ಹಾಗೂ ಇನ್ನಿತರದ ಮಕ್ಕಳು ಕೂಡ ರೈತ ವಿದ್ಯಾನಿಧಿ ಯೋಜನೆ ಅಡಿ ವಿದ್ಯಾರ್ಥಿ ವೇತನವನ್ನು ಪಡೆಯಬಹುದು.

 

  1. MGNAREGA ID

 

ಒಂದು ವೇಳೆ ನಿಮ್ಮ ಬಳಿ ನರೇಗಾ ಐಡಿ ಕಾರ್ಡ್ ಇದ್ದಲ್ಲಿ, ಆ ನಂಬರ್ ಮೂಲಕವೂ ಕೂಡ ನೀವು ರೈತ ವಿದ್ಯಾರ್ಥಿ ಯೋಜನೆಯಡಿ ವಿದ್ಯಾರ್ಥಿ ವೇತನವನ್ನು ಪಡೆಯಬಹುದು.

 

ಇದೀಗ ಹೊಸದಾಗಿ ಅಪ್ಡೇಟ್ ಬಂದಿದ್ದು, SSP ಮೂಲಕ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸುವಾಗ ಈ ಐಡಿಗಳನ್ನು ಹಾಕುವ ಮೂಲಕ ನೀವು ಕೂಡ ರೈತ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನವನ್ನು ಪಡೆಯಬಹುದು.

 

ಆತ್ಮೀಯ ರೈತ ಬಾಂಧವರೇ 2021- 22 ನೇ ಸಾಲಿನಲ್ಲಿ ಜಾರಿಗೆ ತಂದಂತಹ ರೈತ ವಿದ್ಯಾನಿಧಿ ಯೋಜನೆಯನ್ನು ಕೇವಲ ರೈತರಿಗೆ ಮಕ್ಕಳಿಗೆ ಮಾತ್ರ ಸೀಮಿತ ಮಾಡಲಾಗಿತ್ತು,

 

ಆದರೆ ಇದೀಗ ಕೃಷಿಕರೊಂದಿಗೆ ಕೃಷಿ ಕಾರ್ಮಿಕರ ಮಕ್ಕಳಿಗೂ ರೈತ ವಿದ್ಯಾ ನಿದಿ ಯೋಜನೆಯಲ್ಲಿ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುವುದು ಎಂದು ತಿಳಿಸಲಾಗಿದೆ.

 

ಸರ್ಕಾರವು ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಇದೀಗ ರೈತರ ಮಕ್ಕಳು ಕೂಡ ವಿದ್ಯಾವಂತರಾಗಿ ಹೆಚ್ಚು ಅಭ್ಯಾಸವನ್ನು ಮಾಡಲಿ ಎಂಬ ಉದ್ದೇಶದಿಂದ ರೈತರ ಮಕ್ಕಳಿಗಾಗಿ ವಿದ್ಯಾರ್ಥಿ ವೇತನವನ್ನು ನೀಡುವ ರೈತ ವಿದ್ಯಾನಿಧಿ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಿದೆ,

 

.

 

ವಿದ್ಯಾನಿಧಿ ಹೆಚ್ಚಿನ ಮಾಹಿತಿ

 

2021-22 ನೆ ಸಾಲಿನಲ್ಲಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯನ್ನು ಘೋಷಿಸಿತು , ಹಾಗೂ ಕಳೆದ ವರ್ಷ ರೈತರ ಮಕ್ಕಳಿಗೆ ಹಣ ಕೂಡ ಜಮೆ ಆಗಿದೆ. ಈ ಯೋಜನೆ ಅಡಿ ಅರ್ಹ ರೈತರ ಮಕ್ಕಳಿಗೆ ಅವರ SSP ಸ್ಕಾಲರ್ಶಿಪ್ ನೊಂದಿಗೆ ಈ ಹಣ ಕೂಡ ಜಮೆ ಆಗಲಿದೆ.ಕರ್ನಾಟಕ ಸರ್ಕಾರವು ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಮುಖ್ಯಮಂತ್ರಿ ರೈತ ವಿದ್ಯಾನಿಧಿ ಎಂಬ ಹೊಸ ಶಿಷ್ಯವೇತನ ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದೆ.

