Government Scheme ಯೋಜನಾ ಸಹಾಯಧನ ಹಸು/ಎಮ್ಮೆ

ಹಸು/ಎಮ್ಮೆ ಘಟಕ ಸ್ಥಾಪನೆಗೆ ಶೇ. 33 ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನ

ರೈತರಿಗೆ ಸಂತಸದ ಸುದ್ದಿ ಪಶುಪಾಲನೆ (animal husbandry) ಮಾಡಲು ರೈತರಿಗೆ 33℅ ರಷ್ಚು ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ (Department of Veterinary Services)ವತಿಯಿಂದ 2022-23ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ (National Agricultural Development Scheme) ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿಯಲ್ಲಿ ಒಂದು ಮಿಶ್ರ ತಳಿ ಹಸು/ಎಮ್ಮೆ ಘಟಕ ಸ್ಥಾಪನೆಗೆ  ಫಲಾನುಭವಿಗಳ ಆಯ್ಕೆಗೆ ಅರ್ಜಿ(Application) ಆಹ್ವಾನಿಸಲಾಗಿದೆ.

ಒಂದು ಮಿಶ್ರ ತಳಿ ಹಸು ಎಮ್ಮೆ ಘಟಕ ಸ್ಥಾಪನೆಗೆ 62,200 ರೂಪಾಯಿ ಘಟಕ ವೆಚ್ಚವೆಂದು ನಿಗದಿಪಡಿಸಲಾಗಿದೆ. ಘಟಕ ಸ್ಥಾಪನೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಶೇ. 33 ರಂತೆ 20,665 ರೂಪಾಯಿ ಮತ್ತು ಸಾಮಾನ್ಯ ವರ್ಗದವರಿಗೆ ಶೇ. 25 ರಂತೆ 15,500 ರೂಪಾಯಿ ಸಹಾಯಧನ ನೀಡಲಾಗುವುದು. ಉಳಿದ ಮೊತ್ತವನ್ನು ಫಲಾನುಭವಿಗಳು ವಂತಿಕೆ ಅಥವಾ ಬ್ಯಾಂಕಿನಿಂದ ಸಾಲ ಪಡೆದು ಭರಿಸಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕಲಬುರಗಿ ಉಪನಿರ್ದೇಶಕ ಡಾ.ಎಸ್.ಡಿ. ಅವಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಹ ಸಾಮಾನ್ಯ, ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ, ಕೂಲಿ, ಕೃಷಿ ಕಾರ್ಮಿಕರು ಮತ್ತು ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡರೈತರು ಆಯಾ ತಾಲೂಕಿನಲ್ಲಿರುವ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ (ಪಶು ಆಸ್ಪತ್ರೆ)ಯಿಂದ ಅರ್ಜಿ ಪಡೆದು ಭರ್ತಿ ಮಾಡಿ ಅದರೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಬೇಕು ಕಚೇರಿಗೆ 2023ರ ಜನವರಿ 3 ರ ಸಂಜೆ 5 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯಾವ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ?

5 ವರ್ಷಗಳ ಹಿಂದೆ

ವಿವಿಧ ಯೋಜನೆಗಳಲ್ಲಿ ಹೈನುಗಾರಿಕೆಗೆ ಸಹಾಯಧನ ಸವಲತ್ತು ಪಡೆದಿರುವ ಕುಟುಂಬಗಳು ಮತ್ತೇ ಈ ಯೋಜನೆಯ ಸವಲತ್ತು ಪಡೆಯಲು ಅರ್ಹರಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ತಾಲೂಕಿನ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದು.

ಪ್ರಾಣಿ ಕಲ್ಯಾಣಿ ಸಹಾಯವಾಣಿ

ಪಶುಪಾಲನೆ, ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಕುರಿತಂತೆ ಮಾಹಿತಿ ಕೇಳಲು ದಿನದ 24 ಗಂಟೆಗಳ ಕಾಲ ರೈತರು 8277 100 200 ಗೆ ಕರೆ ಮಾಡಬಹುದು. ಈ ಉಚಿತ ಸಹಾಯವಾಣಿ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ.

LEAVE A RESPONSE

Your email address will not be published. Required fields are marked *