Government Scheme govt. scheme.

ಹೊಸ ರೇಷನ್ ಕಾರ್ಡ್ ಲೀಸ್ಟ್‌ನಲ್ಲಿ ನಿಮ್ಮ ಹೆಸರಿದೆಯಾ? ಮೊಬೈಲ್‌ನಲ್ಲೇ ಚೆಕ್ ಮಾಡಿ

ಹೊಸ ರೇಷನ್ ಕಾರ್ಡ್ ಲೀಸ್ಟ್‌ನಲ್ಲಿ ನಿಮ್ಮ ಹೆಸರಿದೆಯಾ? ಮೊಬೈಲ್‌ನಲ್ಲೇ ಚೆಕ್ ಮಾಡಿ
ಹೊಸ ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ? ರೇಷನ್ ಕಾರ್ಡ್‌ಗಾಗಿ ಸಲ್ಲಿಸಿದ್ದ ಅರ್ಜಿ ಸ್ಥಿತಿ ಏನಾಯ್ತು? ನಿಮ್ಮ ರೇಷನ್ ಕಾರ್ಡ್ ಆಕ್ಟೀವ್ ಆಗಿದೆಯೋ ಇಲ್ಲವೋ? ಎಂಬ ಗೊಂದಲವನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು…
ಹೊಸ ರೇಷನ್ ಕಾರ್ಡ್ ಪಡೆಯಲು ಕಾತುರದಿಂದ ಕಾಯುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಎಪಿಎಲ್, ಬಿಪಿಎಲ್ ಕಾರ್ಡ್‌ಗಳಿಗಾಗಿ ಅರ್ಜಿ ಸಲ್ಲಿಸಿ ಹಲವು ತಿಂಗಳುಗಳು ಕಳೆದಿದ್ದರೂ ಲಕ್ಷಾಂತರ ಜನರ ಅರ್ಜಿಗಳಿಗೆ ಸದ್ಗತಿ ಸಿಗುತ್ತಿಲ್ಲ. 
ಹೊಸ ಪಡಿತರ ಕಾರ್ಡ್ ಅರ್ಜಿ ಸಲ್ಲಿಸಲು ಯಾವುದೇ ನಿರ್ಬಂಧವಿಲ್ಲ, ಆದರೆ ಕಾರ್ಡು ಇಂತಿಷ್ಟೇ ದಿನಕ್ಕೆ ಬರಲಿದೆ ಎಂಬುವುದನ್ನು ಮಾತ್ರ ನಿರೀಕ್ಷಿಸಬೇಡಿ ಎಂಬ ಉತ್ತರ ಇಲಾಖೆಯ ಮೂಲಗಳಿಂದ ಸಿಗುತ್ತದೆ. ವರ್ಷದ ಹಿಂದೆಯೇ ಹೊಸ ಪಡಿತರ ಚೀಟಿಗೆಂದು ಅರ್ಜಿ ಸಲ್ಲಿಸಿ ಕಾಯುತ್ತಿರುವ ಲಕ್ಷಾಂತರ ಮಂದಿಗೆ ಈವರೆಗೂ ಪಡಿತರ ಚೀಟಿ ಸಿಕ್ಕಿಲ್ಲ.
ರೇಷನ್ ಕಾರ್ಡ್‌ಗಾಗಿ ಸಲ್ಲಿಸಿದ್ದ ತಮ್ಮ ಅರ್ಜಿ ಏನಾಯ್ತು? ಹೊಸ ರೇಷನ್ ಕಾರ್ಡ್ ಪಟ್ಟಿಯಲ್ಲಿ ನಮ್ಮ ಹೆಸರಿದೆಯೋ ಇಲ್ಲವೋ? ನಮ್ಮ ರೇಷನ್ ಕಾರ್ಡ್ ಆಕ್ಟೀವ್ ಆಗಿದೆಯೋ ಇಲ್ಲವೋ? ಎಂಬ ಗೊಂದಲ ಅನೇಕರಲ್ಲಿದೆ. ನಿಮ್ಮಲ್ಲಿ ಸ್ಮಾರ್ಟ್‌ಫೋನ್ ಇದ್ದರೆ ಈ ಗೊಂದಲವನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು.
√.  ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ? ಇಲ್ಲವೋ? ಎಂಬುವುದನ್ನು ಚೆಕ್ ಮಾಡಲು ಇಲ್ಲಿ ಕ್ಲಿಕ್ / 

Click here

√.   Village List ಮಾಡಿದರೆ, ನಿಮಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಾಲತಾಣದ ಪುಟ ತೆರೆದುಕೊಳ್ಳುತ್ತದೆ. 

