governament Government Scheme scheme.

ಪಹಣಿ ಯಾರ ಹೆಸರಿಂದ ಯಾರ ಹೆಸರಿಗೆ ಯಾವಾಗ ಬದಲಾಗಿದೆ? ಏಕೆ ಬದಲಾಗಿದೆ?

ಪಹಣಿ ಯಾರ ಹೆಸರಿಂದ ಯಾರ

ಹೆಸರಿಗೆ ಯಾವಾಗ ಬದಲಾಗಿದೆ? ಏಕೆ

ಬದಲಾಗಿದೆ? ಎಂಬುದರ

ಮಾಹಿತಿಯನ್ನು ಕೇವಲ ಎರಡು

ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿ

ಪಡೆಯುವುದು ಹೇಗೆ.

 

ಆತ್ಮೀಯ ರೈತರೇ, ಪಹಣಿಯಲ್ಲಿ ಹೆಸರು ಯಾರ ಹೆಸರಿನಿಂದ ಯಾರ ಹೆಸರಿಗೆ, ಯಾವಾಗ, ಏಕೆ ಬದಲಾಗಿದೆ ಎಂಬುದರ ಬಗ್ಗೆ ನಿಮಗೆ ಮಾಹಿತಿ ಬೇಕಾಗಿದೆಯೇ? ಹಾಗಾದರೆ ಹೀಗೆ ಮಾಡುವ ಮೂಲಕ ನೀವು ಕೇವಲ ಎರಡು ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಬಹುದು. ಬನ್ನಿ ಹೇಗೆ ಅಂತ ನೋಡೋಣ.

 

ಬೇಕಾಗುವ ಮಾಹಿತಿ:

 

– ಜಿಲ್ಲೆ

 

– ತಾಲೂಕು

 

– ಹೋಬಳಿ

 

– ಗ್ರಾಮ

 

– ಸರ್ವೇ ನಂಬರ್

 

ಇಷ್ಟೆಲ್ಲ ಮಾಹಿತಿ ಗೊತ್ತಿದ್ದರೆ ಸಾಕು, ನೀವು ನಿಮ್ಮ ಮೊಬೈಲ್ ನಲ್ಲಿಯೇ ಪಾನಿ ಯಾರ ಹೆಸರಿಂದ ಯಾರ ಹೆಸರಿಗೆ ಯಾವಾಗ ಬದಲಾಗಿದೆ ಏಕೆ ಬದಲಾಗಿದೆ ಎಂಬುದರ ಮಾಹಿತಿಯನ್ನು ಕೇವಲ ಎರಡು ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿಯೇ ಪಡೆಯಬಹುದು.

 

ಮೊಟ್ಟ ಮೊದಲಿಗೆ ಭೂಮಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

 

ಗೂಗಲ್ ನಲ್ಲಿ Bhoomi ಎಂದು ಸರ್ಚ್ ಮಾಡಿ

 

 

ಅಥವಾ

ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್

ಮಾಡಿ

 

  Click here

 

 

ಮೊದಲ ಆಪ್ಷನ್ ಮೇಲೆ ಕ್ಲಿಕ್ ಮಾಡಿ

 

ಅಲ್ಲಿ ಮೇಲೆ ಇರುವಂತಹ ಹಲವಾರು ಆಪ್ಷನ್ಗಳಲ್ಲಿ MR ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

 

ಡೈರೆಕ್ಟರ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

 

Click here

 

 

ಅಲ್ಲಿ ಕೇಳುವಂತಹ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಸರ್ವೆ ನಂಬರ್,ಎಲ್ಲಾ ಮಾಹಿತಿಯನ್ನು ನಮೂದಿಸಿ ಫೆಚ್ ಡೀಟೇಲ್ಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

 

 

ಆಗ ಆ ಸರ್ವೇ ನಂಬರ್ ನಲ್ಲಿ ಆದಂತಹ ಬದಲಾವಣೆಗಳ ಕುರಿತು ಹಲವೊಂದಿಷ್ಟು ಆಯ್ಕೆಗಳು ಬರುತ್ತವೆ, ಅದರಲ್ಲಿ ನಿಮಗೆ ಬೇಕಾಗಿರುವಂತಹ ಸೂಕ್ತ ಹಿಸ್ಸಾ ನಂಬರ್ ಮೇಲೆ ಕ್ಲಿಕ್ ಮಾಡಿ.

 

 

ಆಗ ಬಲಗಡೆ ಬಾಕ್ಸ್ ನಲ್ಲಿ ಬರುವಂತಹ PREVIEW ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

 

ಒಂದು ಹೊಸ ಪೇಜ್ ಓಪನ್ ಆಗುತ್ತದೆ, ಆ ಪೇಜ್ ನಲ್ಲಿ ನೀವು ಆ ಹೊಲ ಅಥವಾ ಪಹಣಿಯಲ್ಲಿ ಆದಂತಹ ಬದಲಾವಣೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.

LEAVE A RESPONSE

Your email address will not be published. Required fields are marked *