governament Government Scheme scheme.

ಮೊಬೈಲ್ನಲ್ಲಿಯೇ ನಿಮ್ಮೂರಿನ ನಕ್ಷೆ, ಕಾಲು ದಾರಿ ಹಾಗೂ ಬಂಡಿ ದಾರಿಯ ಮಾಹಿತಿಯನ್ನು ಎರಡೇ ನಿಮಿಷದಲ್ಲಿ ಡೌನ್ಲೋಡ್ ಮಾಡಬಹುದು

ನಿಮ್ಮ ಮೊಬೈಲ್ನಲ್ಲಿಯೇ ನಿಮ್ಮೂರಿನ

ನಕ್ಷೆ, ಕಾಲು ದಾರಿ ಹಾಗೂ ಬಂಡಿ

ದಾರಿಯ ಮಾಹಿತಿಯನ್ನು ಎರಡೇ

ನಿಮಿಷದಲ್ಲಿ ಡೌನ್ಲೋಡ್

ಮಾಡಬಹುದು ಹೇಗೆ?

ಆತ್ಮೀಯ ರೈತ ಬಾಂಧವರೇ, ನಿಮ್ಮೂರಿನ ನಕ್ಷೆಯ ಬಗ್ಗೆ

ನಿಮಗೆ ಮಾಹಿತಿ ಇದೆಯೇ? ಕಾಲುದಾರಿ ಎಲ್ಲಿದೆ, ಬಂಡೆ ದಾರಿ

ಎಲ್ಲಿದೆ? ಹೀಗೆ ಇನ್ನೂ ಅನೇಕ ವಿಷಯಗಳ ಸಂಪೂರ್ಣ

ಮಾಹಿತಿಯನ್ನು ನೀವು ನಿಮ್ಮ ಊರಿನ ನಕ್ಷೆಯ ಮೂಲಕ ಪಡೆಯಬಹುದಾಗಿದೆ.

 

ಬನ್ನಿ ಹಾಗಾದರೆ ನಿಮ್ಮೂರಿನ ನಕ್ಷೆಯನ್ನು ನಿಮ್ಮ ಮೊಬೈಲ್ ನಲ್ಲಿಯೇ ಡೌನ್ಲೋಡ್ ಮಾಡುವುದು ಹೇಗೆ ಎಂದು ನೋಡೋಣ.

 

ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಒತ್ತಿ –

Click here

 

 

ಮೊಟ್ಟ ಮೊದಲಿಗೆ ಗೂಗಲ್ ನಲ್ಲಿ bhoomi revenue maps ಎಂದು ಟೈಪ್ ಮಾಡಿ.

 

 

 

 

ಅಲ್ಲಿ ಬರುವಂತಹ ಮೊದಲನೇ ಆಪ್ಷನ್ ಅನ್ನು ಆಯ್ಕೆ ಮಾಡಿ.

 

 

 

ಮುಂದೆ ಓಪನ್ ಆಗುವಂತಹ ಹೊಸ ಟ್ಯಾಬ್ ನಲ್ಲಿ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಗ್ರಾಮವನ್ನು ಆಯ್ಕೆ ಮಾಡಿ.

 

ಎಲ್ಲವನ್ನು ಆಯ್ಕೆ ಮಾಡಿದ ನಂತರ ನಿಮ್ಮ ಗ್ರಾಮದ ಮುಂದೆ ಡೌನ್ಲೋಡ್ ಪಿ ಡಿ ಎಫ್ ಎಂಬ ಆಪ್ಷನ್ ಇರುತ್ತದೆ.

 

ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನಿಮ್ಮ ಊರಿನ ನಕ್ಷೆಯನ್ನು ನಿಮ್ಮ ಮೊಬೈಲ್ ನಲ್ಲಿಯೇ ಕೇವಲ ಎರಡು ನಿಮಿಷದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

 

ನಕ್ಷೆಯಿಂದ ನಮಗೆ ಸಿಗುವ ಮಾಹಿತಿ ಏನು?