√.    ಅಲ್ಲಿ ಎಡಬದಿಯಲ್ಲಿ ಕಾಣುವ ಮೂರು ಅಡ್ಡ ಗೆರೆಯ ಮೇಲೆ ಒತ್ತಿದರೆ ವಿಧಾನ, ಇ-ಪಡಿತರ ಚೀಟಿ, ಇ-ಸ್ಥಿತಿ, ಇ-ನ್ಯಾಯಬೆಲೆ ಅಂಗಡಿ, ಸಾರ್ವಜನಿಕ ದೂರು & ಬಹುಮಾನ ಯೋಜನೆ, ಎಸ್‌ಎಂಎಸ್, ಅಂಕಿಅಂಶ, ಟೆಂಡರ್ ಸೇರಿದಂತೆ ವಿವಿಧ ಸೇವೆಗಳ ಪಟ್ಟಿ ಕಾಣಿಸುತ್ತದೆ.
√.  ಅವುಗಳಲ್ಲಿ ಎರಡನೇ ಸಾಲಿನಲ್ಲಿರುವ ಇ-ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿದರೆ ವಿವಿಧ ಆಪ್ಷನ್‌ಗಳು ಕಾಣಿಸುತ್ತದೆ. ಅದರಲ್ಲಿ 8ನೇ ಸಾಲಿನಲ್ಲಿರುವ ಹಳ್ಳಿ ಪಟ್ಟಿ (Village List) ಮೇಲೆ ಕ್ಲಿಕ್ ಮಾಡಬೇಕು. 
√.   ಆಗ Village List ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಂಡು Go ಮೇಲೆ ಕ್ಲಿಕ್ ಮಾಡಬೇಕು.
√.  ಆಗ ನಿಮ್ಮೂರಿನಲ್ಲಿರುವ ಅಷ್ಟೂ ರೇಷನ್ ಕಾರ್ಡ್ ಹೊಂದಿರುವವರ ಪಟ್ಟಿ ಕಾಣುತ್ತದೆ. ರೇಷನ್ ಕಾರ್ಡ್ ನಂಬರ್, ಹೆಸರು, ವಿಳಾಸ ಹಾಗೂ ಯಾವ ಕಾರ್ಡ್ (ಬಿಪಿಎಲ್ ಕಾರ್ಡ್ ಅಥವಾ ಎಪಿಎಲ್ ಕಾರ್ಡ್), ಕುಟುಂಬದಲ್ಲಿ ಎಷ್ಟು ಜನರಿದ್ದಾರೆ ಎಂಬ ವಿವರವಾದ ಮಾಹಿತಿ ಕಾಣುತ್ತದೆ. 
√. ಕೆಳಗಡೆ ಇರುವ ಒಂದೊಂದೇ ಪುಟ ಸಂಖ್ಯೆ ಮೇಲೆ ಕ್ಲಿಕ್ ಮಾಡುತ್ತ ನಿಮ್ಮ ಹೆಸರನ್ನು ಹುಡುಕಬೇಕು. ಆ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರಿದೆ ಎಂದರ್ಥ.
ಇದೇ ರೀತಿ ಪಡಿತರ ಚೀಟಿ ತೋರಿಸು ಆಪ್ಷನ್ ಮೇಲೆ ಕ್ಲಿಕ್ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸುವ ಮೂಲಕ ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಇದೆಯೋ ಇಲ್ಲವೋ ಎಂಬುದನ್ನು ಕೂಡ ಚೆಕ್ ಮಾಡಬಹುದು
√.  ಇನ್ನು ಇ-ಸ್ಥಿತಿ ಮೇಲೆ ಕ್ಲಿಕ್ ಮಾಡಿ, ಅದರಲ್ಲಿ ಕಾಣುವ ಹೊಸ ಹಾಲಿ ಪಡಿತರ ಚೀಟಿಯ ಸ್ಥಿತಿ ಮೇಲೆ ಕ್ಲಿಕ್ ಮಾಡಿ.
√.  ನಿಮ್ಮ ಜಿಲ್ಲೆಯ ಪಟ್ಟಿ ಕ್ಲಿಕ್ ಮಾಡಿದರೆ, ಹೊಸ ಪಡಿತರ ಚೀಟಿಗೆ ಸಲ್ಲಿಸಲಾದ ಅರ್ಜಿಯ ಸ್ಥಿತಿ, ಪಡಿತರ ಚೀಟಿ ವಿವರ, ಪಡಿತರ ಚೀಟಿಯ ಬದಲಾವಣೆಯ ಕೋರಿಕೆ ಸ್ಥಿತಿ, ಪಡಿತರ ನಿರಾಕರಣೆ ನೋಂದಣಿ ಇತ್ಯಾದಿ ವಿವರಗಳ ಪಟ್ಟಿ ತೆರೆದುಕೊಳ್ಳುತ್ತದೆ. 
√.  ನಿಮಗೆ ಬೇಕಾದ ವಿವರದ ಮೇಲೆ ಒತ್ತಿ ಮಾಹಿತಿ ಪಡೆದುಕೊಳ್ಳಬಹುದು.

LEAVE A RESPONSE

Your email address will not be published. Required fields are marked *