governament Government Scheme scheme.

ರಾಜ್ಯದ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗ ಧನಸಹಾಯಕ್ಕೆ ಅರ್ಜಿ ಆಹ್ವಾನ

ರಾಜ್ಯದ ಶಿಕ್ಷಕರ ಮಕ್ಕಳ ಉನ್ನತ

ವ್ಯಾಸಂಗ ಧನಸಹಾಯಕ್ಕೆ ಅರ್ಜಿ

ಆಹ್ವಾನ

2022-23ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯ ಮಂಜೂರು ಮಾಡುವ ಸಲುವಾಗಿ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನದಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ, 2022-23ನೇ ಶೈಕ್ಷಣಿಕ ಸಾಲಿಗೆ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗ ಧನಸಹಾಯ ಮಂಜೂರು ಮಾಡುವ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

2022-23ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯ ಮಂಜೂರು ಮಾಡುವ ಸಲುವಾಗಿ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನದಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಅರ್ಹ ಶಿಕ್ಷಕರು, ನಿವೃತ್ತ ಶಿಕ್ಷಕರು, ಉಪನ್ಯಾಸಕರು, ನಿವೃತ್ತ ಉಪನ್ಯಾಸಕರು, ಪ್ರಾಂಶುಪಾಲರು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಲೂ ಸೂಚಿಸಲಾಗಿದೆ.

ಒಂದು ಕುಟುಂಬಕ್ಕೆ ಒಬ್ಬ ವಿದ್ಯಾರ್ಥಿಗೆ ಮಾತ್ರ ಧನಸಹಾಯ ನೀಡಲಾಗುವುದು. ವಿದ್ಯಾರ್ಥಿಯ ತಂದೆ/ತಾಯಿ ಇಬ್ಬರು ಶಿಕ್ಷಕರು/ ಉಪನ್ಯಾಸಕರಾಗಿದ್ದಲ್ಲಿ ಅಂತಹ ಕುಟುಂಬಕ್ಕೆ ಒಬ್ಬರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಕಛೇರಿಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ದಿನಾಂಕ 28-02-2023 ರೊಳಗೆ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಹೆಚ್ಚಿನ ಮಾಹಿತಿಗಾಗಿ ಆಸಕ್ತ ಅಭ್ಯರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌

Click here

ಗೆ ಭೇಟಿ ನೀಡಿ.

ಅಂತಿಮ ದಿನಾಂಕದ ನಂತರ ಯಾವುದೇ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಸುತ್ತೋಲೆಯನ್ನು ಕ್ಷೇತ್ರಶಿಕ್ಷಣಾಧಿಕಾರಿಗಳು ಕಛೇರಿಯ ಪ್ರಕಟಣಾ ಫಲಕದ ಮೇಲೆ ಕಡ್ಡಾಯವಾಗಿ ಪ್ರಕಟಿಸುವಂತೆ ಸೂಚಿಸಿದೆ.

ಈ ಕೆಳಕಂಡ ನ್ಯೂನ್ಯತೆಗಳನ್ನೊಳಗೊಂಡ ಅರ್ಜಿಗಳನ್ನು ತಿರಸ್ಕರಿಸಲಾಗುವುದು

√. ನಿಯಂತ್ರಣಾಧಿಕಾರಿಗಳ ಸಹಿ ಇಲ್ಲದೆ ನೇರವಾಗಿ ಸೇವೆಯಲ್ಲಿರುವ ಶಿಕ್ಷಕರು ಸಲ್ಲಿಸಿದ ಅರ್ಜಿಗಳು.

√.ಅರ್ಜಿಯಲ್ಲಿ ನಮೂದಾಗದೇ ಇರುವ ಕೋರ್ಸ್‌ಗಳು.

√.  CA,PHD ಕೋರ್ಸ್‌ಗಳಿಗೆ ಧನಸಹಾಯ ನೀಡಲಾಗುವುದಿಲ್ಲ.

√.  ಶಿಕ್ಷಕರ ಸಹಿ ಇಲ್ಲದ ಅರ್ಜಿಗಳು.

√.  ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಉನ್ನತ ವ್ಯಾಸಂಗ ಧನಸಹಾಯಕ್ಕೆ ಅವಕಾಶ ಇರುವುದಿಲ್ಲ.

√.  ನಿವೃತ್ತ/ಮೃತ ಶಿಕ್ಷಕರ ಪಿಂಚಣಿ ಪತ್ರ / ವಾರಸುದಾರರ ಪ್ರಮಾಣ ಪತ್ರ ಇಲ್ಲದಿರುವ ಅರ್ಜಿಗಳು.

√.  ಪತಿ/ಪತ್ನಿ ಇಬ್ಬರು ಅರ್ಜಿ ಸಲ್ಲಿಸಿದರೆ ಒಂದೇ ಅರ್ಜಿಯನ್ನು ಪರಿಗಣಿಸಲಾಗುವುದು.

√.  ತಿದ್ದುಪಡಿಗಳನ್ನು ಹೊಂದಿರುವ ಅರ್ಜಿಗಳು.

√.  ಪ್ರಸಕ್ತ ಸಾಲಿನಲ್ಲಿ ಶಿಕ್ಷಕರ ಮಕ್ಕಳು ವ್ಯಾಸಂಗ ಮಾಡದೇ ಇದ್ದರೂ ಧನಸಹಾಯಕ್ಕೆ ಸಲ್ಲಿಸಿದ ಅರ್ಜಿಗಳು.

√.  ಅನುತ್ತೀರ್ಣ/ ಸಂಜೆ ಕಾಲೇಜು ವ್ಯಾಸಂಗದ/ ಖಾಸಗಿ / ಬಾಹ್ಯ/ ಮುಕ್ತ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸಲ್ಲಿಸಿದ ಅರ್ಜಿಗಳು.

√.  ವ್ಯಾಸಂಗ ಪ್ರಮಾಣ ಪತ್ರ ಸಲ್ಲಿಸದ ಅರ್ಜಿಗಳು.

√. ರಾಷ್ಟ್ರೀಯ ಬ್ಯಾಂಕುಗಳು ವಿಲೀನಗೊಂಡಿರುವುದರಿಂದ ಪ್ರಸ್ತುತ ಚಾಲ್ತಿಯಲ್ಲಿರುವ ಬ್ಯಾಂಕ್ ಅಕೌಂಟ್ ನಂಬರ್ ಮತ್ತು IFSE ಕೋಡ್‌ ಸಂಖ್ಯೆಯನ್ನು ಕಡ್ಡಾಯವಾಗಿ ಸಲ್ಲಿಸುವುದು.

LEAVE A RESPONSE

Your email address will not be published. Required fields are marked *