government Government Scheme scheme.

ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಉಚಿತ ಬೈಕ್ ಹಾಗೂ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಉಚಿತ ಬೈಕ್ ಹಾಗೂ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ರಾಯಚೂರು : ಜ-11(ಕ.ವಾ) 2022-23 ನೇ ಸಾಲಿನಲ್ಲಿ ಡಾ:ಬಿ. ಆರ್.ಅಂಬೇಡ್ಕರ ಅಭಿವೃದ್ಧಿ ನಿಗ ಮವು ಅನುಷ್ಠಾನಗೊಳಿಸುತ್ತಿರುವ ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ(ದ್ವಿ-ಚಕ್ರ/ತ್ರಿ-ಚಕ್ರ ಸರಕು ಸಾಗಾಣಿಕೆ ವಾಹನ) ಹಾಗೂ ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆ( ಮಹಿಳಾ ಸ್ವಸಹಾಯ ಗುಂಪುಗಳಿಗೆ) ಯೋಜನೆಗಳಿಗೆ ಫಲಾಪೇಕ್ಷಿಗಳಿಂದ ಅರ್ಜಿ ಸಲ್ಲಿಸಲು ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಡಾ.ಬಿ.ಆರ್ ಅಂಬೇಡ್ಕರ್ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

 

ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ click here   ಒನ್‌ ಅಥವಾ ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಸೆಂಟರ್(ಕೇಂದ್ರ)ಗಳಲ್ಲಿ  ಆನ್ಲೈನ್ ಮುಖಾಂತರ ಆಸಕ್ತರು ಮೇಲಿನ ಯೋಜನೆ ಗಳಿಗೆ ಅರ್ಜಿ ಗಳನ್ನು ಸಲ್ಲಿಸಿ ಸದುಪಯೋಗ ಪಡಿಸಿಕೊಳ್ಳಲು ಈ ಮೂಲಕ ತಿಳಿಸಲಾಗಿದೆ….

 

ಅರ್ಜಿಗಳನ್ನು ಜ.16ರೊಳ ಗಾಗಿ ಸಲ್ಲಿಸಬಹುದಾಗಿದ್ದು.

 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು 

1.ಅರ್ಜಿ ಸಲ್ಲಿಸುವ ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.

2.ಹಾಗೂ ಕರ್ನಾಟಕ ರಾಜ್ಯ ವಾಸಿ ಯಾಗಿರಬೇಕು. ಅರ್ಜಿದಾ ರರುಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ ರೂ.1,50,000-00 ಮತ್ತು ನಗರ ಪ್ರದೇಶದಲ್ಲಿ ರೂ. 2,00,000- 00 ಗಳ ಮಿತಿಯಲ್ಲಿರಬೇಕು.

3.ಅಜಿ ೯ದಾರರರು ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯಡಿ ಕನಿಷ್ಠ 21 ವರ್ಷಗಳಿಂದ ಗರಿಷ್ಠ 50 ವರ್ಷದೊಳಗಿರಬೇಕು.

 

4.ಹಾಗೂ ಮೈಕ್ರೋ ಕ್ರೆಡಿಟ್ (ಪ್ರೇರಣಾ)ಯೊ ಜನೆಯಡಿ ಕನಿಷ್ಠ 21 ವರ್ಷಗಳಿಂ ದ ಗರಿಷ್ಠ 60 ವರ್ಷದೊಳಗಿರಬೇಕು.

 

5.ಅರ್ಜಿದಾರರು ಅಥವಾ ಅವರ ಕುಟುಂ ದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು ಮತ್ತು ಸರ್ಕಾರಿ/ ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿ ಯಲ್ಲಿರಬಾರದು

 

