government Government Scheme scheme.

ಸ್ವಯಂ ಉದ್ಯೋಗಕ್ಕೆ ನೇರ ಸಾಲ ಯೋಜನೆ: ಪ್ರತಿ ಫಲಾನುಭವಿಗೆ ಸಿಗಲಿದೆ ರೂ.1,00,000 ಧನ ಸಹಾಯ

ಸ್ವಯಂ ಉದ್ಯೋಗಕ್ಕೆ ನೇರ ಸಾಲ ಯೋಜನೆ: ಪ್ರತಿ ಫಲಾನುಭವಿಗೆ ಸಿಗಲಿದೆ ರೂ.1,00,000 ಧನ ಸಹಾಯ

ಈ ಯೋಜನೆಯಡಿ ಫಲಾನುಭವಿಗಳಿಗೆ ಸಣ್ಣಪುಟ್ಟ ವ್ಯಾಪಾರದ ಚಟುವಟಿಕೆಗಳಾದ ಪೆಟ್ಟಿ ಅಂಗಡಿ, ಸಿದ್ಧ ಉಡುಪುಗಳ ಅಂಗಡಿ, ಕುರಿ ಮತ್ತು ಮೇಕೆ ಸಾಕಣೆ, ಮೀನುಗಾರಿಕೆ, ಹಣ್ಣು ಮತ್ತು ತರಕಾರಿ ಅಂಗಡಿ, ಟೈಲರಿಂಗ್ ಮುಂತಾದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ನಿಗಮವು ಪ್ರತಿ ಫಲಾನುಭವಿಗೆ ರೂ.1,00,000/- ಧನ ಸಹಾಯವನ್ನು ನೀಡುತ್ತಿದೆ. ಈ ಸಹಾಯದ ಮೊತ್ತವು ರೂ.50,000/- ಸಹಾಯಧನ ಮತ್ತು ರೂ.50,000/- ಸಾಲವನ್ನು ಒಳಗೊಂಡಿರುತ್ತದೆ.

 

ಸ್ವಯಂ ಉದ್ಯೋಗ ಯೋಜನೆಯಡಿ- ದ್ವಿಚಕ್ರ ವಾಹನ ಖರೀದಿಗೆ

ಈ ಯೋಜನೆಯಡಿ ಪರಿಶಿಷ್ಟ ಪಂಗಡದ ಯುವಕ/ಯುವತಿಯರಲ್ಲಿ ಸ್ವ- ಉದ್ಯೋಗವನ್ನು ಉತ್ತೇಜಿಸಲು ವಿದ್ಯುತ್‌ ಚಾಲಿತ ಅಥವಾ ಇತರೆ ದ್ವಿಚಕ್ರ ವಾಹನ ಖರೀದಿಗೆ ಸಹಾಯಧನ ರೂ.50,000/- ಗಳಾಗಿದ್ದು ಉಳಿದ ಮೊತ್ತ ಫಲಾನುಭವಿಯ ವೈಯುಕ್ತಿಕ ವಂತಿಕೆ, ಬ್ಯಾಂಕ್/‌ ಹಣಕಾಸು ಸಂಸ್ಥಗಳ ಮೂಲಕ ಸಾಲವಾಗಿರುತ್ತದೆ.

 

ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ (2.0)

ಈ ಯೋಜನೆಯಡಿ, ಫಲಾನುಭವಿಗಳಿಗೆ ಸಣ್ಣ ಪ್ರಮಾಣದ ಕೈಗಾರಿಕೆ, ಟ್ಯಾಕ್ಸಿ ವಾಹನಗಳ ಖರೀದಿ, ಹಂದಿ, ಕೋಳಿ, ಮೇಕೆ ಸಾಕಣೆ, ವಕೀಲರ ಕಚೇರಿ ಸ್ಥಾಪನೆ, ಬ್ಯೂಟಿ ಪಾರ್ಲರ್, ಸಿದ್ಧ ಉಡುಪುಗಳು, ಡಿಟಿಪಿ ಕೇಂದ್ರ ಇತ್ಯಾದಿ ವಿವಿಧ ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕವಾಗಿ ಸಹಾಯ ಮಾಡಲಾಗುತ್ತದೆ.

