governament Government Scheme scheme.

ಜನವರಿ 31ರಂದು ರೈತರ ಖಾತೆಗೆ ಹಣ ಜಮೆ

ಜನವರಿ 31ರಂದು ರೈತರ ಖಾತೆಗೆ

ಹಣ ಜಮೆ: ಯಾರ ಯಾರ

ಖಾತೆಗಳಿಗೆ ಜಮಯಾಗಲಿದೆ?

 

ಬಾಂಧವರೇ, ಜನವರಿ 31ರಂದು ರೈತರ ಖಾತೆಗಳಿಗೆ ಹಣ ಜಮಯಾಗಲಿದೆ, ಪ್ರತಿಯೊಬ್ಬ ರೈತನಿಗೆ 250ಗಳಿಂದ 1250 ಗಳು ವರೆಗೆ ಹಣ ಜಮಯಾಗುತ್ತದೆ, ಹಾಗಾದರೆ ಯಾರ ಯಾರ ಖಾತೆಗಳಿಗೆ ಜಮಯಾಗಲಿದೆ ಎಂಬುದನ್ನು ಇಲ್ಲಿ ನೋಡೋಣ ಬನ್ನಿ.

 

ಯಾವ ಯೋಜನೆ?

 

ಕೃಷಿ ಯಾಂತ್ರೀಕರಣವನ್ನು ಪ್ರೋತ್ಸಾಹಿಸಲು ರೈತರಿಗೆ ನೆರವಾಗಲು ಡೀಸೆಲ್ ಸಬ್ಸಿಡಿ ನೀಡುವ ಈ ಯೋಜನೆಯ ರೈತ ಶಕ್ತಿ ಯೋಜನೆ.

ಈ ಯೋಜನೆಯಡಿ ಪ್ರತಿಯೊಬ್ಬ ರೈತನಿಗೆ 250ಗಳಿಂದ 1250ಗಳವರೆಗೆ ರೈತರ ಖಾತೆಗೆ ನೇರವಾಗಿ ಜಮೆಯಾಗಲಿದೆ.

ಒಬ್ಬ ರೈತನಿಗೆ ಒಂದು ಎಕರೆಗೆ 250 ರೂಪಾಯಿ ಹಾಗೂ ಗರಿಷ್ಠ ಒಬ್ಬ ರೈತನಿಗೆ 5 ಎಕರೆವರೆಗೆ ಅಂದರೆ 1250 ರೂಪಾಯಿಗಳನ್ನು ರೈತ ಶಕ್ತಿ ಯೋಜನೆ ಅಡಿಯಲ್ಲಿ ಜಮೆ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?

ಈ ಯೋಜನೆ ಅಡಿ ರೈತರು ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸುವ ಹಾಗಿಲ್ಲ,ಫೂಟ್ಸ್ ಆಪ್ ಮೂಲಕ ರೈತರ ದತ್ತಾಂಶಗಳು ಸಂಗ್ರಹವಾಗಿದ್ದು, ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ರೈತ ಶಕ್ತಿ ಸಹಾಯಧನದ ಮೊತ್ತ ಜಮೆಯಾಗಲಿದೆ.

ಫ್ರೂಟ್ಸ್ ತಂತ್ರಾಂಶದಲ್ಲಿ ನಿಮ್ಮ ಜಮೀನಿಗೆ ಯಾವ ಯಾವ ಹೊಲಗಳು ಲಿಂಕ್ ಆಗಿವೆ ಎಂಬುದನ್ನು ಚೆಕ್ ಮಾಡುವುದು ಹೇಗೆ?

ಮೊಟ್ಟಮೊದಲಿಗೆ ಫ್ರೂಟ್ಸ್ ತಂತ್ರಾಂಶಕ್ಕೆ ಭೇಟಿ ನೀಡಿ.

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ-

Click here

 

 

ಆಗ ಅಲ್ಲಿ ಬಲಗಡೆ ಮೇಲಿನ ಕಾರ್ನರ್ ನಲ್ಲಿ ಕಾಣುವಂತಹ ಸಿಟಿಜನ್ ಲಾಗಿನ್ ಮೇಲೆ ಕ್ಲಿಕ್ ಮಾಡಿ.

ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಗೂ ಪಾಸ್ವರ್ಡ್ ಹಾಕುವ ಮೂಲಕ ನೀವು ನಿಮ್ಮ ಖಾತೆಗೆ ಲಾಗಿನ್ ಆಗಿ ನಿಮ್ಮ ಆಧಾರದೊಂದಿಗೆ ಯಾವ ಯಾವ ಹೊಲದ ಸರ್ವೆ ನಂಬರ್ ಜೋಡಣೆಯಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ನೀವೇನಾದರೂ ಫ್ರೂಟ್ಸ್ ತಂತ್ರಾಂಶವನ್ನು ಮೊಬೈಲ್ ನಲ್ಲಿ ಮೊದಲ ಬಾರಿ ಬಳಸುತ್ತಿದ್ದರೆ, ಅಲ್ಲಿರುವಂತಹ ಸಿಟಿಜನ್ ರಿಜಿಸ್ಟ್ರೇಷನ್ ನಂಬರ್ ಮೂಲಕ ನೋಂದಣಿ ಮಾಡಿಕೊಂಡು ಆನಂತರ ವೀಕ್ಷಿಸಬಹುದಾಗಿದೆ.

ಫ್ರೂಟ್ಸ್ ತಂತ್ರಾಂಶದೊಂದಿಗೆ ಜೋಡಣೆಯಾಗಿರುವ ರೈತರ ಖಾತೆಗಳಿಗೆ ಮಾತ್ರ ಈ ಯೋಜನೆಯ ಸಹಾಯಧನ ದೊರಕಲಿದ್ದು, ಇನ್ನೂ ನೋಂದಣಿ ಮಾಡಿದ ರೈತರು ಆದಷ್ಟು ಬೇಗ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಗೆ ಭೇಟಿ ನೀಡಿ ಫ್ರೂಟ್ಸ್ ಐಡಿ ಮಾಡಿಸಬೇಕಾಗಿ ವಿನಂತಿ.

LEAVE A RESPONSE

Your email address will not be published. Required fields are marked *