6.ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯಡಿ ನಿಗಮದಿಂದ ಸ್ವಯಂ ಉದ್ಯೋಗಕ್ಕಾಗಿ ದ್ವಿ-ಚಕ್ರ/ತ್ರಿ-ಚಕ್ರ ಸರಕು ಸಾಗಾಣಿಕೆ ವಾಹನ ಉದ್ದೇಶಗಳಿಗೆ ಘಟಕ ವೆಚ್ಚದಲ್ಲಿ ರೂ. 50,000- 00 ಗಳ ಸಹಾಯಧನ ಹಾಗೂ ರೂ. 20,000-00 ಗಳ ಸಾಲ ಮಂಜೂರು ಮಾಡಲಾಗುವುದು ಹಾಗೂ ಉಳಿದ ಮೊತ್ತ ಬ್ಯಾಂಕ್ ಸಾಲವನ್ನಾಗಿ ಅರ್ಜಿದಾರರ ಸೇವಾ ವ್ಯಾಪ್ತಿಯ ಬ್ಯಾಂಕುಗಳಿಂದ ಮಂಜೂರಾತಿ ಪಡೆಯುವ ಷರತ್ತಿಗೆ ಒಳಪಟ್ಟು ಸಹಾಯಧನ ಮತ್ತು ಸಾಲ ಮಂಜೂರು ಮಾಡಲಗುತ್ತೆ.

 

7.ವಾಹನಗಳ ಸೌಲಭ್ಯ ಪಡೆ ಯಲು ಫಲಾಪೇಕ್ಷಿಗಳು ಡ್ರೈವಿಂಗ್ ಲೈಸೆನ್ಸ್ ಹೊಂದಿರ ಬೇಕು

 

8.ಮೈಕ್ರೋ ಕ್ರೆಡಿಟ್ (ಪೇರಣಾ) ಯೋ ಜನೆಯಡಿ ಕನಿಷ್ಠ 10 ಮಹಿಳೆಯರು ಸ್ವ-ಸಹಾಯ ಗುಂಪಿನಲ್ಲಿ ಸದಸ್ಯರಿ ರತಕ್ಕದ್ದು, ಸಂಘದ ಸದಸ್ಯರು ಬಿಪಿಎಲ್‌ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಹೊಂದಿರಬೇಕು.

 

9.ನೊಂದಾಯಿತ ಮಹಿಳಾ ಸ್ವ ಸಹಾಯ ಸಂಘ ಸಹಾಯ ಸಂಘಗಳನ್ನು ಮಾತ್ರ ಪರಿಗಣಿಸಲಾಗುವುದು. ಹಾಗೂ ಸಂಘದ ಹೆಸರಿನಲ್ಲಿ ಬ್ಯಾಂಕ್ ಖಾತೆ ಹೊಂದಿರಬೇಕು.

 

10.ಸಂಘದ ಒಬ್ಬ ಸದಸ್ಯರಿಗೆ ರೂ. 25,000-00 ರಂತೆ (ರೂ. 15,000-00 ಸಹಾಯಧನ ಹಾ d. 10,000-00) ಒಟ್ಟು 10 ಸದಸ್ಯರಿಗೆ ಒಟ್ಟು ರೂ. 2,50 ಲಕ್ಷ ನಿಗಮದಿಂದ ನೇರವಾ ಗಿ ಮಂಜೂರು ಮಾಡ ಲಾಗುವು ದು.

 

ಹೆಚ್ಚಿನ ಮಾಹಿತಿ ಗಾಗಿ ಡಾ: ಬಿ.ಆರ್.ಅಂಬೇಡ್ಕರ ಅಭಿವೃದ್ಧಿ ನಿಗಮ ರಾಯಚೂರು ಜಿಲ್ಲೆ ಚೈತನ್ಯ ಆಸ್ಪತ್ರೆ ಹತ್ತಿರ, ಡ್ಯಾಡಿ ಕಾಲೋನಿ ಲಿಂಗಸೂಗೂರು ರೋಡ್ ರಾಯಚೂರು -584 101, ದೂರವಾಣಿ ಸಂಖ್ಯೆ: 08532 -220 7741 ಸಂಪರ್ಕಿಸಬಹು ದೆಂದು ಡಾ.ಬಿ. ಆರ್ ಅಂಬೇಡ್ಕರ್ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

 

LEAVE A RESPONSE

Your email address will not be published. Required fields are marked *