 

ಈ ಯೋಜನೆಯನ್ನು ಬ್ಯಾಂಕ್‌ಗಳ ಸಮನ್ವಯದೊಂದಿಗೆ ಜಾರಿಗೊಳಿಸಲಾಗಿದೆ. ಸಹಾಯದ ಗರಿಷ್ಠ ಮೊತ್ತವು ಘಟಕ ವೆಚ್ಚದ 70% ಆಗಿರುತ್ತದೆ, ಗರಿಷ್ಠ ರೂ.2.00 ಲಕ್ಷಗಳು ಮತ್ತು ಘಟಕ ವೆಚ್ಚದ ಉಳಿದ ಭಾಗವನ್ನು ಸಾಲವಾಗಿ ಬ್ಯಾಂಕ್‌ಗಳು ಮಂಜೂರು ಮಾಡುತ್ತವೆ.

 

ಉದ್ಯಮಶೀಲತಾ ಅಭಿವೃದ್ಧಿ ಯೋಜನೆ (3.5)

ಈ ಯೋಜನೆಯನ್ನು ಬ್ಯಾಂಕ್‌ಗಳ ಸಹಯೋಗದಲ್ಲಿ ಜಾರಿಗೊಳಿಸಲಾಗಿದೆ. ನಿರುದ್ಯೋಗಿ ಪರಿಶಿಷ್ಟ ಪಂಗಡದ ಯುವಕರಿಗೆ ಸರಕು ಸಾಗಣೆ ವಾಹನವನ್ನು ಪಡೆಯಲು ಹಣಕಾಸಿನ ನೆರವು ನೀಡುವ ಮೂಲಕ ಯೋಜನೆಯಡಿಯಲ್ಲಿ ಸಹಾಯ ಮಾಡಲಾಗುತ್ತದೆ.

 

ಸಹಾಯದ ಗರಿಷ್ಠ ಮೊತ್ತವು ಘಟಕ ವೆಚ್ಚದ 70% ಆಗಿರುತ್ತದೆ, ಗರಿಷ್ಠ ರೂ.3.50 ಲಕ್ಷಗಳು ಮತ್ತು ಘಟಕ ವೆಚ್ಚದ ಉಳಿದ ಭಾಗವನ್ನು ಸಾಲವಾಗಿ ಬ್ಯಾಂಕ್‌ಗಳು ಮಂಜೂರು ಮಾಡುತ್ತವೆ.

 

ನಿಯಮಗಳು:

ಅರ್ಜಿದಾರರು ಆಯ್ಕೆ ಸಮಿತಿಯಿಂದ ಆಯ್ಕೆಯಾಗಿರಬೇಕು.

ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದವರಿಗೆ ರೂ.1,50,000/- ಹಾಗೂ ನಗರ ಪ್ರದೇಶದವರಿಗೆ ರೂ.2,00,000/- ಗಳ ಮಿತಿಯೊಳಗಿರಬೇಕು.

ಅರ್ಜಿದಾರರು 21 ವರ್ಷದಿಂದ 50 ವರ್ಷದವರೆಗಿನ ವಯೋಮಾನದವರಾಗಿರಬೇಕು.

ಬ್ಯಾಂಕಿನಿಂದ ಮಂಜೂರಾಗುವ ಘಟಕಗಳಿಗೆ ಮಾತ್ರ ಸಹಾಯಧನ ಮಂಜೂರು ಮಾಡಲಾಗುವುದು.

ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದುಪಡಿಸಲಾಗುತ್ತದೆ.

ಫಲನುಭವಿಯ ಹೆಸರಿನಲ್ಲಿ ಸಹಾಯಧನವನ್ನು ನೇರವಾಗಿ ಬ್ಯಾಂಕಿಗೆ ಬಿಡುಗಡೆ ಮಾಡಲಾಗುವುದು

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Click here 

LEAVE A RESPONSE

Your email address will not be published. Required fields are marked *