government Government Scheme scheme.

ಯಾವ ಹೊಲದ ಮೇಲೆ ಎಷ್ಟು ಸಾಲ ತೆಗೆದುಕೊಂಡಿದ್ದೀರಾ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ಯಾವ ಹೊಲದ ಮೇಲೆ ಎಷ್ಟು ಸಾಲ

ತೆಗೆದುಕೊಂಡಿದ್ದೀರಾ ಎಂಬುದನ್ನು

ಮೊಬೈಲ್ ನಲ್ಲಿ ಚೆಕ್ ಮಾಡುವುದು

ಹೇಗೆ?

ಬಾಂಧವರೇ, ಅತಿವೃಷ್ಟಿ-ಅನಾವೃಷ್ಟಿ ಕಾರಣಗಳೆಂದಾಗಿ ಸರಿಯಾದ ಬೆಳೆ ಬೆಳೆಯಲಾಗದೆ ಇಂದು ರೈತ ಸಾಲದಲ್ಲಿದ್ದಾನೆ, ಹಾಗಾದರೆ ಯಾವ ಹೊಲದ ಮೇಲೆ ನಾವು ಎಷ್ಟು ಸಾಲವನ್ನು ತೆಗೆದುಕೊಂಡಿದ್ದೇವೆ ಎಂಬುದನ್ನು ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

 

ಈ ಮಾಹಿತಿ ತಿಳಿದುಕೊಳ್ಳಲು ನಿಮಗೆ ಯಾವ ಯಾವ ಮಾಹಿತಿ ಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳೋಣ.

 

– ಮೊಟ್ಟಮೊದಲು ನೀವು ಯಾರ ಹೊಲದ ಮೇಲೆ ಎಷ್ಟು ಸಾಲವಿದೆ ಎಂದು ಚೆಕ್ ಮಾಡುತ್ತಿದ್ದೀರಾ ಅವರ ಜಿಲ್ಲೆಯ ಮಾಹಿತಿ ನಿಮಗೆ ಬೇಕಾಗುತ್ತದೆ.

 

– ತಾಲೂಕಿನ ಮಾಹಿತಿ

 

– ನಿಮ್ಮ ಗ್ರಾಮ ಯಾವ ಹೋಬಳಿ ಅಡಿ ಬರುತ್ತದೆ ಎಂಬುದರ ಮಾಹಿತಿ ಬೇಕಾಗುತ್ತದೆ

 

– ಗ್ರಾಮ

 

– ನಿಮ್ಮ ಹೊಲದ ಸರ್ವೆ ನಂಬರ್

 

– ಹಿಸ್ಸಾ ನಂಬರ್

 

ಇಷ್ಟರ ಮಾಹಿತಿ ಗೊತ್ತಿದ್ದರೆ ಸಾಕು, ನೀವು ಯಾರ ಹೊಲದ ಮೇಲೆ ಎಷ್ಟು ಸಾಲವಿದೆ ಎಂಬುದನ್ನು ನಿಮ್ಮ ಮೊಬೈಲ್ ನಲ್ಲಿ ಕೇವಲ ಎರಡು ನಿಮಿಷದಲ್ಲಿ ಚೆಕ್ ಮಾಡಬಹುದು.

 

ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

 

– ಮೊಟ್ಟ ಮೊದಲಿಗೆ ಗೂಗಲ್ ನಲ್ಲಿ bhoomi ಎಂದು ಸರ್ಚ್ ಮಾಡಿ.

 

 

 

 

– ನಂತರ ಅಲ್ಲಿ ಕಾಣುವಂತಹ ಮೊದಲನೆಯ ಆಪ್ಷನ್ ಮೇಲೆ ಕ್ಲಿಕ್ ಮಾಡಿ.( Bhoomi online land records )

 

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಒತ್ತಿ –

 

Click here

 

 

– ಮುಂದೆ ಓಪನ್ ಆಗುವಂತಹ ಹೊಸ ಟ್ಯಾಬ್ ನಲ್ಲಿ ಅಲ್ಲಿ ಕೇಳುವಂತಹ ಎಲ್ಲಾ ಮಾಹಿತಿಯನ್ನು ತುಂಬಿ ಫೆಚ್ ಡೀಟೇಲ್ಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

 

 

– ಮುಂದೆ ಅಲ್ಲಿ ನಿಮ್ಮ ಪಹಣಿಯಲ್ಲಿ ಯಾರ ಹೆಸರಿದೆಯೋ ಅವರ ಹೆಸರನ್ನು ತೋರಿಸುತ್ತದೆ, ಹಾಗೂ ಅಲ್ಲಿ ಕೆಳಗಡೆ ನಿಮಗೆ ಇನ್ನೊಂದು ಆಯ್ಕೆ ಇರುತ್ತದೆ view ಎಂದು, ಅದರ ಮೇಲೆ ಕ್ಲಿಕ್ ಮಾಡಿ.

 

– ಆಗ ನಿಮಗೆ ನಿಮ್ಮ ಹೊಲದ ಪಹಣಿ ಕಾಣಿಸುತ್ತದೆ.

 

 

– ಆ ಪಹಣಿಯಲ್ಲಿ 11ನೇ ನಂಬರ್ ಕಾಲಂನಲ್ಲಿ ನಿಮಗೆ ಋಣಗಳು ಎಂಬ ಒಂದು ಕಾಲಮ್ ಇರುತ್ತದೆ, ಅದರಲ್ಲಿ ನೀವು ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲವನ್ನು ತೆಗೆದುಕೊಂಡಿದ್ದೀರಾ ಎಂಬ ಮಾಹಿತಿ ನಿಮಗೆ ಇಲ್ಲಿ ದೊರಕುತ್ತದೆ.

LEAVE A RESPONSE

Your email address will not be published. Required fields are marked *