 

ಈ ನಕ್ಷೆಯ ಮೂಲಕ ನೀವು ನಿಮ್ಮ ಗ್ರಾಮದ ಹಲವಾರು ಮಾಹಿತಿಗಳನ್ನು ಪಡೆಯಬಹುದಾಗಿದೆ, ಅವುಗಳು ಏನೆಂದರೆ

 

– ಗ್ರಾಮದ ಗಡಿ ರೇಖೆ

 

– ಸರ್ವೇ ನಂಬರ್ ಗಡಿ

 

– ಕಾಲುದಾರಿ

 

– ಬಂಡೆ ದಾರಿ

 

– ರಸ್ತೆ

 

– ನದಿ

 

– ಹಳ್ಳಕೊಳ್ಳಗಳು

 

– ಸರ್ವೇ ನಂಬರ್

 

– ಗುಡ್ಡ

 

– ಕೆರೆ

 

– ನೀರು ಹರಿಯುವ ದಿಕ್ಕು

 

ಹಾಗೂ ಮುಂತಾದ ಮಾಹಿತಿಗಳನ್ನು ನೀವು ನಕ್ಷೆಯ ಮೂಲಕ ಪಡೆದುಕೊಳ್ಳಬಹುದಾಗಿದೆ.

 

ನಕ್ಷೆಯ ಲಾಭಗಳೇನು?

 

– ಈ ನಕ್ಷೆಗಳ ಮೂಲಕ ನಾವು ನಮ್ಮ ಗ್ರಾಮದಲ್ಲಿ ನಮ್ಮ ಹೊಲಕ್ಕೆ ಹೋಗಲು ಕಾಲುದಾರಿಯ ಯಾವುದು? ಬಂಡೆ ದಾರಿ ಯಾವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು.

 

ಕೆಲವೊಂದು ಬಾರಿ ನೆರೆಹೊರೆಯ ರೈತರ ನಡುವೆ ದಾರಿಯ ಸಂಬಂಧ ಜಗಳವಾಗುವುದನ್ನು ನಾವು ಹಲವಾರು ಬಾರಿ ನೋಡಿದ್ದೇವೆ, ಈ ನಕ್ಷೆಯ ಮೂಲಕ ನೆರೆಹೊರೆಯ ಹೊಲದವರೊಂದಿಗೆ ಆಗುವ ಜಗಳಗಳನ್ನು ತಪ್ಪಿಸಬಹುದು.

 

– ಈ ನಕ್ಷಯೊಂದಿಗೆ ನಾವು ನೀರು ಹರಿಯುವ ದಿಕ್ಕನ್ನು ತಿಳಿದುಕೊಳ್ಳಬಹುದು, ಆ ಮೂಲಕ ಹೊಸದಾಗಿ ಹೊಲವನ್ನು ಖರೀದಿ ಮಾಡುವಾಗ ಯಾವ ಭಾಗದಲ್ಲಿ ಖರೀದಿ ಮಾಡಿದರೆ ಚೆನ್ನಾಗಿ ನೀರಿನ ವ್ಯವಸ್ಥೆ ಸಿಗುತ್ತದೆ ಎಂಬುದರ ಬಗ್ಗೆ ಆಲೋಚಿಸಿ ಖರೀದಿ ಮಾಡಬಹುದು.

 

– ಈ ನಕ್ಷೆಯ ಮೂಲಕ ರಸ್ತೆಗಳ ಬಗ್ಗೆ ನಾವು ಮಾಹಿತಿಯನ್ನು ಪಡೆಯಬಹುದಾಗಿದೆ.

 

ಹೀಗೆ ನಕ್ಷೆಯ ಮೂಲಕ ನಾವು ಹಲವಾರು ಮಾಹಿತಿಗಳನ್ನು ಪಡೆಯಬಹುದಾಗಿದೆ, ನಿಮಗೂ ನಿಮ್ಮ ಊರಿನ ಬಗ್ಗೆ ನಿಮ್ಮ ಊರಿನ ದಾರಿ, ನಿಮ್ಮ ಹೊಲಕ್ಕೆ ಹೋಗಲು ಕಾಲುದಾರಿ ಬಂಡಿ ದಾರಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು ಒಂದು ಬಾರಿ ನಿಮ್ಮ ಊರಿನ ನಕ್ಷೆಯನ್ನು ಡೌನ್ಲೋಡ್ ಮಾಡಿಕೊಂಡು ನೋಡಿ.

LEAVE A RESPONSE

Your email address will not be published. Required fields are marked *