Government Scheme schemes

ಮೀನು ಕೃಷಿಕರ ವಿದ್ಯಾನಿಧಿ ಯೋಜನೆಯಡಿ ಅರ್ಜಿ ಆಹ್ವಾನ

ಮೀನುಗಾರರ, ಮೀನು ಕೃಷಿಕರ ವಿದ್ಯಾನಿಧಿ ಯೋಜನೆಯಡಿ ಅರ್ಜಿ ಆಹ್ವಾನ

ರಾಯಚೂರು: ಮೀನುಗಾರಿಕೆ ಇಲಾಖೆಯ ವತಿ ಯಿಂದ ಪ್ರಸಕ್ತ ಸಾಲಿನಲ್ಲಿ ಮೀನುಗಾರರ, ಮೀನುಕೃಷಿಕರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು “ಮುಖ್ಯಮಂತ್ರಿ ಮೀನುಗಾರರ, ಮೀನುಕೃಷಿಕರ ವಿದ್ಯಾನಿಧಿ ಯೋಜನೆ” ಯನ್ನು ಘೋಷಿಸಿದ್ದು, ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಮೀ ನುಗಾರರ, ಮೀನುಕೃಷಿಕರ ಮಕ್ಕ ಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಿನುಗಾರಿಕೆ ಉಪ ನಿರ್ದೇಶಕರು ತಿಳಿಸಿದರು.

8,9,10, ಪಿಯುಸಿ, ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಯ ಲ್ಲಿ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಮೀನುಗಾರರ ಸಹಕಾರ ಸಂಘದ ಸದಸ್ಯರ ಹಾಗೂ ಮೀನುಕೃಷಿಕರ ಮಕ್ಕಳು ತಾಲ್ಲೂಕು ಸಹಾಯಕ ನಿರ್ದೇಶಕರು ಅಥವಾ ಮೀನುಗಾರಿಕೆ ಉಪ ನಿರ್ದೇಶಕರ ಕಛೇರಿ ಇಂದ ಮಾಹಿತಿ ಪಡೆದು, ಶ್ರೀಘ್ರವಾಗಿ FRUITS ID ಸೃಜನ ಮಾಡಿಕೊಳ್ಳಬೇಕು.

8ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಅರ್ಹತೆಯ ಆಧಾರದ ಮುಖಾಂತರ ವಿದ್ಯಾರ್ತಿವೇತನವನ್ನು ಪಾವತಿ ಮಾಡಲಾಗುವುದು. ಪಿಯುಸಿ ಮತ್ತು ತದನಂತರದ ಕೊರ್ಸಗಳಲ್ಲಿ ಓದುತ್ತಿ ರುವ ಅರ್ಹ ವಿದಾರ್ಥಿಗಳು ಮುಖ್ಯಮಂತ್ರಿ ಮೀನುಗಾರರ, ಮೀನುಕೃಷಿಕರ ವಿದ್ಯಾನಿಧಿ ಯೋಜನೆ” ಯಡಿ ವಿದ್ಯಾರ್ಥಿ ವೇತನ ಪಡೆಯಲು ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ ನಲ್ಲಿ ನೊಂ ದಾಯಿಸಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಉಪನಿರ್ದೇಶಕರು ರಾಯಚೂರು ಮತ್ತು ಮೀನು ಗಾರಿಕೆ ಸಹಾಯಕ ನಿರ್ದೇಶಕರು ರಾಯಚೂರು,ಸಿಂಧನೂರು,ಲಿಂ ಗಸುಗೂರು ಕಛೇರಿಗಳಿಗೆ ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ:08532-231871 ಮಿನು ಗಾರಿಕೆ ಉಪನಿರ್ದೇಶಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A RESPONSE

Your email address will not be published. Required fields are marked *