 

10ನೇ ತರಗತಿ ಮುಗಿಸಿದಂತಹ ಎಲ್ಲ ರೈತ ಮಕ್ಕಳಿಗೆ ಈ ಯೋಜನೆಯ ಸೌಲಭ್ಯ ದೊರೆಯಲಿದೆ, ಪಿಯುಸಿ ಇಂದ ಸ್ನಾತಕೋತರ ಪದದವರೆಗಿನ ವಿಧ್ಯಾರ್ಥಿಗಳಿಗೆ ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ ಸ್ಕಾಲರ್ಶಿಪ್ ಹಣ ಜಮಯಾಗಲಿದೆ. ವಿದ್ಯಾರ್ಥಿಗಳು ಸಲ್ಲಿಸುವಂತಹ SSP ಸ್ಕಾಲರ್ಶಿಪ್ ನೊಂದಿಗೆ ಈ ಯೋಜನೆಯನ್ನು ಜೋಡಿಸಲಾಗಿದ್ದು, ಇದಕ್ಕೆ ಮತ್ತೆ ರೈತರ ಮಕ್ಕಳು ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಬೇಕಾಗಿಲ್ಲ.

 

ಯೋಜನೆಯಲ್ಲಿ ಕನಿಷ್ಠ 2500 ರೂಪಾಯಿಗಳಿಂದ 11000 ವರೆಗೆ ನೀವು ಸ್ಕಾಲರ್ಶಿಪ್ ಅನ್ನು ಪಡೆಯಬಹುದಾಗಿದೆ.

 

ಸ್ಕಾಲರ್ಶಿಪ್ ವಿವರ

 

1.ಪಿಯುಸಿ,ಐಟಿಐ ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗೆ

 

ಗಂಡು ಮಕ್ಕಳಿಗೆ= 2500 ರೂಪಾಯಿಗಳು

 

ಹೆಣ್ಣು ಮಕ್ಕಳಿಗೆ=3000 ರೂಪಾಯಿಗಳು

 

  1. ಬಿ ಇ,ಬಿ ಎಸ್ ಸಿ ,ಬಿಕಾಂ ಇತ್ಯಾದಿ ಕೋರ್ಸ್ ಗಳಿಗೆ

 

ಗಂಡು ಮಕ್ಕಳಿಗೆ= 5000 ರೂಪಾಯಿಗಳು

 

ಹೆಣ್ಣು ಮಕ್ಕಳಿಗೆ=5500 ರೂಪಾಯಿಗಳು

 

  1. ಎಲ್‌ಎಲ್‌ಬಿ, ಪ್ಯಾರಾ ಮೆಡಿಕಲ್, ಬಿ ಫಾರಂ, ನರ್ಸಿಂಗ್, ಹಾಗೂ ಇತ್ಯಾದಿ ಕೋರ್ಸ್ ಗಳಿಗೆ

 

ಗಂಡು ಮಕ್ಕಳಿಗೆ= 7500 ರೂಪಾಯಿಗಳು

 

ಹೆಣ್ಣು ಮಕ್ಕಳಿಗೆ=8000 ರೂಪಾಯಿಗಳು

 

4.ಎಂಬಿಬಿಎಸ್, ಬಿ ಇ, ಬಿಟೆಕ್ ಮತ್ತು ಎಲ್ಲಾ ಸ್ನಾತಕೋತರ ಕೋರ್ಸ್ ಗಳಿಗೆ.

 

ಗಂಡು ಮಕ್ಕಳಿಗೆ= 10,000 ರೂಪಾಯಿಗಳು

 

ಹೆಣ್ಣು ಮಕ್ಕಳಿಗೆ=11,000 ರೂಪಾಯಿಗಳು.

 

ಒಂದು ಕುಟುಂಬದಿಂದ ಎಷ್ಟು ಜನ ಪಡೆಯಬಹುದು:

 

ಈ ವಿದ್ಯಾರ್ಥಿ ವೇತನವನ್ನು ಕುಟುಂಬದಲ್ಲಿ ಎಷ್ಟೇ ಮಕ್ಕಳಿದ್ದರೂ ಕೂಡ ಪಡೆಯಬಹುದು.

 

ಹೆಣ್ಣು ಮಕ್ಕಳಿಗೆ 8 ನೆ ತರಗತಿಯಿಂದಲೇ ರೈತ ವಿದ್ಯಾನಿಧಿ ಯೋಜನೆಯಡಿಯಲ್ಲಿ ಪ್ರತಿ ವರ್ಷ 2000 ರೂಪಾಯಿಗಳನ್ನು ನೀಡುತಿದ್ದು, ಗಂಡುಮಕ್ಕಳಿಗೆ ಈ ಹಿಂದಿಂನಂತೆ sslc ಮುಗಿದ ಬಳಿಕ ವಿದ್ಯಾರ್ಥಿವೇತನ ದೊರಕಲಿದೆ.

LEAVE A RESPONSE

Your email address will not be published. Required fields are marked *